
ಕನ್ನಡ ಚಿತ್ರರಂಗದ ಮಟ್ಟಿಗೆ ಇದು ದಾಖಲೆ ಮಟ್ಟದ ಗಳಿಕೆ. ಆರಂಭಿಕ ದಿನಗಳಲ್ಲಿ ಸ್ಟಾರ್ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದರೂ ಈ ಪ್ರಮಾಣದಲ್ಲಿ ಬಾಕ್ಸಾಫೀಸ್ನಲ್ಲಿ ಸುದ್ದಿ ಮಾಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಆದರೆ ಚಿತ್ರಮಂದಿರದ ಮೂಲಗಳು ಬೇರೆ ಲೆಕ್ಕವನ್ನೇ ನೀಡುತ್ತಿವೆ. ವಿವಿಧ ಮೂಲಗಳಿಂದ ಬಂದ ಆ ಲೆಕ್ಕಾಚಾರ 10 ಕೋಟಿಯೂ ದಾಟಿಲ್ಲ. ಲೆಕ್ಕಾಚಾರ ತಾಳೆಯಾಗದಿರುವುದರಿಂದ ಇದೀಗ ಗಾಂಧಿನಗರದಲ್ಲಿ ವಿಲನ್ ಕುರಿತು ಭಾರಿ ಅಚ್ಚರಿ ವ್ಯಕ್ತವಾಗುತ್ತಿದೆ.
ರಾಜ್ಯದ ಆಚೆ ಅಹಮದಾಬಾದ್, ಪೂನಾ, ನೋಯ್ಡಾ, ತಿರುವನಂತಪುರ ಸೇರಿ ದೇಶದ ಹಲವು ಕಡೆಗಳಲ್ಲೂ ‘ದಿ ವಿಲನ್’ ತೆರೆ ಕಂಡಿದೆ. ಒಂದೆಡೆ ಕಲೆಕ್ಷನ್ ಲೆಕ್ಕಾಚಾರ ಇಷ್ಟಾದರೆ, ಮತ್ತೊಂದೆಡೆ ಚಿತ್ರಮಂದಿರಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಶುಕ್ರವಾರ ಮತ್ತೆ ರಾಜ್ಯಾದ್ಯಂತ ಹೆಚ್ಚುವರಿಯಾಗಿ ಒಟ್ಟು 20 ಚಿತ್ರಮಂದಿರಗಳಲ್ಲಿ ದಿ ವಿಲನ್ ಪ್ರದರ್ಶನ ಕಂಡಿದೆ. ಅಲ್ಲಿಗೆ ಇದುವರೆಗೆ ತೆರೆಕಂಡ ಚಿತ್ರಮಂದಿರಗಳ ಸಂಖ್ಯೆ 570ಕ್ಕೆ ಏರಿಕೆ ಆಗಿದೆ. ಈ ಸಂಖ್ಯೆ ನಾಳೆಗೂ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನುತ್ತಿವೆ ಮೂಲಗಳು.
ನಿರ್ಮಾಪಕರಾದ ಜಾಕ್ ಮಂಜು, ಎನ್ ಕುಮಾರ್ ಸೇರಿ ಒಟ್ಟು ಐದು ಮಂದಿ ವಿತರಣೆಯ ಹಕ್ಕು ಖರೀದಿಸಿದ್ದಾರೆ. ಮೂಲಗಳ ಪ್ರಕಾರ ಬೆಂಗಳೂರು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಲ್ಲಿನ ವಿತರಣೆಯ ಹಕ್ಕು ಒಟ್ಟು ರೂ. 10 ಕೋಟಿಗೆ ಮಾರಾಟವಾಗಿದ್ದು, ಅದು ನಿರ್ಮಾಪಕ ಜಾಕ್ ಮಂಜು ಪಾಲಾಗಿದೆ.
ರಾಜ್ ಗೋಪಾಲ್ ಎನ್ನುವವರು ಹೈದರಾಬಾದ್ ಕರ್ನಾಟಕ ವಿತರಣೆಯ ಹಕ್ಕು ಪಡೆದಿದ್ದಾರೆ. ಮೈಸೂರು, ಮಂಡ್ಯ, ಹಾಸನ ಸೇರಿದಂತೆ ಮಧ್ಯ ಕರ್ನಾಟಕ ವಿತರಣೆಯ ಹಕ್ಕನ್ನು ನಿರ್ಮಾಪಕ ಎನ್. ಕುಮಾರ್ ಮತ್ತು ಪ್ರಕಾಶ್ ಖರೀದಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿ ಜಿಲ್ಲೆಗಳ ವಿತರಣೆಯನ್ನು ರಮೇಶ್ ಎನ್ನುವವರು ಖರೀದಿಸಿದ್ದಾರೆ. ದಾವಣಗೆರೆವೊಂದರಲ್ಲಿಯೇ ಮೊದಲ ದಿನ ಒಟ್ಟು 50 ಲಕ್ಷ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇಲ್ಲಿ ಜಯಣ್ಣ ವಿತರಣೆಯ ಹಕ್ಕು ಪಡೆದಿದ್ದಾರೆ.
ಯಾವ ವಿತರಕರು ಎಷ್ಟಕ್ಕೆ ಖರೀದಿಸಿದರು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.