
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮದುವೆಯಾಗುವ ಗಾಳಿ ಸುದ್ದಿಗಳಿಗೆ ಬರವಿಲ್ಲ. ಈಗ ಮತ್ತೊಂದು ಸೂಪರ್ ಗಾಳಿ ಸುದ್ದಿ ಬಾಲಿವುಡ್ ಟೌನ್'ನಲ್ಲಿ ಗುನುಗುತ್ತಿದೆ.
ಸಲ್ಮಾನ್ ಖಾನ್ ಅವರಿಗೆ ಹಾಟ್ ಬೆಡಗಿ ಹಳೆಯ ಪ್ರೇಯಸಿ ಕತ್ರೀನಾ ಕೈಫ್ ಜೊತೆ ಪ್ರೇಮವಾಗಿದೆ. ಶೀಘ್ರದಲ್ಲೇ ಇಬ್ಬರು ವಿವಾಹ'ವಾಗುತ್ತಾರೆ ಎಂಬ ಗುಸುಗುಸು ಸಿನಿಮಾ ಮಂದಿಯ ಬಾಯಲ್ಲಿ ಹರಿದಾಡುತ್ತಿದೆ. ಇತ್ತೀಚಿಗಷ್ಟೆ ಕತ್ರೀನಾ ಸಲ್ಲೂ ಜೊತೆಗಿನ ಹಾಟೆಸ್ಟ್ ಚಿತ್ರವನ್ನು ತಮ್ಮ ಇನ್'ಸ್ಟಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ನೋಡಿದ ಅಭಿಮಾನಿಗಳೆಲ್ಲರೂ ಅಣ್ಣ - ಅತ್ತಿಗೆ ಜೋಡಿ ಎಂದೆಲ್ಲ ಪ್ರತಿಕ್ರಿಯೆ ನೀಡಿದ್ದರು. ಆದರೆ ವಾಸ್ತವದಲ್ಲಿ ಇದು 'ಟೈಗರ್ ಜಿಂದಾ ಹೈ' ಚಿತ್ರದ ದೃಶ್ಯವೇ ಹೊರತು ಮತ್ತೇನಿಲ್ಲ. ಇದನ್ನೇ ಕತ್ರೀನಾ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡಿಗ ಗಿರೀಶ್ ಕರ್ನಾಡ್ ಕೂಡ ೀ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಕೊನೆಯಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
ಸಲ್ಲು ಜೊತೆ ಪ್ರೇಮ ಬಾಂಧವ್ಯ ಮುರಿದು ಬಿದ್ದ ನಂತರ ಕತ್ರೀನಾ ಕಳೆದ 6 ವರ್ಷಗಳಿಂದ ಮತ್ತೊಬ್ಬ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ ಸುತ್ತಾಟ ಜೋರಾಗಿದೆ. ಇಬ್ಬರ ಜೊತೆಯೂ ಮದುವೆಯ ಮಾತುಗಳು ಆಗಾಗ ಕೇಳಿಬರುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.