
ಮುಂಬೈ (ಫೆ. 15): ಬಾಲಿವುಡ್ ಮೋಸ್ಟ್ ಸೂಪರ್ ಹಿಟ್ ಕಪಲ್ ದೀಪಿಕಾ- ರಣವೀರ್ ಮದುವೆಯ ನಂತರ ಮೊದಲ ವ್ಯಾಲಂಟೈನ್ಸ್ ಡೇ ಆಚರಿಸಿಕೊಂಡರು.
ದೊರೆತ ಪ್ರೀತಿಗಷ್ಟೇ ದಿನವೇ?: ಮರಳಿ ಬರುವೆನೆಂದವನಿಗೆ ಕಾದಿರುವೆ!
6 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದ ದೀಪ್ ವೀರ್ ಕಳೆದ ವರ್ಷ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೀವು ಯಾವತ್ತಾದ್ರೂ ನಿಮ್ಮ ಪತ್ನಿಗೆ ಮೋಸ ಮಾಡಿದ್ದೀರಾ ಎಂದು ಕೇಳಿದಾಗ ರಣವೀರ್ ಬಹಳ ಚೆನ್ನಾಗಿ ಉತ್ತರಿಸಿದ್ದಾರೆ.
ಪ್ರೇಮ ದಿನ ಪ್ರೇಮಿಗಳಿಗಾ, ದಂಪತಿಗಳಿಗಾ?
‘ದೀಪಿಕಾ ನನಗೆ ಒಳ್ಳೆಯ ಸಂಗಾತಿ. ನಾವಿಬ್ಬರು ಅನ್ನೋನ್ಯವಾಗಿದ್ದೇವೆ. ದೀಪಿಕಾ ನನ್ನನ್ನು ಆಕರ್ಷಿಸಿದಷ್ಟು ಮತ್ಯಾರೂ ನನ್ನನ್ನು ಆಕರ್ಷಿಸಿಲ್ಲ. ದೀಪಿಕಾ ಬಿಟ್ಟು ಬೇರೆ ಯಾರ ಮೇಲೂ ಪ್ರೀತಿಯೇ ಹುಟ್ಟಿಲ್ಲ’ ಎಂದು ಹೇಳಿದ್ದಾರೆ.
'ನಮ್ಮಿಬ್ಬರ ನಡುವೆ ಏನೂ ಸಮಸ್ಯೆ ಇಲ್ಲ. ನಾವು ಮನೆಯಲ್ಲಿ ಒಟ್ಟಿಗೆ ಇದ್ದಾಗ ಆ ಕ್ಷಣವನ್ನು ಎಂಜಾಯ್ ಮಾಡುತ್ತೇವೆ. ನಾವು ಬೆಸ್ಟ್ ಫ್ರೆಂಡ್ಸ್. ನಾವು ಒಂದೇ ಕ್ಷೇತ್ರದಲ್ಲಿರುವುದರಿಂದ ಮಾತನಾಡಲು, ಚರ್ಚಿಸಲು ಬಹಳಷ್ಟು ವಿಷಯಗಳಿರುತ್ತವೆ' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.