ಸಿನಿಮಾ ನಟ, ನಟಿಯರನ್ನು ಲಕ್ಷಾಂತರ ಮಂದಿ ಅರಾಧಿಸುತ್ತಾರೆ. ತುಂಬಾ ಅಭಿಮಾನದಿಂದ ನೋಡುತ್ತಾರೆ. ಆದರೆ ಆ ಸ್ಟಾರ್ ನಟ, ನಟಿಯರು ಯಾರನ್ನಾದರೂ ಆರಾಧಿಸುವುದಿಲ್ಲವೇ? ಖಂಡಿತಾ ಆರಾಧಿಸುತ್ತಾರೆ. ಪ್ರತಿಯೊಬ್ಬರ ಲೈಫಲ್ಲಿ ಅವರು ಇಷ್ಟಪಡುವ ವ್ಯಕ್ತಿ ಇದ್ದೇ ಇರುತ್ತಾರೆ. ಅಂಥಾ ವ್ಯಕ್ತಿ ನಾಯಕಿ ವೇದಿಕಾ ಲೈಫಲ್ಲೂ ಇದ್ದಾರೆ. ಆ ವ್ಯಕ್ತಿ ಯಾರು? ಇಲ್ಲಿದೆ ವಿವರ

ಆ ವ್ಯಕ್ತಿಯ ಹೆಸರೇ ಪಾಲ್ ಕೊಯೆಲ್ಹೋ. ಪಾಲ್ ಕೊಯೆಲ್ಹೋ ಒಬ್ಬ ಪ್ರಖ್ಯಾತ ಕಾದಂಬರಿಕಾರ. ಆತನ ಕಾದಂಬರಿಯನ್ನು ಜಗತ್ತಿನ ಕೋಟ್ಯಂತರ ಮಂದಿ ಇಷ್ಟಪಡುತ್ತಾರೆ. ಅವರ ಕಾದಂಬರಿ ಎಂದರೆ ವೇದಿಕಾಗೆ ಸಿಕ್ಕಾಪಟ್ಟೆಇಷ್ಟ. ಎಲ್ಲಾದರೂ ಹೋಗುವಾಗ ಇವರ ಕೈಯಲ್ಲಿ ಪಾಲ್ ಕೊಯೆಲ್ಹೋ ಕಾದಂಬರಿ ಇದ್ದೇ ಇರುತ್ತದೆ. ಇತ್ತೀಚೆಗೆ ‘ದಿ ವಿಚ್ ಆಫ್ ಪೋರ್ಟೋಬೆಲ್ಲೋ' ಓದಿ ಮುಗಿಸಿದ ವೇದಿಕಾ ಈಗ ‘ವೆರೋ ನಿಕಾ ಡಿಸೈಡ್ಸ್ ಟು ಡೈ' ಪುಸ್ತಕವನ್ನು ಹಿಡಿದುಕೊಂಡಿದ್ದಾರೆ. ಅವರ ಪುಸ್ತಕ ಮತ್ತು ಕೊಯೆಲ್ಹೋ ಪ್ರೇಮಕ್ಕೆ ಜಯವಾಗಲಿ
-ಕನ್ನಡಪ್ರಭ, ಸಿನಿವಾರ್ತೆ