
ಈ ನಟಿಯ ಹೆಸರು ಐಶ್ವರ್ಯ. ‘ಪೇಟೆ ಹುಡ್ಗೀರು ಹಳ್ಳಿಗ್ ಬಂದ್ರು’ ಹೆಸರಿನ ರಿಯಾಲಿಟಿ ಶೋ ಮೂಲಕವೇ ಮನೆ ಮಾತಾದ ಈ ಬೆಡಗಿ ಅದೇ ಜನಪ್ರಿಯತೆಯಲ್ಲಿ ಬೆಳ್ಳಿತೆರೆಗೂ ಕಾಲಿಟ್ಟರು. ಎಚ್.ಡಿ. ಕೋಟೆಯ ಆದಿವಾಸಿ ಯುವಕ ರಾಜೇಶ್ ಅಭಿನಯದ ‘ಜಂಗಲ್ ಜಾಕಿ ’ಹೆಸರಿನ ಚಿತ್ರಕ್ಕೆ ನಾಯಕಿ ಆಗಿ ನಟಿಸಿದರು.
ಆ ಚಿತ್ರದ ನಂತರ ಗಾಂಧಿನಗರಕ್ಕೆ ಅಪರೂಪವೇ ಆಗಿದ್ದ ಐಶ್ವರ್ಯ, ಈಗ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಹಾಟ್ ಚಿತ್ರಗಳು. ಕನ್ನಡದಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಪ್ರಯೋಗಾತ್ಮಕ ಚಿತ್ರಗಳ ಸಾಲಿಗೆ ಸೇರ್ಪಡೆ ಆಗಿದ್ದು ‘ಸಿ 3’ ಹೆಸರಿನ ಚಿತ್ರ. ಕೃಷ್ಣಕುಮಾರ್. ಬಿ ಹೊಂಗನೂರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರ ಕುತೂಹಲ ಮೂಡಿಸಿದ್ದು ಅದರ ಕತೆ ಮತ್ತು ಪಾತ್ರವರ್ಗದ ಮೂಲಕ. ಒಂದೇ ರಾತ್ರಿಯಲ್ಲಿ ನಡೆಯುವ ಕತೆ. ಆ ಕತೆಯಲ್ಲಿ ಇರುವುದು ಎರಡೇ ಪಾತ್ರ. ನಾಯಕ ಮತ್ತು ನಾಯಕಿ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಖ್ಯಾತಿಯ ವಿಜಯಕುಮಾರ್ ನಾಯಕ. ಐಶ್ವರ್ಯ ನಾಯಕಿ. ಆ ಚಿತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ‘ಕಚೇರಿಯಲ್ಲಿ ಇಡೀ ರಾತ್ರಿ ನಾಯಕನೊಬ್ಬನೇ ಇರಬೇಕಾದ ಸಂದರ್ಭ. ಅಲ್ಲಿ ಕೆಲವು ವಿಚಿತ್ರ ಘಟನೆಗಳು ನಡೆಯುತ್ತವೆ. ನಾಯಕ ಅವುಗಳನ್ನು ಎದುರಿಸಿ ಹೇಗೆ ಹೊರ ಬರುತ್ತಾನೆ ಎನ್ನುವುದು ಈ ಕತೆಯ ಒನ್‌ಲೈನ್ ಸ್ಟೋರಿ’ಎನ್ನುತ್ತಾರೆ ನಿರ್ದೇಶಕ ಕೃಷ್ಣ ಕುಮಾರ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.