
ಟಾಲಿವುಡ್ ಯಂಗ್ ಟೈಗರ್ ಜೂ. ಎನ್‌ಟಿಆರ್ ಹಾಗೂ ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರ್ಯಾಗನ್' ಸಿನಿಮಾ ಮೇಲೆ ಭಾರಿ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಶೂಟಿಂಗ್ ವೇಳೆ ಎನ್‌ಟಿಆರ್ ಭುಜಕ್ಕೆ ಗಾಯವಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರು ಆರ್ಥ್ರೋಸ್ಕೋಪಿಕ್ ಸರ್ಜರಿ ಮಾಡಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ಮತ್ತೆ ಶೂಟಿಂಗ್‌ಗೆ ಮರಳುವ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ಅಕ್ಟೋಬರ್ ಮೊದಲ ವಾರದಿಂದ ಎನ್‌ಟಿಆರ್ 'ಡ್ರ್ಯಾಗನ್' ಹೊಸ ಶೆಡ್ಯೂಲ್‌ನಲ್ಲಿ ಭಾಗಿಯಾಗಲಿದ್ದಾರೆ. ಹೀರೋಗೆ ಗಾಯವಾದರೂ ನಿರ್ದೇಶಕ ಪ್ರಶಾಂತ್ ನೀಲ್ ಸಮಯ ವ್ಯರ್ಥ ಮಾಡಿಲ್ಲ. ಎನ್‌ಟಿಆರ್ ಇಲ್ಲದ ದೃಶ್ಯಗಳನ್ನು ಹಾಗೂ ಇತರ ನಟರ ಪ್ರಮುಖ ಭಾಗಗಳನ್ನು ಅವರು ಈಗಾಗಲೇ ಮುಗಿಸಿದ್ದಾರೆ. ಚಿತ್ರತಂಡದ ಪ್ರಕಾರ ಶೇ.70ರಷ್ಟು ಶೂಟಿಂಗ್ ಕಂಪ್ಲೀಟ್ ಆಗಿದೆ. ಅಕ್ಟೋಬರ್‌ನಿಂದ ಮುಂದಿನ ವರ್ಷದ ಫೆಬ್ರವರಿವರೆಗೆ ನಾನ್‌ಸ್ಟಾಪ್ ಶೂಟಿಂಗ್ ನಡೆಯಲಿದ್ದು, 'ಡ್ರ್ಯಾಗನ್' ಸೀಕ್ವೆಲ್‌ನ ಕೆಲವು ದೃಶ್ಯಗಳನ್ನೂ ಇದೇ ವೇಳೆ ಸೆರೆಹಿಡಿಯಲಿದ್ದಾರೆ.
ಮಾಸ್ ಆಕ್ಷನ್ ಕಥೆ.. ಸೆನ್ಸೇಷನಲ್ ಪಾತ್ರ
ಪ್ರಶಾಂತ್ ನೀಲ್ ಸಿನಿಮಾಗಳೆಂದರೆ ಅಲ್ಲಿ ಯೂನಿವರ್ಸಲ್ ಆಕ್ಷನ್, ಡಾರ್ಕ್ ಶೇಡ್ಸ್ ಇದ್ದೇ ಇರುತ್ತದೆ. ಈ ಸಿನಿಮಾದಲ್ಲೂ ಎನ್‌ಟಿಆರ್ ಹಿಂದೆಂದೂ ಕಾಣದ ಡಿಫರೆಂಟ್ ಮಾಸ್ ಲುಕ್‌ನಲ್ಲಿ ಅಬ್ಬರಿಸಲಿದ್ದಾರೆ. ಇಂಟರ್‌ನ್ಯಾಷನಲ್ ಓಪಿಯಂ ಹಾಗೂ ಹೆರಾಯಿನ್ ನೆಟ್‌ವರ್ಕ್ ಮೇಲೆ ಹಿಡಿತ ಸಾಧಿಸಲು ನಡೆಯುವ ಭೀಕರ ಯುದ್ಧವೇ ಈ ಚಿತ್ರದ ಕಥೆ. ಆಫ್ಘನ್ ಟ್ರೇಡಿಂಗ್ ಕಂಪನಿಯ ಕ್ರೂರ ಹಂತಕ 'ಲೂಗರ್' ಆಗಿ ಎನ್‌ಟಿಆರ್ ಪಾತ್ರವನ್ನು ಗ್ಲಿಂಪ್ಸ್‌ನಲ್ಲಿ ಪರಿಚಯಿಸಿದ್ದು, ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿದೆ.
ಈ ಬೃಹತ್ ಆಕ್ಷನ್ ಡ್ರಾಮಾದಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್, ಮಲಯಾಳಂನ ಹಿರಿಯ ನಟ ಬಿಜು ಮೆನನ್ ಹಾಗೂ ಕನ್ನಡದ ನಟಿ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜಗತ್ತಿನಾದ್ಯಂತ ಸಿನಿಪ್ರಿಯರು ಕಾಯುತ್ತಿರುವ ಈ ಚಿತ್ರವನ್ನು 2027ರ ಜೂನ್ 11ರಂದು ಗ್ರ್ಯಾಂಡ್ ಆಗಿ ಥಿಯೇಟರ್‌ಗೆ ತರಲು ನಿರ್ಮಾಪಕರು ಪ್ಲಾನ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.