ಪ್ರಭಾಸ್ ಬರ್ತ್‌ಡೇಗೆ ಬಾಕ್ಸ್ ಆಫೀಸ್ ಶೇಕ್ ಮಾಡುವ ಸರ್ಪ್ರೈಸ್? ಎಲ್ಲರ ಕಣ್ಣು ಅ.23ರ ಮೇಲೆ!

Published : Oct 08, 2026, 05:52 PM IST
Prabhas birthday surprise

ಸಾರಾಂಶ

ಡಾರ್ಲಿಂಗ್ ಪ್ರಭಾಸ್ ಬರ್ತ್‌ಡೇಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಅಕ್ಟೋಬರ್ 23ರಂದು ಪ್ರಭಾಸ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಹಾಗೂ ‘ಸಲಾರ್ 2’ ಸಿನಿಮಾಗಳಿಂದ ಬಿಗ್ ಅಪ್‌ಡೇಟ್ ಸಿಗಬಹುದು.

ಡಾರ್ಲಿಂಗ್ ಪ್ರಭಾಸ್ ಬರ್ತ್‌ಡೇ ಮಂತ್ ಶುರುವಾಗಿದೆ. ಅಕ್ಟೋಬರ್ 23ರಂದು ಪ್ರಭಾಸ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಈಗಾಗಲೇ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದೇ ವೇಳೆ ಪ್ರಭಾಸ್ ಕೈಯಲ್ಲಿರುವ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿಂದ ಬರ್ತ್‌ಡೇ ಸ್ಪೆಷಲ್‌ ಆಗಿ ಭರ್ಜರಿ ಅಪ್‌ಡೇಟ್‌ಗಳು ಹೊರಬರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಪ್ರಭಾಸ್ ಸದ್ಯ ‘ಫೌಜಿ’, ‘ಸ್ಪಿರಿಟ್’, ‘ಕಲ್ಕಿ 2’ ಸೇರಿದಂತೆ ಹಲವು ಕ್ರೇಜಿ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಈ ಬಾರಿಯ ಬರ್ತ್‌ಡೇಗೆ ಒಂದಲ್ಲ, ಬರೋಬ್ಬರಿ ನಾಲ್ಕು ಸಿನಿಮಾಗಳಿಂದ ಸರ್ಪ್ರೈಸ್ ಅಪ್‌ಡೇಟ್‌ಗಳು ಸಿಗಬಹುದು ಎಂಬ ನಿರೀಕ್ಷೆ ಡಾರ್ಲಿಂಗ್ ಫ್ಯಾನ್ಸ್‌ನಲ್ಲಿದೆ.

‘ಫೌಜಿ’ಯಿಂದ ಟೀಸರ್ ಬರಲಿದೆಯಾ?

ಹನು ರಾಘವಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫೌಜಿ’ ಮೇಲೆ ಪ್ರಭಾಸ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಚಿತ್ರದ ಬಗ್ಗೆ ಭಾರೀ ಹೈಪ್ ಕ್ರಿಯೇಟ್ ಆಗಿದೆ.

ಹೀಗಾಗಿ ಪ್ರಭಾಸ್ ಬರ್ತ್‌ಡೇ ಪ್ರಯುಕ್ತ ‘ಫೌಜಿ’ಯಿಂದ ಯಾವುದೇ ವಿಡಿಯೋ ಅಪ್‌ಡೇಟ್ ಅಥವಾ ಟೀಸರ್ ಬಿಡುಗಡೆಯಾಗಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಡಾರ್ಲಿಂಗ್ ಸೈನಿಕನ ಲುಕ್ ಹೇಗಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.

‘ಸ್ಪಿರಿಟ್’ನಲ್ಲಿ ಪೊಲೀಸ್ ಅವತಾರ ಹೇಗಿರಲಿದೆ?

ಪ್ರಭಾಸ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ‘ಸ್ಪಿರಿಟ್’. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗಾಗಲೇ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಪ್ರಭಾಸ್ ಪೊಲೀಸ್ ಗೆಟಪ್‌ಗೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ಹೈಪ್ ಇದ್ದು, ಬರ್ತ್‌ಡೇ ದಿನ ‘ಸ್ಪಿರಿಟ್’ನಿಂದ ಡಾರ್ಲಿಂಗ್ ಅವರ ಹೊಸ ಲುಕ್ ರಿವೀಲ್ ಆಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಒಂದು ವೇಳೆ ಹೊಸ ಲುಕ್ ಹೊರಬಂದರೆ ಅದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸದ್ದು ಮಾಡುವುದರಲ್ಲಿ ಅನುಮಾನವೇ ಇಲ್ಲ.

‘ಕಲ್ಕಿ 2’ಯಿಂದಲೂ ಸರ್ಪ್ರೈಸ್?

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭರ್ಜರಿ ಯಶಸ್ಸು ಕಂಡ ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ ‘ಕಲ್ಕಿ 2’ ಮೇಲೂ ನಿರೀಕ್ಷೆಗಳು ತಾರಕಕ್ಕೇರಿವೆ. ಪ್ರಭಾಸ್ ಇನ್ನೂ ಸೀಕ್ವೆಲ್‌ನ ಶೂಟಿಂಗ್‌ನಲ್ಲಿ ಜಾಯಿನ್ ಆಗಿಲ್ಲ ಎನ್ನಲಾಗುತ್ತಿದ್ದರೂ, ಅವರ ಬರ್ತ್‌ಡೇ ಪ್ರಯುಕ್ತ ಚಿತ್ರದ ಬಗ್ಗೆ ಯಾವುದಾದರೂ ವಿಶೇಷ ಅಪ್‌ಡೇಟ್ ಸಿಗಬಹುದು ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಪ್ರಭಾಸ್ ಫ್ಯಾನ್ಸ್‌ಗಾಗಿ ನಾಗ್ ಅಶ್ವಿನ್ ತಂಡ ಏನಾದರೂ ವಿಶೇಷ ಸರ್ಪ್ರೈಸ್ ಪ್ಲಾನ್ ಮಾಡಿದ್ಯಾ ಎಂಬ ಕುತೂಹಲವೂ ಇದೀಗ ಹೆಚ್ಚಾಗಿದೆ.

ಹಾಗಾದ್ರೆ ‘ಸಲಾರ್ 2’ ಕಥೆ ಏನು?

ಇವೆಲ್ಲದರ ನಡುವೆ ಪ್ರಭಾಸ್ ಅಭಿಮಾನಿಗಳ ಪ್ರಮುಖ ನಿರೀಕ್ಷೆ ‘ಸಲಾರ್ 2’ ಮೇಲೂ ಇದೆ. ‘ಸಲಾರ್: ಸೀಸ್‌ಫೈರ್’ ಬಳಿಕ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೀಗಾಗಿ ಅಕ್ಟೋಬರ್ 23ರಂದು ‘ಸಲಾರ್ 2’ ಶೂಟಿಂಗ್ ಅಥವಾ ಚಿತ್ರದ ಮುಂದಿನ ಹಂತಕ್ಕೆ ಸಂಬಂಧಿಸಿದಂತೆ ಯಾವುದಾದರೂ ಕ್ಲಾರಿಟಿ ಸಿಗಬಹುದೇ ಎಂಬ ಚರ್ಚೆ ಜೋರಾಗಿದೆ. ಇದರ ಜೊತೆಗೆ ಚರ್ಚೆಯ ಹಂತದಲ್ಲಿರುವ ಪ್ರಭಾಸ್ ಅವರ ಇತರ ಸಿನಿಮಾಗಳ ಬಗ್ಗೆಯೂ ಬರ್ತ್‌ಡೇ ದಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ಈ ಬಾರಿ ಡಾರ್ಲಿಂಗ್ ಪ್ರಭಾಸ್ ಬರ್ತ್‌ಡೇ ಫ್ಯಾನ್ಸ್‌ಗೆ ಸಖತ್ ಸ್ಪೆಷಲ್ ಆಗುವ ನಿರೀಕ್ಷೆಯಿದೆ. ‘ಫೌಜಿ’ ಟೀಸರ್, ‘ಸ್ಪಿರಿಟ್’ ಹೊಸ ಲುಕ್, ‘ಕಲ್ಕಿ 2’ ಅಪ್‌ಡೇಟ್ ಅಥವಾ ‘ಸಲಾರ್ 2’ಗೆ ಸಂಬಂಧಿಸಿದ ಮಾಹಿತಿ-ಇವೆಲ್ಲದರ ಪೈಕಿ ಯಾವ ಸರ್ಪ್ರೈಸ್ ಅಕ್ಟೋಬರ್ 23ರಂದು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2008ರಲ್ಲೇ ಭಾರತದಲ್ಲಿ OTT ಆರಂಭಿಸಿದ್ದ ಸಂಸ್ಥೆ ಯಾವುದು? ಇಂದಿನ ಜನರಿಗೂ ಗೊತ್ತಿಲ್ಲ ಈ ಕಥೆ!
Nana Patekar: ಆ ಪಾತ್ರ ನನ್ನನ್ನು ಸಾಯಿಸಿಬಿಡುತ್ತದೆ ಎಂದಿದ್ದ ಪಾಟೇಕರ್; ಕೊನೆಗೆ ಅವರ ಸಾವಿಗೂ ಕಾರಣವಾಯ್ತಾ?