
ಕನ್ನಡ ಸಿನಿಮಾದಲ್ಲಿ ಅಮೋಘ ಪ್ರಯೋಗ ಕಂಡ ಚಿತ್ರಗಳಲ್ಲಿ ಒಂದು ಬ್ಲಾಕ್ಬಸ್ಟರ್ ಸಿನಿಮಾ ಮುತ್ತಿನ ಹಾರ. 1990ರಲ್ಲಿ ತೆರೆಕಂಡ 'ಮುತ್ತಿನ ಹಾರ' ಸಿನಿಮಾಕ್ಕೆ ಕಳೆದ ಏಪ್ರಿಲ್ನಲ್ಲಿ 35 ವರ್ಷ ತುಂಬಿದೆ. 'ಸಾಹಸ ಸಿಂಹ' ಡಾ. ವಿಷ್ಣುವರ್ಧನ್ ಮತ್ತು ಮೋಹಕ ತಾರೆ ಸುಹಾಸಿನಿ ನಟಿಸಿರುವ ಈ ಚಿತ್ರವನ್ನು ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿದ್ದರು. ಈ ಸಿನಿಮಾವನ್ನು ಕಲ್ಟ್ ಸಿನಿಮಾಗಳ ವಿಭಾಗಕ್ಕೆ ಸೇರಿಸಲಾಗುತ್ತದೆ. ಕೊಡಗು ಮೂಲದ ಹೀರೋ ಅಚ್ಚಪ್ಪ, ಗಡಿಯಲ್ಲಿ ಯೋಧನಾಗಿರುತ್ತಾನೆ. ಆತನ ಬದುಕಿನಲ್ಲಿ ಸಂಭವಿಸುವ ದುರಂತ ಕಥೆಯನ್ನು ಮುತ್ತಿನ ಹಾರದಲ್ಲಿ ನೋಡಬಹುದಾಗಿದೆ. ಒಬ್ಬ ಯೋಧನ ಜೀವನಕ್ರಮವನ್ನು ಅತ್ಯಂತ ಮನೋಜ್ಞವಾಗಿ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಕಾಶ್ಮೀರ, ರಾಜಸ್ಥಾನ ಹೀಗೆ ಅನೇಕ ಶೂಟಿಂಗ್ ಮಾಡಲಾಗಿತ್ತು. ಆಗಿನ ಕಾಲಕ್ಕೆ ಇದರ ಬಜೆಟ್ ಕೂಡ ದುಬಾರಿ ಎನಿಸಿತ್ತು. ಈ ಚಿತ್ರದ ಹಾಡುಗಳಲ್ಲಿ ಇಂದಿಗೂ ಎವರ್ಗ್ರೀನ್ ಎನ್ನಿಸಿರುವುದು ಮಡಿಕೇರಿ ಸಿಪಾಯಿ ಹಾಡು.
ಈ ಹಾಡನ್ನು ಈಗ ಮಹಾನಟಿ ವೇದಿಕೆಯಲ್ಲಿ ಪ್ರೇಮಾ ಮತ್ತು ತರುಣ್ ಸುಧೀರ್ ರೀಕ್ರಿಯೇಟ್ ಮಾಡಿದ್ದಾರೆ. ಅಷ್ಟಕ್ಕೂ ವಿಷ್ಣುವರ್ಧನ್ ಅವರ ನಟನೆ, ಅವರ ಡಾನ್ಸ್, ಅವರ ಅಭಿನಯ ಎಲ್ಲವೂ ವಿಭಿನ್ನವಾಗಿತ್ತು. ಕೆಲವೊಂದು ಐಕಾನಿಕ್ ಸ್ಟೈಲ್ಗೆ ಅವರು ಹೆಸರುವಾಸಿಯಾಗಿದ್ದಾರೆ. ಅವರ ಒಂದಿಷ್ಟು ಚಿಕ್ಕ ಸ್ಟೈಲ್ ಮಾಡಿದ್ರೂ ಸಾಕು, ಅದು ವಿಷ್ಣುದಾದಾ ಸ್ಟೈಲ್ ಎಂದೇ ಎನ್ನಿಸಿಕೊಳ್ಳುತ್ತದೆ. ಹೀಗೆ ಅವರ ಸ್ಟೈಲ್ನಲ್ಲಿಯೇ ಸೊಗಸಾಗಿ ವಿಷ್ಣುವರ್ಧನ್ ಅವರ ಅಭಿನಯವನ್ನು ಮಡಿಕೇರಿ ಸಿಪಾಯಿ ಹಾಡಿಗೆ ಕಟ್ಟಿಕೊಟ್ಟಿದ್ದಾರೆ ನಟ, ನಿರ್ದೇಶಕ ತರುಣ್ ಸುಧೀರ್. ನಟಿ ಅದೇ ರೀತಿ ನಟಿ ಪ್ರೇಮಾ ಅವರಿಗೆ ಈಗ ವಯಸ್ಸು 48 ಆಗಿದ್ದರೂ ಡಾನ್ಸ್, ಅಭಿನಯದಲ್ಲಿ ಇನ್ನೂ ಅದೇ ಸೊಗಸನ್ನು, ಅದೇ ಚೈತನ್ಯವನ್ನು ಉಳಿಸಿಕೊಂಡವರು. ಅವರು ಸುಹಾನಿಸಿಯಾಗಿ ಈ ಹಾಡಿಗೆ ಸ್ಟೆಪ್ ಹಾಕಿದ್ದಾರೆ.
ಆದರೆ, ಇಲ್ಲಿ ಪ್ರೇಮಾ ಅವರಿಗಿಂತಲೂ ನೆಟ್ಟಿಗರ ಮನಗೆದ್ದಿದ್ದು, ತರುಣ್ ಸುಧೀರ್ ಅವರು ವಿಷ್ಣುವರ್ಧನ್ ಆಗಿ ಸ್ಟೆಪ್ ಹಾಕಿದ್ದು. ಅದರಲ್ಲಿಯೂ ವಿಷ್ಣುವರ್ಧನ್ ಅವರ ಅಭಿಮಾನಿಗಳು ತರುಣ್ ಸುಧೀರ್ ಅವರ ನಟನೆಗೆ ಫಿದಾ ಆಗಿದ್ದು ಶ್ಲಾಘನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್ನು ಈ ಸಿನಿಮಾದ ಕುರಿತು ಹೇಳುವುದಾದರೆ, ಇದು ಹಲವು ವಿಶೇಷತೆಗಳಿಂದ ಕೂಡಿದೆ. ಕೊಡವ ಭಾಷೆಯಲ್ಲಿ ಒಂದು ಹಾಡನ್ನು ಮಾಡಿದ್ದು ಒಂದು ವಿಶೇಷ. 'ದೇವರು ಹೊಸೆದ ಪ್ರೇಮದ ದಾರ' ಎಂಬ ಹಾಡು ಎಲ್ಲರ ಮನದಲ್ಲಿ ಇಂದಿಗೂ ಹಚ್ಚ ಹಸಿರಾಗಿಯೇ ನೆಲೆಸಿದೆ. ಈ ಹಾಡನ್ನು ಎಂ. ಬಾಲಮುರಳಿಕೃಷ್ಣ ಅವರಿಂದ ಹಾಡಿಸಿದ್ದು ಮತ್ತೊಂದು ವಿಶೇಷ. ಅಸಲಿಗೆ, ಆರಂಭದಲ್ಲಿ ಈ ಹಾಡನ್ನು ಹಾಡುವುದಕ್ಕೆ ಬಾಲಮುರಳಿಕೃಷ್ಣ ಒಪ್ಪಿರಲಿಲ್ಲ. ಕೊನೆಗೆ ಹಾಗೋ ಹೀಗೋ ಮಾಡಿ ಅವರನ್ನು ಒಪ್ಪಿಸಿದ್ದರು ಹಂಸಲೇಖ ಮತ್ತು ಸಿಂಗ್ ಬಾಬು ಎನ್ನಲಾಗಿದೆ.
ಮುತ್ತಿನ ಹಾರದ ಕುರಿತು ಇನ್ನೂ ರೋಚಕ ಸಂಗತಿ ಏನೆಂದರೆ, ಕಾಶ್ಮೀರದಲ್ಲಿಯೂ ಇದರ ಶೂಟಿಂಗ್ ನಡೆದಿತ್ತು. ಅಂದಿನ ಕಾಶ್ಮೀರ ಹೇಗಿತ್ತು ಎನ್ನುವುದು ಗೊತ್ತೇ ಇದೆ. ಅಲ್ಲಿ ಈಗಿನಂತೆ ಶೂಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ಅಲ್ಲಿಯೂ ತುಂಬಾ ರಿಸ್ಕ್‌ಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲಾಗಿತ್ತು. ಅದಕ್ಕಾಗಿ ಅಪಾರ ಹಣವನ್ನು ತೆರಲಾಗಿತ್ತು. ಉನ್ನತ ಅಧಿಕಾರಿಗಳ ಅನುಮತಿ ಪಡೆಯುವುದು ಕೂಡ ರಿಸ್ಕಿ ಕೆಲಸವೇ ಆಗಿತ್ತು. ವಿಷ್ಣುವರ್ಧನ್ ಅವವರು ಪ್ಯಾರಾಶೂಟ್ ಬಳಸಿ ಮಾಡಿದ್ದ ಸ್ಟಂಟ್‌ವೊಂದು ಸರಿಯಾಗಿ ಆಗದೇ ಇದ್ದಿದ್ದರಿಂದ ಅವರ ಬೆನ್ನಿಗೆ ಪಟ್ಟಾಗಿರುವ ಘಟನೆಯೂ ಈ ಚಿತ್ರದ ಶೂಟಿಂಗ್ ವೇಳೆ ನಡೆದಿದೆ. ಇಷ್ಟೆಲ್ಲಾ ರಿಸ್ಕ್‌ಗಳೊಂದಿಗೆ ಮುತ್ತಿನ ಹಾರ ಸಿನಿಮಾ ರಿಲೀಸ್ ಆಗಿ ಹೊಸ ದಾಖಲೆಯನ್ನೇ ಬರೆದಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.