
ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ವೃತ್ತಿಜೀವನದಲ್ಲಿ ಲವ್ ಸ್ಟೋರಿ, ಫ್ಯಾಮಿಲಿ, ಆ್ಯಕ್ಷನ್ ಸಿನಿಮಾಗಳನ್ನು ಮಾಡಿದ್ದಾರೆ. 'ಗೋಪಾಲ ಗೋಪಾಲ' ಚಿತ್ರದಲ್ಲಿ ಶ್ರೀಕೃಷ್ಣನಾಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ಪೂರ್ಣ ಪ್ರಮಾಣದ ಭಕ್ತಿ ಪ್ರಧಾನ ಸಿನಿಮಾ ಮಾಡಿಲ್ಲ. ಆದರೆ, ಅವರಿಗೆ ಅಂತಹ ಒಂದು ಅವಕಾಶ ಬಂದಿತ್ತು. ಪರಮ ಶಿವಭಕ್ತನಾದ 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸುವ ಚಾನ್ಸ್ ಪವನ್ ಕಲ್ಯಾಣ್‌ಗೆ ಸಿಕ್ಕಿತ್ತು.
ಆದರೆ ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಖ್ಯಾತ ನಟ ತನಿಕೆಳ್ಳ ಭರಣಿ ಒಂದು ಸಂದರ್ಶನದಲ್ಲಿ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 'ಬಾಲು' ಸಿನಿಮಾ ಶೂಟಿಂಗ್ ವೇಳೆ ಪವನ್ ಕಲ್ಯಾಣ್ ಜೊತೆ ಒಂದು ಇಂಟರೆಸ್ಟಿಂಗ್ ಘಟನೆ ನಡೆಯಿತು. ಶೂಟಿಂಗ್ ನಡೆಯುತ್ತಿದ್ದಾಗ ಪವನ್ ಕಲ್ಯಾಣ್ ತಮ್ಮ ಕ್ಯಾರವಾನ್‌ನಲ್ಲಿದ್ದರು. ನಾನು ಅವರ ಅಸಿಸ್ಟೆಂಟ್‌ನನ್ನು ಕರೆದು, ಕಲ್ಯಾಣ್ ಇದ್ದಾರಾ, ಅವರೊಂದಿಗೆ ಒಂದು ವಿಷಯ ಮಾತನಾಡಬೇಕು ಎಂದು ಕೇಳಿದೆ. ಸಹಾಯಕ ಹೋಗಿ ಪವನ್ ಕಲ್ಯಾಣ್‌ಗೆ ತಿಳಿಸಿದರು.
ತಕ್ಷಣವೇ ಪವನ್ ನನ್ನನ್ನು ಕರೆದರು. ಆಗ ನಾನು ಬರೆದ 'ನಾಲೋನ ಶಿವುಡು ಗಲಡು' ಸಿಡಿಯನ್ನು ಅವರಿಗೆ ಕೊಟ್ಟೆ. ಸಮಯ ಸಿಕ್ಕರೆ ಒಮ್ಮೆ ಕೇಳಿ ಎಂದು ಹೇಳಿದೆ. ಖಂಡಿತ ಕೇಳುತ್ತೇನೆ ಎಂದರು. ಮರುದಿನ ಶೂಟಿಂಗ್‌ಗೆ ಬಂದ ತಕ್ಷಣ ಪವನ್ ಕಲ್ಯಾಣ್ ನನ್ನನ್ನು ಕರೆದರು. ನಾನು ಹೋಗುತ್ತಿದ್ದಂತೆ ಎದ್ದು ನಿಂತು, ಎರಡು ಕೈ ಚಾಚಿ ಬನ್ನಿ ಎಂದು ತಬ್ಬಿಕೊಂಡರು. 'ನಾನು ದೊಡ್ಡ ಭಕ್ತನೇನಲ್ಲ. ಆದರೆ ನಿಮ್ಮ ಸಿಡಿ ಕೇಳಿದ ಮೇಲೆ ನನ್ನಲ್ಲಿ ಏನೋ ತಿಳಿಯದ ಭಕ್ತಿ ಭಾವನೆ ಶುರುವಾಗಿದೆ' ಎಂದರು.
‘ರಾತ್ರಿಯಿಡೀ ನಿದ್ದೆ ಮಾಡಿಲ್ಲ. ಏನೋ ಒಂಥರಾ ಡಿಸ್ಟರ್ಬೆನ್ಸ್, ತುಂಬಾ ಹೊಸದಾಗಿ ಅನಿಸುತ್ತಿದೆ. ಇಂದು ಶೂಟಿಂಗ್‌ಗೆ ಬರಬಾರದು ಅಂದುಕೊಂಡಿದ್ದೆ. ಒಂದು ರೀತಿ ಟ್ರಾನ್ಸ್ ಸ್ಥಿತಿಗೆ ಹೋಗಿದ್ದೆ. ಶೂಟಿಂಗ್‌ಗೆ ಬರದಿದ್ದರೆ ಎಲ್ಲರೂ ಕಷ್ಟಪಡುತ್ತಾರೆ ಎಂದುಕೊಂಡು ಬಂದೆ’ ಎಂದು ಪವನ್ ನನ್ನ ಬಳಿ ಹೇಳಿದರು. ಶಿವಭಕ್ತನಾಗಿ ನಟಿಸಬೇಕೆಂಬ ಆಸೆ ಇದೆ ಎಂದೂ ಹೇಳಿದರು. ಇದು ನಡೆದ ಸ್ವಲ್ಪ ಸಮಯದ ನಂತರ, ನಾನು 'ಕಣ್ಣಪ್ಪ' ಸಿನಿಮಾ ಮಾಡಬೇಕೆಂದುಕೊಂಡೆ. ಹೋಗಿ ಪವನ್ ಕಲ್ಯಾಣ್‌ಗೆ ಹೇಳಿದೆ. ಕಣ್ಣಪ್ಪನಾಗಿ ನೀವು ನಟಿಸಬೇಕು ಎಂದು ಕೇಳಿದೆ.
ಪವನ್ ಕೂಡ ಆಸಕ್ತಿ ತೋರಿಸಿದರು. 'ಆದರೆ ಸದ್ಯ ನಾನು ಫ್ಲಾಪ್‌ಗಳಲ್ಲಿದ್ದೇನೆ. ಈ ಸಿನಿಮಾಗೆ ಬಜೆಟ್ ತುಂಬಾ ಬೇಕಾಗುತ್ತದೆ. ಸ್ವಲ್ಪ ಸಮಯದ ನಂತರ ಈ ಸಿನಿಮಾ ಮಾಡೋಣ' ಎಂದು ಹೇಳಿದರು. ಪರವಾಗಿಲ್ಲ, ತಕ್ಷಣವೇ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ನಾನು ಹೇಳಿದೆ. ಆದರೆ ಆ ನಂತರ ಪವನ್ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾದರು. ನಾನೂ ಕೂಡ 'ಕಣ್ಣಪ್ಪ' ಚಿತ್ರದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ. ಆ ಬಳಿಕ ಮಂಚು ವಿಷ್ಣು ಆ ಸಿನಿಮಾ ಮಾಡಿದರು ಎಂದು ತನಿಕೆಳ್ಳ ಭರಣಿ ವಿವರಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.