
ಬಿಗ್ ಬಾಸ್ ಆರಂಭವಾಗಿ ಮೊದಲ ಭಾನುವಾರ ವಿಲನ್ ತಂಡ ಭೇಟಿ ನೀಡಿದ್ದು ವಿಶೇಷವಾಗಿತ್ತು. ಮನೆಯೊಳಗೆ ಪ್ರೇಮ್ ಮುಂಬಾಗಿಲ ಮೂಲಕ ಎಂಟ್ರಿ ಕೊಟ್ಟರೆ ಶಿವರಾಜ್ ಕುಮಾರ್ ಕನ್ ಫೆಶನ್ ರೂಂ ನಿಂದ ಬಂದರು.
ಬಿಗ್ ಬಾಸ್ ಮನೆಗೆ ಮೊದಲಿಗೆ ಪ್ರವೇಶಿಸಿದ ನಿರ್ದೇಶಕ ಪ್ರೇಮ್ ಮನೆಯ ಎಲ್ಲ ಸದಸ್ಯರನ್ನು ಪರಿಚಯ ಮಾಡಿಕೊಂಡರು. ಮನೆಯ ಸದಸ್ಯರು ಸಂಭ್ರಮದಿಂದ ಪ್ರೇಮ್ ಅವರನ್ನು ಬರಮಾಡಿಕೊಂಡಿರು. ಶಿವಣ್ಣ ಮನೆಯ ಸದಸ್ಯರಿಗೆ ಹಂಚಲು ಸಿಹಿ ತಂದಿದ್ದೇನೆ, ಬಿಗ್ ಬಾಸ್ ಆದೇಶದ ಬಳಿಕ ಅದನ್ನು ತೆರೆಯುತ್ತೇನೆ ಎಂದರು
ಶಿವಣ್ಣ ಬಳಿ ಊಟಕ್ಕೆ ಮನವಿ: ಗೋದಲದಿಂದ ಲಕ್ಸುರಿ ಬಜೆಟ್ ಪಾಯಿಂಟ್ ಗಳು ಇದ್ದರೂ ರೇಶನ್ ಖರೀದಿ ಮಾಡಲು ಸಾಧ್ಯವಾಗಿಲ್ಲ. ನೀವೆ ಏನಾದರೂ ಮಾಡಬೇಕು ಎಂದು ಸ್ಪರ್ಧಿಗಳು ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಶಿವಣ್ಣ ಹೊರ ಬಂದ ಮೇಲೆ ಸುದೀಪ್ ಬಳಿ ಚಿಕನ್ ಬಿರಿಯಾನಿ, ಮಟನ್ ಫ್ರೈ, ಡೆಸರ್ಸ್ಟ್, ವೆಜ್ ಐಟಂ ಕಳುಹಿಸುವ ಮಾತು ಉಳಿಸಿಕೊಂಡರು.
ಡ್ಯಾನ್ಸ್: ಪ್ರೇಮ್ ಮತ್ತು ಶಿವಣ್ಣ ಒಂದುಗೂಡಿದ ಸ್ಪರ್ಧಿಗಳು ವಿಲನ್ ಹಾಡಿಗೆ ಒಟ್ಟಿಗೆ ನರ್ತಿಸಿದರು. ರಾವಣ... ಹಾಡು ಮೊಳಗಿತು. ಮನೆಯ ಬಗ್ಗೆ ಇಬ್ಬರು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದರು.
ಗೀತಾ ಅಂದರೆ ಭಯ: ಶಿವರಾಜ್ ಕುಮಾರ್ ಗೆ ಪತ್ನಿ ಗೀತಾ ಅವರನ್ನು ಕಂಡರೆ ಭಯವಂತೆ. ವೇದಿಕೆಯಲ್ಲಿ ಸುದೀಪ್ ಸರಣಿ ಪ್ರಶ್ನೆಗಳನ್ನು ಕೇಳಿದರೆ ಶಿವಣ್ಣ ವಿಲನ್ ಡೈಲಾಗ್ ಹೇಳುತ್ತಲೇ ಎಲ್ಲದಕ್ಕೂ ಉತ್ತರ ನೀಡಿದರು. ಕಾಲ್ ಶೀಟ್ ಕೊಡುವ ವಿಚಾರ, ಬಾಸ್-ಬಿಗ್ ಬಾಸ್, ಅಭಿನಯ ಚಕ್ರವರ್ತಿ, ಚಕ್ರವರ್ತಿಗಳ ಚಕ್ರವರ್ತಿ ಹೀಗೆ ಹತ್ತು ಹಲವು ವಿಚಾರಗಳು ಚರ್ಚೆಯಾದವು. ಒಟ್ಟಿನಲ್ಲಿ ಸಂಡೆಯ ಎಪಿಸೋಡ್ ಸಖತ್ ಮಜಾ ನೀಡಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.