
ಹೈದರಾಬಾದ್: ಟಾಲಿವುಡ್ ನಟಿ ಡಿಂಪಲ್ ಹಯಾತಿ ಹಾಗೂ ಆತನ ಪತಿ ವಿಕ್ಟರ್ ಡೇವಿಡ್ ವಿರುದ್ಧ ಮನೆಕೆಲಸದವರಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮನೆಕೆಲಸದವರು ನೀಡಿದ ದೂರಿನ ಮೇರೆಗೆ ಹೈದರಾಬಾದ್‌ನ ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ತೆಲುಗಿನ ಗಲ್ಫ್ 2, ತಮಿಳಿನ ದೇವಿ 2, ಅಭಿನೇತ್ರಿ 2 ಟು ಮುಂತಾದ ಸಿನಿಮಾಗಳಲ್ಲಿ ಡಿಂಪಲ್ ಹಯಾತಿ ನಟಿಸಿದ್ದಾರೆ. ಇವರ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಒಡಿಶಾದ ರಾಯಗಡ ಜಿಲ್ಲೆಯ ಪ್ರಿಯಾಂಕಾ ಬಿಬಾರ್(22) ಎಂಬ ಯುವತಿ, ನಟಿ ಡಿಂಪಲ್ ಹಯಾತಿ ಹಾಗೂ ಅವರ ಪತಿ ನನಗೆ ಕಿರುಕುಳ ನೀಡಿ ಹಲ್ಲೆ ಮತ್ತು ದೌರ್ಜನ್ಯ ಎಸಗಿದ್ದಾರೆ ಎಂದು ಹೈದರಾಬಾದ್‌ನ ಫಿಲ್ಮ್‌ನಗರ ಪೊಲೀಸ್ ಠಾಣೆಯಲ್ಲಿ ದಂಪತಿಗಳ ವಿರುದ್ಧ ದೂರು ನೀಡಿದ್ದಾರೆ.
ಸೆಪ್ಟೆಂಬರ್ 22 ರಂದು ಕೆಲಸ ಅರಸಿ ಹೈದರಾಬಾದ್‌ಗೆ ಬಂದಿದ್ದರು. ಅದೇ ದಿನ ಶೈಕ್‌ಪೇಟೆಯ ವಂಶಿರಾಮ್ ಅವರ ವೆಸ್ಟ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿರುವ ಡಿಂಪಲ್ ಮತ್ತು ಡೇವಿಡ್ ಅವರ ನಿವಾಸದಲ್ಲಿ ಅವರು ಮನೆ ಕೆಲಸದಾಕೆಯಾಗಿ ಕೆಲಸಕ್ಕೆ ಸೇರಿದ್ದರು. ಕೆಲಸದ ಮನೆಯಲ್ಲಿ ತನಗೆ ನಿರಂತರ ಅವಮಾನ ಮಾಡಲಾಗಿದೆ, ನಿಂದಿಸಿ ಅವಮಾನ ಮಾಡಲಾಗಿದೆ. ಸರಿಯಾಗಿ ಊಟವನ್ನು ನೀಡದೇ ಕಿರುಕುಳ ನೀಡಿದ್ದಾರೆ ಎಂದು ಪ್ರಿಯಾಂಕಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಫೋನ್ ಕಸಿದು ಒಡೆದು ಹಾಕಿದ ಆರೋಪ:
ಸೆಪ್ಟೆಂಬರ್ 29ರಂದು ಮನೆಕೆಲಸದಾಕೆ ಪ್ರಿಯಾಂಕಾ ಹಾಗೂ ನಟಿ ಡಿಂಪಲ್ ದಂಪತಿ ನಡುವೆ ಜಗಳವಾಗಿದೆ. ಈ ವೇಳೆ ತನ್ನ ಮೇಲೆ ದಂಪತಿಗಳು ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾರೆ ಎಂದು ಪ್ರಿಯಾಂಕಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ದಂಪತಿಗಳು ನನಗೆ ಬೆದರಿಕೆ ಹಾಕಿದ್ದಾರೆ. ಘಟನೆಯನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾಗ ಡೇವಿಡ್ ನನ್ನ ಫೋನ್ ಕಸಿದು ಒಡೆದಿದ್ದಾರೆ ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ.
ಇದಕ್ಕೂ ಮೊದಲು 2023 ರಲ್ಲಿ ಡಿಂಪಲ್ ಹಾಗೂ ಪತಿ ಡೇವಿಡ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಈ ದಂಪತಿಗಳು ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ ಅವರ ನಿವಾಸದಲ್ಲಿ ನಿಲ್ಲಿಸಲಾಗಿದ್ದ ಅವರ ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು. ಡೇವಿಡ್ ಆಕಸ್ಮಿಕವಾಗಿ ರಾಹುಲ್ ಅವರ ಕಾರಿಗೆ ಡಿಕ್ಕಿ ಹೊಡೆದಾಗ ಈ ಘಟನೆ ಸಂಭವಿಸಿತ್ತು, ನಂತರ ಅಧಿಕಾರಿಯ ಚಾಲಕ ಚೇತನ್ ಕುಮಾರ್ ನಟನ ಬಳಿ ಕಾರಿಗಾದ ಹಾನಿಯ ಬಗ್ಗೆ ಪ್ರಶ್ನಿಸಿದಾಗ ಡಿಂಪಲ್ ಹಯಾತಿ ಕಾರಿಗೆ ಮತ್ತಷ್ಟು ಹಾನಿ ಮಾಡಿದರು ಇದರಿಂದಾಗಿ ಚೇತನ್‌ಕುಮಾರ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ದಂಪತಿ ವಿರುದ್ಧ ದೂರು ದಾಖಲಿಸಿದರು.
ಇದನ್ನೂ ಓದಿ: ಇವ್ರು ಮೇಷ್ಟ್ರು ಹೆಂಗಾದ್ರೋ: ಬಿಸಿಯೂಟದವರಿಗೆ ನೀಡಿದ್ದ ಚೆಕ್‌ನಲ್ಲಿ ಹಲವು ಮಿಸ್ಟೆಕ್: ಬ್ಯಾಂಕ್‌ನಿಂದ ಚೆಕ್ ರಿಜೆಕ್ಟ್
ಇದನ್ನೂ ಓದಿ: ಪೊಲೀಸರಲ್ಲ ಪಾಪಿಗಳು, ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಪೊಲೀಸರು
ಇದನ್ನೂ ಓದಿ: 35ರ ಯುವತಿ ಮದ್ವೆಯಾಗಿ ಮರುದಿನವೇ 75ರ ವೃದ್ಧ ಸಾವು: ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ
ಇದನ್ನೂ ಓದಿ: ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ 20ರ ಹರೆಯದ ಭಜರಂಗದಳ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.