
ಸಿನಿ ಜಗತ್ತಿನಲ್ಲಿ ದಿನಕ್ಕೊಂದು ಬೆರಗುಗೊಳಿಸುವ, ಕೆಲವೊಮ್ಮೆ ನಂಬಲಾಸಧ್ಯ ಎನಿಸುವಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಹಿಂದಿನ ಆನ್‌ಟೋಲ್ಡ್ ಸ್ಟೋರಿಗಳು ವೈರಲ್ ಆಗುತ್ತಲೇ ಇರುತ್ತವೆ. ಈ ಬಗ್ಗೆ ಅಭಿಮಾನಿಗಳಿಗೂ ತಿಳಿಯಲು ಎಲ್ಲಿಲ್ಲದ ಉತ್ಸಾಹ ಇರುತ್ತದೆ. ಅದರಲ್ಲೂ ರಜನಿಕಾಂತ್ ಬಗ್ಗೆ ಹರಿದಾಡುವ ಸುದ್ದಿಗಳು, ಕಥೆಗಳು, ಜೋಕ್ಸ್ ತುಂಬಾ ಕುತೂಹಲಕಾರಿಯಾಗಿರುತ್ತವೆ. ಇದೀಗ ಅಂತಹದ್ದೊಂದು ಸುದ್ದಿ ಬಹಿರಂಗಗೊಂಡಿದೆ.
ಹಿರಿಯ ನಟಿ ಹಾಗೂ ಮಾಜಿ ಸಚಿವೆ ರೋಜಾ 90ರ ದಶಕದ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದರು.1990ರ ದಶಕದಲ್ಲಿ ತೆಲುಗು ಚಿತ್ರರಂಗದ ಜನಪ್ರಿಯ ನಾಯಕಿಯರಲ್ಲಿ ಒಬ್ಬರಾಗಿದ್ದರು. ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮತ್ತು ವೆಂಕಟೇಶ್ ಸೇರಿದಂತೆ ಹಲವು ಪ್ರಮುಖ ನಟರೊಂದಿಗೆ ಅವರು ಅಭಿನಯಿಸಿದ್ದರು ಅಷ್ಟೇ ಅಲ್ಲ, ಬಹಳಷ್ಟು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ.
ತೆಲುಗು ಕನ್ನಡ ಸಿನಿಮಾಗಳು ಮಾತ್ರವಲ್ಲದೆ ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಬಗ್ಗೆ ಮಾತಾಡುತ್ತಿರುವ ಚಿತ್ರರಂಗದಲ್ಲಿನ ತಮ್ಮ ವೃತ್ತಿಜೀವನದಲ್ಲಾದ ಅನುಭವಗಳನ್ನು, ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು. ಈ ವೇಳೆ ಅವರು ಹೇಳಿದ ರಜನಿಕಾಂತ್ ಕುರಿತು ಒಂದು ಘಟನೆ ತುಂಬಾ ಕುತೂಹಲಕಾರಿಯಾಗಿದೆ.
ಸಂದರ್ಶನದಲ್ಲಿ ರೋಜಾ ವಿಶೇಷವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ಕೆಲಸ ಮಾಡುವಾಗ ತಮ್ಮ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅಂದಹಾಗೆ ನಟಿ ರೋಜಾ ರಜನಿಕಾಂತ್ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಟಿಸಿದ ಸಿನಿಮಾಗಳಲ್ಲಿನ, ಶೂಟಿಂಗ್ ಸೆಟ್‌ನಲ್ಲಿ ರಜನಿಕಾಂತ್ ಜೊತೆಗಿನ ನೆನಪುಗಳನ್ನ ಸ್ಮರಸಿದ್ದಾರೆ. ರಜನಿಕಾಂತ್ ನೋಡೋಕೆ ತುಂಬಾ ಸಿರಿಯೆಸ್ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ನಟಿ ರೋಜಾ ಹೇಳುವುದೇ ಬೇರೆ. ರಜನಿ ತುಂಬಾ ಹಾಸ್ಯಪ್ರಿಯ ವ್ಯಕ್ತಿ. ತಮ್ಮೊಂದಿಗೆ ಅವರು ಯಾವಾಗಲೂ ಸ್ನೇಹದಿಂದ ಬಲು ತಮಾಷೆಯಾಗಿ ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಒಮ್ಮೆ ರಜನಿಕಾಂತ್ ಅವರೊಂದಿಗೆ ತಮಿಳು ನಟಿ ಮೀನಾ ಅವರಿಗೂ ಒಂದು ಆಸಕ್ತಿದಾಯಕ ಮಾತುಕತೆ ನಡೆದಿತ್ತು. 'ರಜನಿಕಾಂತ್ ಅವರು ನನ್ನೊಂದಿಗೆ ಯಾವಾಗಲೂ ಗಂಭೀರವಾಗಿ ಮಾತನಾಡುತ್ತಾರೆ. ಆದರೆ ನಿಮ್ಮೊಂದಿಗೆ ಮಾತ್ರ ಬೇರೆ ರೀತಿಯಲ್ಲಿ ವರ್ತಿಸುತ್ತಾರೆ ಏಕೆ?' ಎಂದು ಮೀನಾ ಒಮ್ಮೆ ರೋಜಾ ಅವರನ್ನು ಕೇಳಿದ್ದರಂತೆ.
ಅದಕ್ಕೆ ರೋಜಾ ತಮಾಷೆಯಾಗಿ ಉತ್ತರಿಸಿದ್ದರು. 'ನೀವು ಗಂಭೀರವಾಗಿರುತ್ತೀರಿ. ಹಾಗಾಗಿ ನಿಮ್ಮೊಂದಿಗೆ ಏನು ಮಾತನಾಡಬೇಕು ಎಂಬುದು ಅವರಿಗೆ ಗೊತ್ತಾಗದೆ ಅವರೂ ಗಂಭೀರವಾಗಿರುತ್ತಾರೆ' ಎಂದು ರೋಜಾ ಹೇಳಿದ್ದರಂತೆ. ನಾನು ಎಲ್ಲರೊಂದಿಗೂ ಸದಾ ಸ್ನೇಹದಿಂದ ಮತ್ತು ಖುಷಿಯಿಂದ ಇರುತ್ತಿದ್ದೆ. ಅದೇ ಕಾರಣಕ್ಕೆ ರಜನಿಕಾಂತ್ ಕೂಡ ತಮ್ಮೊಂದಿಗೆ ಆರಾಮವಾಗಿ ತಮಾಷೆ ಮಾಡುತ್ತಿದ್ದರು ಎಂದು ರೋಜಾ ಹೇಳಿದ್ದಾರೆ.
ಶೂಟಿಂಗ್ ವೇಳೆ ನಡೆದ ಮತ್ತೊಂದು ತಮಾಷೆಯ ಘಟನೆಯನ್ನೂ ರೋಜಾ ನೆನಪಿಸಿಕೊಂಡಿದ್ದಾರೆ. 'ಊಟದ ನಂತರ ನಾನು ಈಸಿ ಚೇರ್‌ನಲ್ಲಿ ಮಲಗುತ್ತಿದ್ದೆ. ಸಮಯ ಸಿಕ್ಕಾಗ, ವಿಶೇಷವಾಗಿ ಹಾಡುಗಳ ಚಿತ್ರೀಕರಣ ಹಾಗೂ ಕ್ಲೋಸ್‌ಅಪ್ ದೃಶ್ಯಗಳ ಮೊದಲು ತಾವು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯುತ್ತಿದ್ದೆ . ಹೀಗೆ ಒಮ್ಮೆ ನಾನು ಮಲಗಿದ್ದಾಗ ರಜನಿಕಾಂತ್ ತಮ್ಮೊಂದಿಗೆ ತಮಾಷೆ ಮಾಡಲು ಶುರು ಮಾಡಿದರು. ಅವರು ಛತ್ರಿ ಹಿಡಿದು ನನ್ನ ಅವರ ಬಳಿ ನಿಂತುಕೊಂಡರು. ನಾನು ಆಗ ನಿದ್ದೆಯಲ್ಲಿದ್ದೆ. ಮಲಗಿರುವಾಗಲೇ ನನ್ನ ಫೋಟೋಗಳನ್ನು ತೆಗೆದಿದ್ದರು. ಎಚ್ಚರವಾದಾಗ ತಮ್ಮ ಸುತ್ತಲೂ ಹಲವು ಜನರು ನಿಂತಿರುವುದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ನಂತರ ಛತ್ರಿ ಹಿಡಿದು ರಜನಿಕಾಂತ್ ಅಲ್ಲೇ ನಿಂತಿರುವುದನ್ನು ನೋಡಿದೆ' ಈ ಘಟನೆಯನ್ನು ತಮ್ಮ ಚಿತ್ರರಂಗದ ವೃತ್ತಿಜೀವನದ ತಮಾಷೆಯ ನೆನಪುಗಳಲ್ಲಿ ಒಂದಾಗಿ ರೋಜಾ ನೆನಪಿಸಿಕೊಂಡಿದ್ದಾರೆ. ಎಲ್ಲರ ಮುಂದೆಯೇ ಈ ರೀತಿಯ ತಮಾಷೆಗಳನ್ನು ಮಾಡುವುದು ರಜನಿಕಾಂತ್ ಅವರ ಸ್ವಭಾವವಾಗಿತ್ತು ಎಂದು ಅವರು ಹೇಳಿದ್ದಾರೆ.
ಹಾಗೆಯೇ ಹಿರಿಯ ನಟ ಶಿವಾಜಿ ಗಣೇಶನ್ ಅವರ ಬಗ್ಗೆಯೂ ರೋಜಾ ಮಾತನಾಡಿದ್ದಾರೆ. ಅಷ್ಟು ಹಿರಿಯ ನಟರಾಗಿದ್ದರೂ ಅವರು ಶೂಟಿಂಗ್ ಸೆಟ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಊಟದ ವಿರಾಮವಾಗುವವರೆಗೂ ಅವರು ಶೂಟಿಂಗ್ ಸೆಟ್‌ನಿಂದ ಹೊರಗೆ ಹೋಗುತ್ತಿರಲಿಲ್ಲ. ಹಿರಿಯ ನಟರ ಈ ಶ್ರದ್ಧೆ ಮತ್ತು ವೃತ್ತಿಪರತೆಯಿಂದ ಯುವ ಪೀಳಿಗೆ ಕಲಿಯುವುದು ಸಾಕಷ್ಟಿದೆ ಎಂದು ರೋಜಾ ಹೇಳಿದ್ದಾರೆ.
ಕಮಲ್ ಹಾಸನ್ ಅವರೊಂದಿಗೆ ನೀವು ಏಕೆ ನಟಿಸಿಲ್ಲ ಎಂಬ ಪ್ರಶ್ನೆಗೂ ರೋಜಾ ಉತ್ತರಿಸಿದ್ದಾರೆ. ಅವರೊಂದಿಗೆ ನಟಿಸುವ ಅವಕಾಶವನ್ನು ತಾವು ಸ್ವೀಕರಿಸದೇ ಇರಲು ನಿರ್ಧರಿಸಿದ್ದಾಗಿ ಅವರು ಹೇಳಿದ್ದಾರೆ. ಇದಕ್ಕೆ ಕಾರಣವನ್ನು ಹೇಳಿದ್ದಾರೆ. 'ಅವರೊಂದಿಗೆ ನಟಿಸಲು ನನಗೆ ಆಸಕ್ತಿ ಇರಲಿಲ್ಲ. ಅದು ಸಂಪೂರ್ಣವಾಗಿ ನನ್ನ ವೈಯಕ್ತಿಕ ನಿರ್ಧಾರವಾಗಿತ್ತು' ಎಂದು ರೋಜಾ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.