ಸಕ್ಕರೆ ತ್ಯಜಿಸಿದ ಮಂಡ್ಯ ಹುಡುಗಿ!

By Web DeskFirst Published Oct 19, 2018, 2:25 PM IST
Highlights

ಸ್ಯಾಂಡಲ್ವುಡ್ ಕ್ವೀನ್  ರಮ್ಯಾ ಸಕ್ಕರೆ ತಿನ್ನುವುದನ್ನು ತ್ಯಜಿಸಿದ್ದಾರಂತೆ. ಸಕ್ಕರೆ ನಾಡಿನ ಈ ಹುಡುಗಿ ಸಕ್ಕರೆ ಬಿಟ್ಟಿದ್ಯಾಕೆ ಎನ್ನೋ ಪ್ರಶ್ನಗೆ ಇಲ್ಲಿದೆ ನೋಡಿ ಆನ್ಸರ್.

ಬೆಂಗಳೂರು : ಮೂಲತಃ ಮಂಡ್ಯದ ಬೆಡಗಿಯಾಗಿರುವ ಇವರಿಗೆ ರಮ್ಯಾಗೆ ಸಕ್ಕರೆ ಬಯಕೆ ಜಾಸ್ತಿ. ಜೀವನದಲ್ಲಿ ಖುಷಿ ಮತ್ತು ಒತ್ತಡಕ್ಕೆ ಇವರ ಬಳಿ ಇರೋದು  ಒಂದೆ ಪರಿಹಾರ. ಅದೇನೆಂದರೆ  ಸಕ್ಕರೆ ತಿನ್ನುವುದಂತೆ. 

ಹಲವು ವರ್ಷಗಳಿಂದ ಪ್ರಯತ್ನ ಮಾಡಿ ಮಾಡಿ ವಿಫಲರಾಗಿದ್ದಾರೆ. ಆದರೆ ಈ ಸಲ #ನೋಶುಗರ್ ಚಾಲೆಂಜ್ ತೆಗೆದುಕೊಂಡಿದ್ದಾರೆ. ಅವರ ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಬೀರುತ್ತಿರುವ ಕಾರಣ ಅವರು ಸಕ್ಕರೆ ತಿನ್ನಬಾರದೆನ್ನುವ ತಿರ್ಮಾನ ಮಾಡಿದ್ದಾರೆ. 

ಈ ಹಿಂದೆ ಅನೇಕ ಸಲ ಇಂತಹ ಪ್ರಯತ್ನ ಮಾಡಿ  2-3 ದಿನಕ್ಕೆ  ಬ್ರೇಕ್ ಮಾಡಿದ್ರು. ಆದ್ರೆ ಈ ಬಾರಿ ಮಾತ್ರ ಸೀರಿಯಸ್ ಆಗಿ ಚಾಲೇಂಜ್ ಸ್ವೀಕಾರ ಮಾಡಿದ್ದು, ಅಡಿಕ್ಷನ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ಕಳೆದ ಡಿಸೆಂಬರ್ 31ರಿಂದಲೇ ಅವರ ಈ ಚಾಲೇಂಜ್ ಆರಂಭವಾಗಿದೆ.

click me!