
ಕನ್ನಡದ ನಟಿಯರಾದ ಶೃತಿ ಹರಿಹರನ್, ಪ್ರಜ್ನ, ಶ್ರದ್ಧಾ ಶ್ರೀನಾಥ್, ಮೇಘನ ಗಾಂವ್ಕರ್, ಸಂಗೀತ ಭಟ್, ಸಂಯುಕ್ತ ಹೆಗ್ಡೆ ಇವರುಗಳ ಹೆಸರುಗಳು ಕೇಳ್ತಿದ್ದಂತೆ ಅರೆ ಇವರೆಲ್ಲ ತುಂಬಾನೆ ವಿಭಿನ್ನ. ಈ ಜನರೇಷನ್ನ ಹುಡುಗಿಯರು. ಇವ್ರು ತುಂಬಾ ಬೋಲ್ಡ್, ಇವ್ರ ಮನಸ್ಥಿತಿಯೇ ಡಿಫರೆಂಟ್. ಹೀಗೆಲ್ಲ ಮಾತಾಡೊರು ಬಹಳ ಮಂದಿ ಇದ್ದಾರೆ. ಹೌದು ಇವ್ರು ತುಂಬಾನೆ ವಿಭಿನ್ನ ವಿಶೇಷ. ಯಾಕಂದ್ರೆ ಇವ್ರು ಮಾಡ್ತಿರೋ ಕೆಲಸ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಿ.
ನಟಿ ಶಾನ್ವಿ ಶ್ರೀವಾತ್ಸವ್, ಹ್ಯಾಪಿ ನ್ಯೂ ಇಯರ್ ಬೆಡಗಿ ರಾಜ್ಶ್ರೀ ಪೊನ್ನಪ್ಪ, ಕೆಂಡಸಂಪಿಗೆಯ ಚೆಲುವೆ ಮಾನ್ವಿತ, ಹಿತಾ ಚಂದ್ರಶೇಖರ್, ಕಾವ್ಯ ಶೆಟ್ಟಿ, ಸಚಿನಾ ಹೆಗ್ಗಾರ್ ಹಾಗೂ ನಿಶಾರಾ ಕಿರಣ್ ಸೇರದಂತೆ ಒಟ್ಟು 18 ನಾಯಕಿಯರು ಒಟ್ಟಿಗೆ ಸೇರಿ ಈ ಭಾನುವಾರ ಒಂದೊಳ್ಳೆ ಕೆಲಸ ಮಾಡ್ತಿದ್ದಾರೆ. `ಜೆ.ಪಿ ಸರ್ವಿರ್ಸ್ ಫೌಂಡೇಷನ್` ಅಡಿಯಲ್ಲಿ `ವ್ಯಾನಿಡಿ ಟ್ರಂಕ್ ಸೇಲ್`, ಎಂಬ ಕಾರ್ಯಕ್ರಮ ಮಾಡ್ತಿದ್ದಾರೆ. ಇದು ಹೆಣ್ಣು ಮಕ್ಕಳಿಗಾಗಿ ಹೆಣ್ಮಕ್ಳೆ ಮಾಡ್ತಿರೋ ಕಾರ್ಯಕ್ರಮ. ತಮ್ಮ `ವಾರ್ಡ್ ರೋಬ್ `ನಲ್ಲಿರೋ ಬಟ್ಟೆಗಳನ್ನ, ಚಪ್ಪಲಿ ಶೂ ಎಲ್ಲವನ್ನೂ ಸೇಲ್ ಮಾಡ್ತಿದ್ದಾರೆ.
`ಜೆ.ಪಿ ಸರ್ವಿಸ್ ಪೌಂಡೇಷನ್` ನಿಂದ ನಿರಾಶ್ರಿತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಜೀವನಕ್ಕಾ ಆ ಹಣವನ್ನು ಕೊಡಲಿದ್ದಾರೆ. ಈ ಮೂಲಕ ನಮ್ ಹೆಣ್ಮಕ್ಳು ಚಿತ್ರರಂಗದಲ್ಲೆ ಮಾದರಿಯಾಗ್ತಿದ್ದಾರೆ. ಇದೇ ಭಾನುವಾರ 12ನೇ ದಿನಾಂಕ, ಬೆಂಗಳೂರಿನ ಬಿಹೈವ್` ಅನ್ನೋ ಜಾಗದಲ್ಲಿ ಬೆಳಿಗ್ಗೆ 11.30ರಿಂದ ಸಂಜೆ 5 ಗಂಟೆವರೆಗೂ ಈ ಸೇಲ್ ಇರುತ್ತೆ. ಹೀರೋಯಿನ್ಸ್ ಚಪ್ಪಲಿ ಬಳೆ ಓಲೆ ಬ್ಯಾಗು ಈತರ ನಿಮಗೆ ಏನೇನ್ ಸ್ಪೆಷಲ್ ಅನ್ನಿಸುತ್ತೊ ಎಲ್ಲವನ್ನೂ ಕಡಿಮೆ ಬೆಲೆಗೆ ತಗೋಬಹುದು. ಮಾರಾಟ ಮಾಡೋಕೆ ನಟೀಯರೆ ಮುಂದಿನ ಸಾಲಲ್ಲಿರ್ತಾರೆ. ಏನಂತೀರ ಹೆಣ್ಮಕ್ಳ ಈ ಆಲೋಚನೆಗೆ ಸೈ ಅನ್ನಿ ಮತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.