ಕೊನೆಗೂ ಬಯಲಾಯ್ತು ನಟಿ ಸಮಂತಾ ಎಂಗೇಜ್‌ಮೆಂಟ್ ರಿಂಗ್ ರಹಸ್ಯ: ಡಿಸೈನ್ ಕೂಡ ಯೂನಿಕ್!

Published : Sep 10, 2026, 05:01 PM IST
Samantha Engagement Ring

ಸಾರಾಂಶ

ಸಮಂತಾ ರುತ್ ಪ್ರಭು ಅವರ ಎಂಗೇಜ್‌ಮೆಂಟ್ ರಿಂಗ್ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ರಿಂಗ್ ಅನ್ನು ರಾಜ್ ನಿಡಿಮೋರು ಸ್ವತಃ ಆಯ್ಕೆ ಮಾಡಿದ್ದು, ಪ್ರಪೋಸ್ ಮಾಡುವವರೆಗೂ ಸಮಂತಾ ಅದನ್ನು ನೋಡಿರಲಿಲ್ಲ ಎನ್ನಲಾಗಿದೆ.

ಸೌತ್ ಇಂಡಿಯನ್ ಸಿನಿರಂಗದ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರಿಗೆ ಸಿನಿಮಾಗಳಷ್ಟೇ ಅಲ್ಲ, ಅವರ ಪರ್ಸನಲ್ ಲೈಫ್ ಕೂಡ ಸದಾ ಸುದ್ದಿಯಲ್ಲಿರುತ್ತದೆ. ಇದೀಗ ಸಮಂತಾ ಧರಿಸಿದ್ದ ಎಂಗೇಜ್‌ಮೆಂಟ್ ರಿಂಗ್ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಆದರೆ ಈ ರಿಂಗ್ ವಿಶೇಷತೆ ಅದರ ಬೆಲೆಯಲ್ಲಿ ಮಾತ್ರವಲ್ಲ.. ಅದನ್ನು ಸಮಂತಾಗೆ ಸರ್ಪ್ರೈಸ್ ಆಗಿ ಆಯ್ಕೆ ಮಾಡಿದ್ದರ ಹಿಂದಿರುವ ಕಥೆಯಲ್ಲೂ ಇದೆ.

ರಿಂಗ್ ಆಯ್ಕೆ ಮಾಡಿದ್ದು ಸಮಂತಾ ಅಲ್ಲ!

ಸಮಂತಾ ಅವರ ಎಂಗೇಜ್‌ಮೆಂಟ್ ರಿಂಗ್ ನೋಡಲು ಸಿಂಪಲ್ ಆಗಿದ್ದರೂ, ಅದರ ಡಿಸೈನ್ ಮಾತ್ರ ಸಾಕಷ್ಟು ವಿಶೇಷವಾಗಿದೆ. ಅಷ್ಟೇ ಅಲ್ಲ, ಈ ರಿಂಗ್ ಆಯ್ಕೆಯಲ್ಲಿ ಸಮಂತಾ ಅವರ ಪಾತ್ರವೇ ಇರಲಿಲ್ಲವಂತೆ. ರಿಂಗ್ ಹೇಗಿರಬೇಕು, ಯಾವ ಡಿಸೈನ್ ಆಯ್ಕೆ ಮಾಡಬೇಕು ಎಂಬ ಸಂಪೂರ್ಣ ಜವಾಬ್ದಾರಿಯನ್ನು ರಾಜ್ ನಿಡಿಮೋರು ಅವರೇ ವಹಿಸಿಕೊಂಡಿದ್ದರಂತೆ. ಅಚ್ಚರಿಯ ವಿಚಾರವೆಂದರೆ, ರಾಜ್ ಪ್ರಪೋಸ್ ಮಾಡುವವರೆಗೂ ಸಮಂತಾ ಆ ರಿಂಗ್ ಅನ್ನು ನೋಡೇ ಇರಲಿಲ್ಲವಂತೆ!

ಪ್ರಪೋಸ್ ಮಾಡುವವರೆಗೂ ರಿಂಗ್ ನೋಡಿರಲಿಲ್ಲ!

‘ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ’ ಜೊತೆಗಿನ ಸಂಭಾಷಣೆಯಲ್ಲಿ ಸಮಂತಾ ಸ್ವತಃ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರಿಂಗ್ ಆಯ್ಕೆ ಪ್ರಕ್ರಿಯೆ ಬಗ್ಗೆ ಕೇಳಿದಾಗ, ಅದರ ಬಗ್ಗೆ ನನಗೆ ಯಾವುದೇ ಐಡಿಯಾ ಇರಲಿಲ್ಲ. ಆ ಸೆಲೆಕ್ಷನ್ ಪ್ರೊಸೆಸ್‌ನಲ್ಲೂ ನಾನು ಇರಲಿಲ್ಲ. ಇದನ್ನೆಲ್ಲ ಮಾಡಿದ್ದು ರಾಜ್. ನೀವು ಏನಾದರೂ ಕೇಳಬೇಕಿದ್ದರೆ ಅವರನ್ನೇ ಕೇಳಬೇಕು ಎಂದು ಸಮಂತಾ ಹೇಳಿದ್ದಾರೆ.

ಅಂದರೆ, ಸಮಂತಾಗೆ ಸರ್ಪ್ರೈಸ್ ನೀಡಬೇಕು ಎಂಬ ಉದ್ದೇಶದಿಂದ ರಾಜ್ ಈ ವಿಚಾರವನ್ನು ಸಂಪೂರ್ಣವಾಗಿ ಸೀಕ್ರೆಟ್ ಆಗಿ ಇಟ್ಟಿದ್ದರಂತೆ. ಹೀಗಾಗಿ ಪ್ರಪೋಸ್ ಮಾಡಿದ ಕ್ಷಣದಲ್ಲೇ ಸಮಂತಾ ಮೊದಲ ಬಾರಿಗೆ ಆ ರಿಂಗ್ ಅನ್ನು ನೋಡಿದ್ದಾರೆ ಎನ್ನಲಾಗಿದೆ.

ಗ್ರೀಕ್ ಡಿಸೈನರ್ ಕೈಚಳಕ

ಸಮಂತಾ ಅವರ ಈ ಸ್ಪೆಷಲ್ ರಿಂಗ್ ಅನ್ನು ಗ್ರೀಕ್ ಜ್ಯುವೆಲರಿ ಡಿಸೈನರ್ ಥಿಯೊಡೋರೋಸ್ ಸವೋಪೌಲೋಸ್ ವಿನ್ಯಾಸಗೊಳಿಸಿದ್ದಾರೆ ಎನ್ನಲಾಗಿದೆ. ಏಥೆನ್ಸ್‌ನಲ್ಲಿ ಕೆಲಸ ಮಾಡುತ್ತಿರುವ ಅವರು ವಿಭಿನ್ನ ಹಾಗೂ ಕಸ್ಟಮೈಸ್‌ಡ್ ಜ್ಯುವೆಲರಿ ಡಿಸೈನ್‌ಗಳಿಗೆ ಹೆಸರಾಗಿದ್ದಾರೆ. ವಿಶೇಷವೆಂದರೆ, ಅವರು ಸಮಂತಾ ಮತ್ತು ರಾಜ್ ನಿಡಿಮೋರು ಅವರ ಸ್ನೇಹಿತರೂ ಆಗಿದ್ದಾರೆ ಎನ್ನಲಾಗಿದೆ.

ರಿಂಗ್ ಡಿಸೈನ್‌ನಲ್ಲೂ ಇದೆ ಇತಿಹಾಸದ ಕನೆಕ್ಷನ್!

ಇನ್ನು ಸಮಂತಾ ಅವರ ಎಂಗೇಜ್‌ಮೆಂಟ್ ರಿಂಗ್ ಡಿಸೈನ್ ಕೂಡ ಸಖತ್ ಯೂನಿಕ್ ಆಗಿದೆ. ಇದು ಲೋಝೆಂಜ್ ಶೇಪ್‌ನ ನ್ಯಾಚುರಲ್ ಡೈಮಂಡ್ ರಿಂಗ್ ಎನ್ನಲಾಗಿದೆ. ಇದರಲ್ಲಿ ಎಂಟು ಪೋರ್‌ಟ್ರೇಟ್ ಕಟ್ ಡೈಮಂಡ್ ಪೆಟಲ್ಸ್ ಇರುವುದಾಗಿ ವರದಿಯಾಗಿದೆ. ಈ ಪೋರ್‌ಟ್ರೇಟ್ ಕಟ್ ಡೈಮಂಡ್ಸ್‌ಗೆ ಭಾರತೀಯ ಇತಿಹಾಸದೊಂದಿಗೂ ಕನೆಕ್ಷನ್ ಇದೆ ಎನ್ನಲಾಗುತ್ತದೆ. ವಿಶೇಷವಾಗಿ ಮೊಘಲ್ ಕಾಲದಲ್ಲಿ ಈ ರೀತಿಯ ಡೈಮಂಡ್ ಕಟ್‌ಗಳಿಗೆ ವಿಶೇಷ ಜನಪ್ರಿಯತೆ ಇತ್ತು ಎಂಬ ಮಾಹಿತಿ ಕೂಡ ಇದೀಗ ಚರ್ಚೆಯಾಗುತ್ತಿದೆ.

ಬರೋಬ್ಬರಿ 1.5 ಕೋಟಿ ರೂಪಾಯಿ ಬೆಲೆ?

ಸಮಂತಾ ಅವರ ಈ ಎಂಗೇಜ್‌ಮೆಂಟ್ ರಿಂಗ್ ಬೆಲೆಯೂ ಸದ್ಯ ಹಾಟ್ ಟಾಪಿಕ್ ಆಗಿದೆ. ಸೆಲೆಬ್ರಿಟಿ ಜ್ಯುವೆಲರಿ ಎಕ್ಸ್‌ಪರ್ಟ್ ಪ್ರಿಯನ್ಷಿ ಗೋಯಲ್ ಅವರ ಅಂದಾಜಿನ ಪ್ರಕಾರ, ಈ ರಿಂಗ್ ಬೆಲೆ ಸುಮಾರು 1.5 ಕೋಟಿ ರೂಪಾಯಿ ಇರಬಹುದು ಎನ್ನಲಾಗಿದೆ. ಆದರೆ ಈ ರಿಂಗ್‌ನ ನಿಖರ ಬೆಲೆಯನ್ನು ಸಮಂತಾ ಆಗಲಿ, ರಾಜ್ ನಿಡಿಮೋರು ಆಗಲಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಸದ್ಯ ಸಮಂತಾ ಮತ್ತು ರಾಜ್ ನಿಡಿಮೋರು ಅವರು 2025ರ ಡಿಸೆಂಬರ್ 1ರಂದು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಇದೀಗ ಅವರ ಎಂಗೇಜ್‌ಮೆಂಟ್ ರಿಂಗ್‌ನ ಹಿಂದಿನ ಈ ಸೀಕ್ರೆಟ್ ಸ್ಟೋರಿ ಕೂಡ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರೇಣುಕಾಸ್ವಾಮಿ ಪ್ರಕರಣ: ಖುದ್ದು ಹಾಜರಾತಿ ಕೋರಿ ನಟ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ, ಕೋರ್ಟ್ ಹೇಳಿದ್ದಿಷ್ಟು
'ಆ ಆಸೆ ಕೊನೆಗೂ ಈಡೇರಲಿಲ್ಲ': ಸಿಲ್ಕ್ ಸ್ಮಿತಾ ಅಕಾಲಿಕ ಮರಣ ನೆನೆದು ಭಾವುಕರಾದ ನಟಿ ಊರ್ವಶಿ