ನಟಿ ರಿಯಾ ಸೇನ್ ತರಾತುರಿಯಲ್ಲಿ ಮದುವೆ ಆಗಿದ್ದೇಕೆ ಗೊತ್ತಾ?

Published : Aug 19, 2017, 11:05 AM ISTUpdated : Apr 11, 2018, 12:35 PM IST
ನಟಿ ರಿಯಾ ಸೇನ್ ತರಾತುರಿಯಲ್ಲಿ ಮದುವೆ ಆಗಿದ್ದೇಕೆ ಗೊತ್ತಾ?

ಸಾರಾಂಶ

ರಿಯಾಸೇನ್ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಮೋಹಕ ನಟನೆಯಿಂದ ಖ್ಯಾತಿ ಗಳಿಸಿದ್ದ ನಟಿ ರಿಯಾ ಸೇನ್ ಬಹಳಷ್ಟು ಅಭಿಮಾನಿಗಳಿಗೆ ಈ ಮೂಲಕ ನಿರಾಶೆ ಮಾಡಿದ್ದಾರೆ. ಹಾಗಂತ ಇವರು ಮಾಡಿರುವುದು ಏನು ಗೊತ್ತಾ?

ಮುಂಬೈ(ಆ.19): ರಿಯಾಸೇನ್ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಮೋಹಕ ನಟನೆಯಿಂದ ಖ್ಯಾತಿ ಗಳಿಸಿದ್ದ ನಟಿ ರಿಯಾ ಸೇನ್ ಬಹಳಷ್ಟು ಅಭಿಮಾನಿಗಳಿಗೆ ಈ ಮೂಲಕ ನಿರಾಶೆ ಮಾಡಿದ್ದಾರೆ. ಹಾಗಂತ ಇವರು ಮಾಡಿರುವುದು ಏನು ಗೊತ್ತಾ?

ತಮ್ಮ ಬಾಲ್ಯದ ಗೆಳೆಯ ಶಿವಂ ತಿವಾರಿ ಎನ್ನುವವರ ಜೊತೆ ತರಾತುರಿಯಲ್ಲಿ ಮದುವೆಯಾಗಿರುವುದು. 1991ರಲ್ಲಿಯೇ ‘ವಿಷಕನ್ಯಾ’ ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಸೇನ್ ನಂತರದಲ್ಲಿ ಮಾಡೆಲ್ ಆಗಿ ಪ್ರಸಿದ್ಧಿ ಪಡೆದಿದ್ದರು. ‘ಸ್ಟೈಲ್’, ‘ದಿಲ್ ವಿಲ್ ಪ್ಯಾರ್ ವ್ಯಾರ್’, ‘ಪ್ಲ್ಯಾನ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಸೇನ್ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು.

ಸದ್ಯ ಏಕ್ತಾ ಕಪೂರ್ ನಿರ್ಮಾಣದ ‘ರಾಗಿಣಿ ಎಂಎಂಎಸ್ 2.2’ ವೆಬ್ ಸೀರಿಸ್‌'ನಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದರು. ಆದರೆ ಅವರು ಮದುವೆಯಾಗುತ್ತಾರೆ ಅನ್ನುವ ಸುಳಿವು ಯಾರಿಗೂ ಇರಲಿಲ್ಲ. ಇಂಥದ್ದರಲ್ಲಿ ಅವರ ಮದುವೆಯ ನಿರ್ಧಾರಕ್ಕೆ ಕಾರಣವೇನು? ಆಂಗ್ಲ ಪತ್ರಿಕೆಯೊಂದು ಅವರು ಮದುವೆಗೂ ಮೊದಲು ಗರ್ಭವತಿಯಾಗಿದ್ದರು, ಹಾಗಾಗಿಯೇ ಮದುವೆಯಾಗಿದ್ದಾರೆ ಎಂದು ವರದಿ ಮಾಡಿದೆ.

ಆದರೆ ಆ ಬಗ್ಗೆ ರಿಯಾ ಸೇನ್ ಆಗಲಿ, ಅವರ ಕುಟುಂಬ ವರ್ಗದವರಾಗಲಿ ಏನೂ ಮಾತಾಡಿಲ್ಲ. ಅದೇನೇ ಇದ್ದರೂ ಪಡ್ಡೆಗಳ ಮನ ಕಲಕಿದ್ದ ಸುಂದರಿ ರಿಯಾ ಸೇನ್ ಈಗ ಮದುವೆಯಾಗಿರುವುದು ಹಲವು ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹನುಮನ ಜನ್ಮಸ್ಥಳ ಅಂಜನಾದ್ರಿಗೆ ರಿಷಬ್ ಶೆಟ್ಟಿ ಭೇಟಿ; 575 ಮೆಟ್ಟಿಲೇರಿ ದರ್ಶನ ಪಡೆದ ದಂಪತಿ!
ದಶಕಗಳ ಬಳಿಕ ಗೆಳೆಯ ದರ್ಶನ್ ಫೋಟೋ ಶೇರ್ ಮಾಡಿ, ವಿಶ್ ಮಾಡಿದ ಕಿಚ್ಚ ಸುದೀಪ್!