Kannadiga: 14 ನಿರ್ದೇಶಕರು, 58 ಸ್ಟಾರ್ಸ್ ನಡುವೆ ಮಿಂಚಿದ್ದ ಕನ್ನಡಿಗ! ಒಂದೇ ದಿನದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿ ಗಿನಿಸ್ ರೆಕಾರ್ಡ್ ಬರೆದ ಬ್ಲಾಕ್‌ಬಸ್ಟರ್ ಚಿತ್ರ!

Published : Jul 20, 2026, 10:03 PM IST
Swayamvara

ಸಾರಾಂಶ

ಬರೋಬ್ಬರಿ 58 ನಟ-ನಟಿಯರು ಹಾಗೂ 14 ಅನುಭವಿ ನಿರ್ದೇಶಕರ ಬೃಹತ್ ಸೈನ್ಯವನ್ನೇ ಕಟ್ಟಿಕೊಂಡು, ಸಂಪೂರ್ಣ ಸಿನಿಮಾವನ್ನು ಕೇವಲ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) ಶೂಟಿಂಗ್ ಮುಗಿಸಿ ಬಿಡುಗಡೆ ಮಾಡಲಾಗಿತ್ತು. ಈ ಐತಿಹಾಸಿಕ ಪವಾಡದ ನಡುವೆ ಪ್ರಮುಖ ಪಾತ್ರದಲ್ಲಿ ಕನ್ನಡಿಗನೊಬ್ಬ ಮಿಂಚಿ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಈ ಕಥೆಯ ಅತ್ಯಂತ ಕೌತುಕದ ವಿಷಯ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಸಿನಿಮಾ ಜಗತ್ತಿನಲ್ಲಿ ಒಂದೊಳ್ಳೆ ಬೃಹತ್ ಬಜೆಟ್ ಚಿತ್ರ ತಯಾರಾಗಬೇಕೆಂದರೆ ತಿಂಗಳುಗಳು, ಕೆಲವೊಮ್ಮೆ ವರ್ಷಗಳೇ ಬೇಕಾಗುತ್ತವೆ. ನಟ-ನಟಿಯರ ಕಾಲ್‌ಶೀಟ್, ಸೆಟ್‌ಗಳ ನಿರ್ಮಾಣ ಹಾಗೂ ಟೆಕ್ನಿಕಲ್ ಕಾರ್ಯಗಳಿಗೇ ಅಪಾರ ಸಮಯ ವ್ಯಯವಾಗುತ್ತದೆ. ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಂತಹದ್ದೊಂದು ವಿಚಿತ್ರ ಸಾಹಸ ನಡೆದಿದೆ. ಬರೋಬ್ಬರಿ 58 ನಟ-ನಟಿಯರು ಹಾಗೂ 14 ಅನುಭವಿ ನಿರ್ದೇಶಕರ ಬೃಹತ್ ಸೈನ್ಯವನ್ನೇ ಕಟ್ಟಿಕೊಂಡು, ಸಂಪೂರ್ಣ ಸಿನಿಮಾವನ್ನು ಕೇವಲ ಒಂದೇ ದಿನದಲ್ಲಿ (24 ಗಂಟೆಗಳಲ್ಲಿ) ಶೂಟಿಂಗ್ ಮುಗಿಸಿ ಬಿಡುಗಡೆ ಮಾಡಲಾಗಿತ್ತು. ಈ ಐತಿಹಾಸಿಕ ಪವಾಡದ ನಡುವೆ ಪ್ರಮುಖ ಪಾತ್ರದಲ್ಲಿ ಕನ್ನಡಿಗನೊಬ್ಬ ಮಿಂಚಿ, ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದು ಈ ಕಥೆಯ ಅತ್ಯಂತ ಕೌತುಕದ ವಿಷಯ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಕೇವಲ 23 ಗಂಟೆ 58 ನಿಮಿಷಗಳಲ್ಲಿ 'ಮಹಾ ಮ್ಯಾಜಿಕ್'!

1999ರಲ್ಲಿ ತೆರೆಕಂಡ 'ಸುಯಂವರಂ' ಎಂಬ ತಮಿಳು ಬ್ಲಾಕ್‌ಬಸ್ಟರ್ ಸಿನಿಮಾ ಈ ಸಾರ್ವಕಾಲಿಕ ದಾಖಲೆ ಬರೆದ ಚಿತ್ರ. ಗಿರಿಧರಲಾಲ್ ನಾಗ್ಪಾಲ್ ಅವರು ನಿರ್ಮಿಸಿ, ಕಥೆ ಬರೆದ ಈ ಸಿನಿಮಾದ ನಿಜವಾದ ಸವಾಲು ಇದ್ದದ್ದು ಅದರ ನಿರ್ಮಾಣದಲ್ಲಿ. ಒಬ್ಬರೇ ನಿರ್ದೇಶಕರಿಂದ ಇದು ಸಾಧ್ಯವಿಲ್ಲ ಎಂದು ಅರಿತು, ತಮಿಳು ಚಿತ್ರರಂಗದ 14 ದಿಗ್ಗಜ ನಿರ್ದೇಶಕರು ಒಂದೇ ಸೂರಿನಡಿ ಕೈಜೋಡಿಸಿದರು. ಅವರಿಗೆ ಸಾಥ್ ನೀಡಲು 17 ಜನ ಪ್ರಖ್ಯಾತ ಛಾಯಾಗ್ರಾಹಕರು ಹಗಲಿರುಳೆನ್ನದೆ ಕ್ಯಾಮೆರಾ ಹಿಡಿದು ನಿಂತರು. ಅತ್ಯಂತ ಆಘಾತಕಾರಿ ವಿಷಯವೆಂದರೆ, ಇಡೀ ಸಿನಿಮಾದ ಚಿತ್ರೀಕರಣ, ಎಡಿಟಿಂಗ್, ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸರಿಯಾಗಿ 23 ಗಂಟೆ 58 ನಿಮಿಷಗಳಲ್ಲಿ ಪೂರ್ಣಗೊಳಿಸಲಾಯಿತು. ಈ ಅಭೂತಪೂರ್ವ ವೇಗವನ್ನು ಗುರುತಿಸಿ, ವಿಶ್ವದ ಅತ್ಯಂತ ವೇಗವಾಗಿ ತಯಾರಾದ ಸಿನಿಮಾ ಎಂದು ಗಿನ್ನೆಸ್ ವಿಶ್ವ ದಾಖಲೆ ಗೌರವಿಸಿತು.

14 ನಿರ್ದೇಶಕರು, 58 ಸ್ಟಾರ್ಸ್ ಮತ್ತು ನಮ್ಮ ಕನ್ನಡಿಗ!

ಈ ಚಿತ್ರವು ದಕ್ಷಿಣ ಭಾರತದ ಚಿತ್ರರಂಗದ ನಟ-ನಟಿಯರ ಪಾಲಿಗೆ ದೊಡ್ದ ಹಬ್ಬವಾಗಿತ್ತು. ಪ್ರಮುಖ ಹಾಗೂ ಪೋಷಕ ಪಾತ್ರಗಳಲ್ಲಿ ಒಟ್ಟು 58 ಜನ ಹೆಸರಾಂತ ಕಲಾವಿದರು ಅಭಿನಯಿಸಿದ್ದರು. ಸತ್ಯರಾಜ್, ಪ್ರಭು, ಅಬ್ಬಾಸ್, ರಂಭಾ, ಖುಷ್ಬೂ, ರೋಜಾ, ಕಸ್ತೂರಿ ಮತ್ತು ವಿಜಯ್ ಕುಮಾರ್ ಅವರಂತಹ ದೈತ್ಯ ತಾರೆಯರ ದಂಡೇ ಮಂಟಪದಲ್ಲಿ ನೆರೆದಿತ್ತು.

ಮೈಸೂರಿನ ಪ್ರತಿಭೆ!

ಆದರೆ, ಇಷ್ಟೆಲ್ಲಾ ಘಟಾನುಘಟಿ ತಾರೆಯರ ನಡುವೆ, ತಮ್ಮ ಅದ್ಭುತ ನೃತ್ಯ, ನಟನೆ ಹಾಗೂ ಸ್ಕ್ರೀನ್ ಪ್ರೆಸೆಂಟ್ಸ್‌ನಿಂದ ಇಡೀ ಸಿನಿಮಾದ ಪ್ರಮುಖ ಆಕರ್ಷಣೆಯಾಗಿ ಮಿಂಚಿದ್ದು ನಮ್ಮ ಮೈಸೂರು ಮೂಲದ ಕನ್ನಡಿಗ ಪ್ರಭುದೇವ! 14 ಜನ ನಿರ್ದೇಶಕರು ವಿಭಿನ್ನ ಆಂಗಲ್‌ಗಳಲ್ಲಿ ದೃಶ್ಯಗಳನ್ನು ವಿಂಗಡಿಸಿಕೊಂಡು ಶೂಟ್ ಮಾಡುತ್ತಿದ್ದಾಗ, ಕನ್ನಡಿಗ ಪ್ರಭುದೇವ ತಮ್ಮ ಮೇಲಿದ್ದ ಜವಾಬ್ದಾರಿಯನ್ನು ಅಷ್ಟೇ ಚಾಕಚಕ್ಯತೆಯಿಂದ ನಿಭಾಯಿಸಿ, ಒಂದೇ ಟೇಕ್‌ನಲ್ಲಿ ದೃಶ್ಯಗಳನ್ನು ಓಕೆ ಮಾಡುವ ಮೂಲಕ ಇಡೀ ತಂಡಕ್ಕೆ ಆಸರೆಯಾಗಿದ್ದರು.

ಏನಿದು ಕಥೆಯ ರೋಚಕ ತಿರುವು?

ಚಿತ್ರದ ಕಥೆಯೂ ಅಷ್ಟೇ ತಮಾಷೆ ಹಾಗೂ ಗೊಂದಲಗಳಿಂದ ಕೂಡಿತ್ತು. ವೈದ್ಯರು ಅನಾರೋಗ್ಯ ಪೀಡಿತ ವೃದ್ಧನಿಗೆ ತನಗೆ ಇನ್ನು ಬಹಳ ಕಡಿಮೆ ಸಮಯವಿದೆ ಎಂದು ಹೇಳುತ್ತಾರೆ. ಆ ವೃದ್ಧನು ತನ್ನ ಒಂಬತ್ತು ಗಂಡು ಮತ್ತು ಹೆಣ್ಣುಮಕ್ಕಳು ಒಂದೇ ದಿನ, ಒಂದೇ ಮಂಟಪದಲ್ಲಿ ಮದುವೆಯಾಗಬೇಕೆಂದು ತನ್ನ ಕೊನೆಯ ಆಸೆಯನ್ನು ವ್ಯಕ್ತಪಡಿಸುತ್ತಾನೆ. ತಂದೆಯ ಇಚ್ಛೆಯಂತೆ ಮಕ್ಕಳು ಮದುವೆಗೆ ಒಪ್ಪುತ್ತಾರಾದರೂ, ನಿಜವಾದ ಟ್ವಿಸ್ಟ್ ಎಂದರೆ, ಈ ಎಲ್ಲಾ ಮಕ್ಕಳು ಈಗಾಗಲೇ ಬೇರೆ ಬೇರೆ ಜನರನ್ನು ಪ್ರೀತಿಸುತ್ತಿರುತ್ತಾರೆ. ಮದುವೆ ಮಂಟಪದಲ್ಲಿ ಪ್ರಿಯಕರ-ಪ್ರಿಯತಮೆಯರ ಹೈಡ್ರಾಮಾ, ಗೊಂದಲಗಳು ಹಾಗೂ ತಪ್ಪುಗ್ರಹಿಕೆಗಳ ನಡುವೆ ನಡೆಯುವ ಕಾಮಿಡಿ ರೈಡ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತೆ. ಬಾಕ್ಸ್ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್ ಮಾಡಿ ಬ್ಲಾಕ್‌ಬಸ್ಟರ್ ಎನಿಸಿಕೊಂಡ ಈ 'ಸುಯಂವರಂ' ಸಿನಿಮಾ, ಕನ್ನಡಿಗನ ಪಾಲ್ಗೊಳ್ಳುವಿಕೆಯೊಂದಿಗೆ ಗಿನ್ನೆಸ್ ದಾಖಲೆ ಬರೆದ ಭಾರತೀಯ ಚಿತ್ರರಂಗದ ಅದ್ಭುತ ಕೌತುಕವಾಗಿ ಇಂದಿಗೂ ಇತಿಹಾಸದಲ್ಲಿ ಉಳಿದುಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕರಾವಳಿ' ನನ್ನನ್ನು ಸ್ವಾರ್ಥರಹಿತ ವ್ಯಕ್ತಿಯನ್ನಾಗಿ ಮಾಡಿದೆ: ನಟಿ ಸಂಪದ ಹುಲಿವನ ಹೇಳಿದ್ದೇನು?
'ಗೀತರಚನಾಕಾರರಿಗೆ ಸಿಗಬೇಕಾದಷ್ಟು ಗೌರವ ಸಿಗುತ್ತಿಲ್ಲ': 3000 ಹಾಡುಗಳ ಸೃಷ್ಟಿಕರ್ತ ನಾಗೇಂದ್ರ ಪ್ರಸಾದ್ ಬೇಸರ