ಈ ಚಿತ್ರಕ್ಕೆ ನಿರ್ದೇಶಕನೆ ಇಲ್ಲ !

Published : Dec 14, 2017, 09:46 PM ISTUpdated : Apr 11, 2018, 12:45 PM IST
ಈ ಚಿತ್ರಕ್ಕೆ ನಿರ್ದೇಶಕನೆ ಇಲ್ಲ !

ಸಾರಾಂಶ

ಅದು ನಮ್ಮ ಕನಸಿನ ಸಿನಿಮಾ ಆಗಲ್ಲ. ಹೀಗಾಗಿ ಛಾಯಾಗ್ರಾಹಕರಿಂದ ಹಿಡಿದು ನಾಯಕ, ನಾಯಕಿ, ನಿರ್ಮಾಪಕರು ಒಟ್ಟಾಗಿ ಕೂತು ಮಾತನಾಡಿ ನಿರ್ದೇಶಕರನ್ನೇ ಇಟ್ಟುಕೊಳ್ಳದೆ ಸಿನಿಮಾ ಮಾಡಿದರೆ ಹೇಗೆ? ಎನ್ನುವ ಪ್ರಶ್ನೆ ಬಂದ ಕ್ಯಾಮೆರಾ ಮುಂದೆ ಹೋಗುವ ಮುನ್ನ ಚಿತ್ರದ ಪ್ರತಿಯೊಂದು ದೃಶ್ಯದ ಬಗ್ಗೆಯೂ ಚರ್ಚೆ ಮಾಡಿ ಚಿತ್ರೀಕರಣಕ್ಕೆ ಹೋಗಿದ್ದರಿಂದ ನಿರ್ದೇಶಕನ ಅಗತ್ಯಬರಲಿಲ್ಲ ಎಂಬುದು ಚಿತ್ರತಂಡದ ಒಕ್ಕೊರಳಿನ ಮಾತು.

ಸಾಮಾನ್ಯವಾಗಿ ನಿರ್ದೇಶಕನಿಲ್ಲದೆ ಒಂದು ಸಿನಿಮಾ ಆಗುವುದು ಕಷ್ಟ. ಆದರೆ ಇಲ್ಲೊಂದು ಚಿತ್ರತಂಡ ನಿರ್ದೇಶಕನೇ ಇಲ್ಲದೆ ಸಿನಿಮಾ ಮಾಡಿದೆ. ಆ ಚಿತ್ರದ ಹೆಸರು ‘ಸಂಜೀವ’. ಅದಕ್ಕೆ ‘ನನ್ ಜೀವ’ ಎನ್ನುವ ಟ್ಯಾಗ್‌ಲೈನ್ ಬೇರೆ ಇದೆ. ಇದರ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ.

ಇತ್ತೀಚೆಗಷ್ಟೆ ಚಿತ್ರದ ಆಡಿಯೋ ಬಿಡುಗಡೆ ಕೂಡ ಆಯಿತು. ಆ ನೆಪದಲ್ಲಿ ಮಾಧ್ಯಮಗಳ ಮುಂದೆ ಬಂದ ಚಿತ್ರ ತಂಡವನ್ನು ‘ನಿರ್ದೇಶಕರು ಯಾರು?’ ಎನ್ನುವ ಪ್ರಶ್ನೆ ಸಹಜವಾಗಿ ಕೇಳಲಾಯಿತು. ಅದರ ನಿರ್ದೇಶಕರು ನಾವೆಲ್ಲರೂ ನಿರ್ದೇಶಕರೇ.

ಇದು ಒಬ್ಬ ನಿರ್ದೇಶಕನ ಸಿನಿಮಾ ಅಲ್ಲ. ಇಡೀ ತಂಡದ ಸಿನಿಮಾ ಎಂದರು. ಅಲ್ಲಿಗೆ ನಿರ್ದೇಶಕ ಇಲ್ಲದೆ ಸಿನಿಮಾ ಮುಗಿಸಿಕೊಂಡು ಬರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ‘ಸಂಜೀವ’ ಚಿತ್ರತಂಡ. ಚಿತ್ರಕ್ಕೆ ಇಂಥವರೇ ನಿರ್ದೇಶಕ ಅಂತಿದ್ರೆ ಅವರು ಅವರ ಕನಸನ್ನು ತೆರೆ ಮೇಲೆ ತರುತ್ತಾರೆ. ಅದು ನಮ್ಮ ಕನಸಿನ ಸಿನಿಮಾ ಆಗಲ್ಲ. ಹೀಗಾಗಿ ಛಾಯಾಗ್ರಾಹಕರಿಂದ ಹಿಡಿದು ನಾಯಕ, ನಾಯಕಿ, ನಿರ್ಮಾಪಕರು ಒಟ್ಟಾಗಿ ಕೂತು ಮಾತನಾಡಿ ನಿರ್ದೇಶಕರನ್ನೇ ಇಟ್ಟುಕೊಳ್ಳದೆ ಸಿನಿಮಾ ಮಾಡಿದರೆ ಹೇಗೆ? ಎನ್ನುವ ಪ್ರಶ್ನೆ ಬಂದ ಕ್ಯಾಮೆರಾ ಮುಂದೆ ಹೋಗುವ ಮುನ್ನ ಚಿತ್ರದ ಪ್ರತಿಯೊಂದು ದೃಶ್ಯದ ಬಗ್ಗೆಯೂ ಚರ್ಚೆ ಮಾಡಿ ಚಿತ್ರೀಕರಣಕ್ಕೆ ಹೋಗಿದ್ದರಿಂದ ನಿರ್ದೇಶಕನ ಅಗತ್ಯಬರಲಿಲ್ಲ ಎಂಬುದು ಚಿತ್ರತಂಡದ ಒಕ್ಕೊರಳಿನ ಮಾತು.

ಈ ಚಿತ್ರಕ್ಕೆ ನಿರ್ಮಾಪಕರಲ್ಲೊಬ್ಬರಾದ ಎಸ್ ಮೋಹನ್ ಅವರೇ ಕತೆ ಬರೆದಿರುವುದು. ಹೀಗೆ ನಿರ್ದೇಶಕನೇ ಇಲ್ಲದೆ ಚಿತ್ರಕ್ಕೆ ಚೇತನ್ ಗಂಧರ್ವ ನಾಯಕ, ಲೇಖಾ ಚಂದ್ರ ನಾಯಕಿ. ಚಂದನ್ ಶೆಟ್ಟಿ ಸಂಗೀತ ಇದೆ. ವಿಶೇಷ ಅಂದರೆ ಡೈರೆಕ್ಟರ್ ಇಲ್ಲದಿರುವ ಈ ಚಿತ್ರದಲ್ಲಿ ನಟರಾದ ದೇವ ರಾಜ್, ಯೋಗೀಶ್, ಶ್ರೀನಗರ ಕಿಟ್ಟಿ, ಶುಭ ಪೂಂಜಾ, ಚಿಕ್ಕಣ್ಣ, ಸಾಧು ಕೋಕಿಲರಂತಹ ದೊಡ್ಡ ಕಲಾವಿದರು ನಟಿಸಿದ್ದಾರೆ. ಹಾಗಾದರೆ ನಿರ್ದೇ ಶಕನಿಲ್ಲದ ಸಿನಿಮಾ ಹೇಗಿರಬಹುದು ಎನ್ನುವ ಕುತೂಹಲ ಇದ್ದವರು ಸಿನಿಮಾ ತೆರೆಗೆ ಬರುವ ತನಕ ಕಾಯಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!