
ಕನ್ನಡ ಕಿರುತೆರೆಯ ಅತಿ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ‘ಬಿಗ್‌ಬಾಸ್ ಕನ್ನಡ ಸೀಸನ್ 13’ ಭರ್ಜರಿ ಆರಂಭ ಕಂಡಿದೆ. ಶೋ ಶುರುವಾಗಿ ಇನ್ನೂ ಒಂದು ವಾರ ಕಳೆದಿಲ್ಲ, ಆಗಲೇ ವೀಕ್ಷಕರಿಂದ ಸಿಕ್ಕಿರುವ ರೆಸ್ಪಾನ್ಸ್ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ಜಿಯೋ ಹಾಟ್‌ಸ್ಟಾರ್‌ನ ದೈನಂದಿನ ಟ್ರೆಂಡಿಂಗ್ ಪಟ್ಟಿಯಲ್ಲಿ ‘ಬಿಗ್‌ಬಾಸ್ ಕನ್ನಡ’ ನಂ.1 ಸ್ಥಾನ ಪಡೆದುಕೊಂಡಿದ್ದು, ಕನ್ನಡಿಗರ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.
ಕಿಚ್ಚನ ನಿರೂಪಣೆಗೆ ವೀಕ್ಷಕರ ಫಿದಾ!
ಪ್ರತಿ ಸೀಸನ್‌ನಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರ ನಿರೂಪಣೆ ‘ಬಿಗ್‌ಬಾಸ್ ಕನ್ನಡ’ದ ಪ್ರಮುಖ ಆಕರ್ಷಣೆಯಾಗಿದೆ. ಸ್ಪರ್ಧಿಗಳ ಎಂಟ್ರಿ, ಮನೆಯೊಳಗಿನ ಮೊದಲ ವಾರದ ಬೆಳವಣಿಗೆಗಳು, ಟಾಸ್ಕ್‌ಗಳು ಹಾಗೂ ಕಿಚ್ಚನ ವೀಕೆಂಡ್ ಪಂಚಾಯಿತಿ ಈಗಾಗಲೇ ವೀಕ್ಷಕರ ಗಮನ ಸೆಳೆದಿವೆ. ಇದರ ಪರಿಣಾಮ ಜಿಯೋ ಹಾಟ್‌ಸ್ಟಾರ್‌ನ ಕನ್ನಡ ವಿಭಾಗದ ದೈನಂದಿನ ಟ್ರೆಂಡಿಂಗ್ ಪಟ್ಟಿಯಲ್ಲಿ ‘ಬಿಗ್‌ಬಾಸ್ ಕನ್ನಡ ಸೀಸನ್ 13’ ಮೊದಲ ಸ್ಥಾನಕ್ಕೇರಿದೆ. ಅಂದರೆ, ಶೋ ಆರಂಭವಾದ ಕೆಲವೇ ದಿನಗಳಲ್ಲಿ ಡಿಜಿಟಲ್ ವೇದಿಕೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಹಲವು ಭಾಷೆಗಳಲ್ಲಿ ‘ಬಿಗ್‌ಬಾಸ್’ ಹವಾ
‘ಬಿಗ್‌ಬಾಸ್’ ಕೇವಲ ಕನ್ನಡದಲ್ಲಿ ಮಾತ್ರವಲ್ಲ, ದೇಶದ ಹಲವು ಭಾಷೆಗಳಲ್ಲಿ ತನ್ನ ಜನಪ್ರಿಯತೆಯನ್ನು ಮುಂದುವರಿಸಿದೆ. ವಿವಿಧ ಭಾಷೆಗಳ ವಿಭಾಗಗಳಲ್ಲಿ ‘ಬಿಗ್‌ಬಾಸ್’ ನಂ.1 ಸ್ಥಾನ ಪಡೆಯುತ್ತಿರುವುದು ಈ ರಿಯಾಲಿಟಿ ಶೋಗೆ ಇರುವ ಕ್ರೇಜ್ ಎಷ್ಟಿದೆ ಎಂಬುದನ್ನು ತೋರಿಸುತ್ತಿದೆ. ಅದರಲ್ಲೂ ಕನ್ನಡ ವಿಭಾಗದಲ್ಲಿ ‘ಬಿಗ್‌ಬಾಸ್ ಕನ್ನಡ’ ಅಗ್ರಸ್ಥಾನಕ್ಕೇರುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಶೋ ಮೇಲಿರುವ ನಿರೀಕ್ಷೆ ಮತ್ತು ಆಸಕ್ತಿಯನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.
ಈ ಸೀಸನ್‌ನ ಮತ್ತೊಂದು ವಿಶೇಷತೆ ಎಂದರೆ, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಲ್ಲಿ ‘ಬಿಗ್‌ಬಾಸ್’ ಶೋಗಳು ಏಕಕಾಲದಲ್ಲಿ ಆರಂಭಗೊಂಡಿವೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಮಲಯಾಳಂನಲ್ಲಿ ಮೋಹನ್‌ಲಾಲ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ತಮಿಳಿನಲ್ಲಿ ವಿಜಯ್ ಸೇತುಪತಿ ತಮ್ಮದೇ ಶೈಲಿಯಲ್ಲಿ ‘ಬಿಗ್‌ಬಾಸ್’ ಅನ್ನು ಮುನ್ನಡೆಸುತ್ತಿದ್ದಾರೆ.
ಹೀಗಾಗಿ ದಕ್ಷಿಣ ಭಾರತದಲ್ಲಿ ನಾಲ್ಕು ಭಾಷೆಗಳಲ್ಲೂ ‘ಬಿಗ್‌ಬಾಸ್’ ಹವಾ ಜೋರಾಗಿದೆ. ಆದರೆ ಕನ್ನಡದ ‘ಬಿಗ್‌ಬಾಸ್’ ಆರಂಭವಾದ ಮೊದಲ ವಾರದಲ್ಲೇ ಟ್ರೆಂಡಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿರುವುದು ಇದೀಗ ಸ್ಯಾಂಡಲ್‌ವುಡ್ ಹಾಗೂ ಕಿರುತೆರೆ ವಲಯದಲ್ಲೂ ಗಮನ ಸೆಳೆದಿದೆ. ಇನ್ನು ಮುಂದಿನ ವಾರಗಳಲ್ಲಿ ಮನೆಯೊಳಗಿನ ಆಟ ಮತ್ತಷ್ಟು ಬಿರುಸಾಗುತ್ತಿದ್ದಂತೆ, ‘ಬಿಗ್‌ಬಾಸ್ ಕನ್ನಡ ಸೀಸನ್ 13’ ಟ್ರೆಂಡಿಂಗ್‌ನಲ್ಲಿ ತನ್ನ ಸ್ಥಾನವನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.