
ಸಿರ್ಸಾ(ಸೆ.19): ರೇಪ್ ಕೇಸಲ್ಲಿ ಜೈಲು ಪಾಲಾದ ರಾಮ್ ರಹೀಂನ ದತ್ತು ಪುತ್ರಿ ಹನಿಪ್ರೀತ್'ಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ರೀತಿ ಕಾಣಿಸಬೇಕೆಂಬ ಹಂಬಲ ಇತ್ತಂತೆ. ಇದಕ್ಕೆಂದೇ ವಿದೇಶದಿಂದ ತರಬೇತುದಾರ ರನ್ನು ಕರೆತಂದು ದಿನಕ್ಕೆ 3 ತಾಸು ತರಬೇತಿ ಪಡೆಯುತ್ತಿದ್ದಳಂತೆ.
ಕತ್ರಿನಾ ರೀತಿ ‘ಬೇಬಿ ಡಾಲ್’ ಆಗಿ ಕಾಣಿಸಿಕೊಳ್ಳಲು ಬಯಸಿದ್ದಳು ಎಂದು ಆಕೆಯ ಜಿಮ್ ತರಬೇತುದಾರ ಹೇಳಿದ್ದಾರೆ. ‘ಹನಿಪ್ರೀತ್ ಜೀರೋ ಫಿಗರ್ ಕಾಪಾಡಲು ಬಯಸಿದ್ದಳು, 'ಧೂಮ್ 3 ಹಾಡಿಗೆ ನೃತ್ಯ ಮಾಡುತ್ತಿದ್ದಳು. ಆಕೆ ಬಳಸುತ್ತಿದ್ದ ಜಿಮ್ ಅನ್ನೇ ರಾಮ್ ರಹೀಂ ಕೂಡ ಬಳಸುತ್ತಿದ್ದ’ ಎಂದು ತರಬೇತುದಾರ ಹೇಳಿದ್ದಾರೆ.
ವಾಂಟೆಡ್ ಪಟ್ಟಿಯಲ್ಲಿ ಹನಿಪ್ರೀತ್ ನಂ.1
ರಾಮ್ ರಹೀಂ ಸಿಂಗ್‌ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್, ಹರ್ಯಾಣದ 43 ಮಂದಿ ‘ವಾಂಟೆಡ್’ ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾಳೆ. ಅತ್ಯಾಚಾರ ಪ್ರಕರಣ ದಲ್ಲಿ ರಾಮ್ ರಹೀಂ ವಿರುದ್ಧ ಶಿಕ್ಷೆ ಘೋಷಣೆಯಾದ ಬಳಿಕ, ನಡೆದ ಹಿಂಸಾಚಾರ ಪ್ರಕರಣ ಸಂಬಂ‘ ೪೩ ಜನರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಅದರಲ್ಲಿ ಹನಿಪ್ರೀತ್ ಮೊದಲ ಸ್ಥಾನದಲ್ಲಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.