
ದಳಪತಿ ವಿಜಯ್ ತಮಿಳುನಾಡು ರಾಜಕೀಯದಲ್ಲಿ ದಿಗ್ವಿಜಯ ಸಾಧಿಸಿ ಸಿಎಂ ಆಗಿದ್ದಾರೆ. ಆದ್ರೆ ವೈಯಕ್ತಿಕ ಬದುಕು ಮಾತ್ರ ಹಳಿ ತಪ್ಪಿದೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ಗೆ ಅರ್ಜಿ ಸಲ್ಲಿಸಿರೋ ವಿಷ್ಯ ಗೊತ್ತೇ ಇದೆ. ಈ ನಡುವೆ ಇಬ್ಬರೂ ಮುನಿಸು ಮರೆತು ಒಂದಾಗ್ತಾರೆ ಅನ್ನೋ ರೂಮರ್ ಕೂಡ ಇದೆ. ಆದ್ರೆ ಸೋಮವಾರ ತಮಿಳುನಾಡಿನ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಕೇಸ್ ಬೇರೆಯದ್ದೇ ಕಥೆ ಹೇಳ್ತಾ ಇದೆ. ದಳಪತಿ ವಿಜಯ್ ದಾಂಪತ್ಯ ಜೀವನದಲ್ಲಿ ಎದ್ದಿರೋ ಬಿರುಗಾಳಿ ವಿಷ್ಯ ಗೊತ್ತೇ ಇದೆ. ಅಸಲಿಗೆ ಚುನಾವಣೆಗೂ ಮುನ್ನವೇ ವಿಜಯ್ ಪತ್ನಿ ಸಂಗೀತಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ರು.
ಆಗಲೇ ವಿಜಯ್ ಕುಟುಂಬದ ವಿಷ್ಯ ಹಾದಿ ಬೀದಿ ಚರ್ಚೆಯಾಗಿತ್ತು. ಮೊನ್ನೆ ವಿಜಯ್ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಬಂದು ಹೋದ ಮೇಲೆ ಹೊಸತೊಂದು ಚರ್ಚೆ ಹುಟ್ಟಿಕೊಂಡಿತ್ತು. ವಿಜಯ್ ಸಂಗೀತಾ ಮುನಿಸು ಮರೆತು ಮತ್ತೆ ಒಂದಾಗೋದಕ್ಕೆ ನಿರ್ಧಾರ ಮಾಡಿದ್ದಾರೆ ಅಂತ ಸುದ್ದಿಯಾಗಿತ್ತು. ತಮ್ಮ ಮಕ್ಕಳ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ಇಬ್ಬರೂ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರ ನಡುವೆ ವಿಜಯ್ ತಾಯಿ ಕಾಂಪ್ರಮೈಸ್ ಮಾಡಿಸಿದ್ದಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಸೋಮವಾರ ಕೋರ್ಟ್ನಲ್ಲಿ ನಡೆದಿದ್ದೇ ಬೇರೆ. ತಮಿಳುನಾಡಿನ ಚೆಂಗಲ್ಪಟ್ಟುವಿನ ಕೌಟುಂಬಿಕ ನ್ಯಾಯಾಲಯದಲ್ಲಿ ದಳಪತಿ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದಿದೆ.
ವಿಜಯ್ ಮತ್ತು ಸಂಗೀತಾ ಇಬ್ಬರ ವಕೀಲರು ತಮ್ಮ ಕಕ್ಷಿದಾರರು ಆನ್ಲೈನ್ ಮೂಲಕ ವಿಚಾರಣೆಗೆ ಹಾಜರಾಗ್ತಾರೆ ಅಂತ ಮನವಿ ಸಲ್ಲಿಸಿದ್ರು. ಆದ್ರೆ ಕೋರ್ಟ್ ಅದಕ್ಕೆ ಒಪ್ಪದೇ ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಹೌದು ವಿಜಯ್ ಪತ್ನಿ ಸಂಗೀತಾ ಸಲ್ಲಿಸಿರೋ ವಿಚ್ಛೇಧನದ ಅರ್ಜಿಯಲ್ಲಿ ಹಲವು ಶಾಕಿಂಗ್ ವಿಷ್ಯಗಳಿವೆ. 2021ರ ಏಪ್ರಿಲ್‌ನಲ್ಲಿ ವಿಜಯ್ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ಸಂಗೀತಾ ಗೆ ಗೊತ್ತಾಗಿತ್ತಂತೆ.. ಅರ್ಜಿಯಲ್ಲಿ ನಟಿಯ ಹೆಸರನ್ನ ಬಹಿರಂಗಪಡಿಸದಿದ್ದರೂ, ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಹೆಸರು ವ್ಯಾಪಕವಾಗಿ ಕೇಳಿಬಂದಿದ್ದು ಗೊತ್ತಿರೋದ್ರಿಂದ, ಅದು ತ್ರಿಷಾನೇ ಅಂತ ಊಹೆ ಮಾಡಬಹುದು.
ಇನ್ನೂ ಈ ಅಕ್ರಮ ಸಂಬಂಧದ ಬಗ್ಗೆ ಗೊತ್ತಾಗಿ, ಆ ಬಗ್ಗೆ ಸಂಗೀತಾ ಗಲಾಟೆ ಮಾಡಿದಾಗ, ವಿಜಯ್ ಆ ಸಂಬಂಧವನ್ನ ಕೊನೆಗೊಳಿಸೋದಾಗಿ ವಿಜಯ್ ಭರವಸೆ ನೀಡಿದ್ರಂತೆ. ಆದ್ರೆ ಕದ್ದು ಮುಚ್ಚಿ ಆ ಸಂಬಂಧ ಮುಂದುವರಿಸಿದ್ರು ಅಂತ ಸಂಗೀತಾ ಆರೋಪಿಸಿದ್ದಾರೆ. ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ತೀವ್ರ ಮುಜುಗರ ಮತ್ತು ಮಾನಸಿಕ ಹಿಂಸೆ ನೀಡಿದೆ ಅಂತ ಸಂಗೀತಾ ಅರ್ಜಿಯಲ್ಲಿ ದೂರಿಕೊಂಡಿದ್ದಾರೆ. ಇಲ್ಲಿ ತ್ರಿಷಾ ವಿಜಯ್ ಜೊತೆಗೆ ಹಲವು ಫೋಟೋಗಳನ್ನ ಹಂಚಿಕೊಂಡಿದ್ದನ್ನ ನೆನಪು ಮಾಡಿಕೊಳ್ಳಬಹುದು.
ಅಷ್ಟೆಲ್ಲಾ ಯಾಕೆ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ , ಅದ್ಧೂರಿ ಸೀರೆಯುಟ್ಟುಕೊಂಡು ಬಂದು ಥೇಟ್ ಪತ್ನಿ ರೀತಿಯೇ ತ್ರಿಷಾ ಪೋಸ್ ಕೊಟ್ಟಿದ್ರು. ಸೋ ಸಂಗೀತಾ ದೂರನ್ನಿತ್ತಿರೋದು ತ್ರಿಷಾ ಬಗ್ಗೆ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಸೋ ಈ ಅರ್ಜಿಯ ಕಾರಣಕ್ಕೆ ಮತ್ತೊಮ್ಮೆ ದಳಪತಿ ತ್ರಿಷಾ ಸಂಬಂಧದ ಬಗ್ಗೆ ಗುಲ್ಲು ಶುರುವಾಗಿದೆ. ಇನ್ನೂ ವಿಜಯ್ ಅಭಿಮಾನಿಗಳು ಮಾತ್ರ ಈ ಡಿವೋರ್ಸ್ ಕೇಸ್ ಮುಂದುವರೆಯಲ್ಲ. ಮುಂದಿನ ವಾರ ವಿಜಯ್ ಬರ್ತ್ಡೇ ದಿನ ಪತಿ-ಪತ್ನಿ ಒಂದಾಗ್ತಾರೆ ನಂಬಿಕೆ ಇಟ್ಟುಕೊಂಡಿದ್ದಾರೆ..! ಆದ್ರೆ ಜೂನ್ 22ಕ್ಕೆ ವಿಜಯ್ ಬರ್ತ್ಡೇ ಇದ್ರೆ, ಆಗಸ್ಟ್ 7ಕ್ಕೆ ಈ ಡಿವೋರ್ಸ್ ಅರ್ಜಿ ವಿಚಾರಣೆ ಇದೆ. ಒಂದು ವೇಳೆ ಜೂನ್ 22ರಂದೇ ಈ ವಿವಾದ ಸುಖಾಂತ್ಯವಾದ್ರೆ ಆಗಸ್ಟ್ 7ರಂದು ಕೇಸ್ ನಡೆಯೋ ಅಗತ್ಯವೇ ಇರೋದಿಲ್ಲ.. ಸೋ ಎಲ್ಲರ ಕಣ್ಣು ಈಗ ವಿಜಯ್ ಜನ್ಮದಿನದತ್ತ ನೆಟ್ಟಿದೆ..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.