ಲೈಂಗಿಕ ಶೋಷಣೆ ಸಾಂಕ್ರಾಮಿಕ ರೋಗಕ್ಕೆ ಸ್ವರಾ ಪರಿಹಾರ

By Web DeskFirst Published Oct 28, 2018, 3:53 PM IST
Highlights

ಮೀ ಟೂ ಅಭಿಯಾನಕ್ಕೆ ಸಪೋರ್ಟ್ ಮಾಡಿಕೊಂಡೆ ಬಂದಿರುವ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಲೈಂಗಿಕ ದೌರ್ಜ್ಯನ್ಯ ವಿಚಾರವನ್ನು ತಮ್ಮದೇ ರೀತಿ ವಿಶ್ಲೇಷಣೆ ಮಾಡಿದ್ದಾರೆ. ಅಲ್ಲದೆ ಪರಿಹಾರ ಸೂತ್ರವೊಂದನ್ನು ನೀಡಿದ್ದಾರೆ.

ಮುಂಬೈ(ಅ.28) ಮೀ ಟೂ ದೌರ್ಜನ್ಯಕ್ಕೆ ಸ್ವರಾ ಭಾಸ್ಕರ್ ಪರಿಹಾರ ಸೂತ್ರ ನೀಡಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎನ್ನುವುದು ಒಂದು ರೀತಿಯ ಸಾಂಕ್ರಾಮಿಕ ರೋಗವಿದ್ದಂತೆ ಎಂದಿರುವ ಸ್ವರಾ ಟಿವಿ ಮತ್ತು ಸಿನಿಮಾ ಮೂಲಕವೇ ಜಾಗೃತಿ ಮೂಡಿಸಬೇಕು ಎಂದಿದ್ದಾರೆ.

ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

ಸೈನ್ ಮತ್ತು ಟಿವಿ ಕಲಾವಿದರ ಅಸೋಸಿಯೇಷನ್ [ಸಿಐಎನ್ ಟಿಎಎ] ಲೈಂಗಿಕ ದೌರ್ಜನ್ಯ ತಡೆ ಸಂಬಂಧ ಸಮಿತಿಯೊಂದನ್ನು ರಚನೆ ಮಾಡುತ್ತೇವೆ. ಸ್ವರಾ ಭಾಸ್ಕರ್, ರೇಣುಕಾ ಶಹಾನೆ, ರವೀನಾ ಟಂಡನ್ ಅಂಥವರು ಸಮಿತಿಯಲ್ಲಿರುತ್ತಾರೆ ಎಂದು ಹೇಳಿದೆ.

ಮೀ ಟೂ ವಿಚಾರಕ್ಕೆ ಸಂಬಂಧಿಸಿ ಸ್ವರಾ ಮೊದಲಿನಿಂದಲೂ ಬೆಂಬಲ ನೀಡಿಕೊಂಡೆ ಬಂದಿದ್ದಾರೆ. ಆಕೆ ಅಭಿನಯದ ಹಿಂದಿ ಮತ್ತು ಮರಾಠಿ ವೆಬ್ ಸೀರಿಸ್ ಗಳು ಬಿಡುಗಡೆಗೆ ಸಿದ್ಧವಾಗಿವೆ.

click me!