ʼಸ್ವದೇಶ್ʼ ಫಿಲಂಗೆ ಈ ಹಿಂದಿ ಸೀರಿಯಲ್ಲೇ ಸ್ಫೂರ್ತಿ! ಅದರಲ್ಲಿದ್ರು ನಟಿ ಮಾಳವಿಕಾ!

Published : Jun 13, 2025, 05:32 PM ISTUpdated : Jun 13, 2025, 05:53 PM IST
swades vapasi

ಸಾರಾಂಶ

ಸ್ವದೇಶ್ ಸಿನಿಮಾ ಕಥೆಗೆ ಕನ್ನಡದ ಚಿಗುರಿದ ಕನಸು ಮಾತ್ರವಲ್ಲ 1990ರ ಒಂದು ಹಿಂದಿ ಸೀರಿಯಲ್‌ನಿಂದಲೂ ಪ್ರೇರಣೆ ಪಡೆಯಯಾಗಿದೆ ಎಂಬುದು ಗೊತ್ತಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ಅದರ ವಿಡಿಯೋ ವೈರಲ್‌ ಆಗುತ್ತಿದೆ. ಅದರಲ್ಲಿ ನಟಿ ಮಾಳವಿಕಾ ಕೂಡ ಇದ್ದಾರೆ. 

ಶಾರುಖ್‌ ಖಾನ್‌ ಅಭಿನಯ ಹಾಗೂ ಅಶುತೋಷ್‌ ಗೋವಾರಿಕರ್‌ ನಿರ್ಮಾಣದ ʼಸ್ವದೇಶ್ʼ‌ ಸಿನಿಮಾ ಭಾರತೀಯ ಚಿತ್ರರಂಗದ ಕ್ಲಾಸಿಕ್‌ಗಳಲ್ಲಿ ಒಂದು. ಬಿಡುಗಡೆಯಾದಾಗ ಸೂಪರ್‌ ಹಿಟ್‌ ಆಗದೇ ಹೋದರೂ, ನಂತರ ವಿಮರ್ಶಕರು, ನೋಡುಗರ ಮೆಚ್ಚುಗೆ ಪಡೆದ ಸಿನಿಮಾ. ಈ ಸಿನಿಮಾದ ಕತೆಗೆ ಎಲ್ಲೆಲ್ಲಿಂದಲೋ ಪ್ರೇರಣೆಗಳನ್ನು ಪಡೆಯಲಾಗಿದೆ ಎಂದೆಲ್ಲ ಹೇಳಲಾಗುತ್ತದೆ. ಅದರಲ್ಲಿರುವ ಕತೆಯೆಂದರೆ ಅಮೆರಿಕದಿಂದ ತನ್ನ ಹಳ್ಳಿಗೆ ಮರಳುವ ವಿದ್ಯಾವಂತ ಯುವಕನೊಬ್ಬ ಅಲ್ಲಿನ ಜನಜೀವನವನ್ನು ಸುಧಾರಿಸುವ ಕೆಲಸ ಮಾಡುವುದು, ಆತ ಏಳು ಬೀಳು ಇತ್ಯಾದಿ. ಈ ಕತೆಗೆ ಪ್ರೇರಣೆ ಕನ್ನಡದಿಂದ ಎಂದು ನಮ್ಮವರು ಹೇಳಿದರು. ಅದಕ್ಕೆ ಕಾರಣ. ಈ ಸಿನಿಮಾ ಬಂದದ್ದು 2004ರಲ್ಲಿ. ಇದಕ್ಕೂ ಒಂದು ವರ್ಷ ಮೊದಲ ಅಂದರೆ 2003ರಲ್ಲಿ ಕನ್ನಡದಲ್ಲಿ ಶಿವರಾಜ್‌ಕುಮಾರ್‌ ಅಭಿನಯದ ʼಚಿಗುರಿದ ಕನಸುʼ ಬಂದಿತ್ತು. ಅದು ಕೂಡ ವಿದ್ಯಾವಂತ ಯುವಕ ಬಂಗಾಡಿ ಎಂಬ ಹಳ್ಳಿಗೆ ಬಂದು ನೆಲೆಸುವ ಕತೆ. ನಾಗಾಭರಣ ನಿರ್ದೇಶನದ ಈ ಸಿನಿಮಾದ ಮೂಲಕತೆ ಶಿವರಾಮ ಕಾರಂತರದು.

ಇದೀಗ ಹೊಸದೊಂದು ಮಾತು ಶುರುವಾಗಿದೆ. ಅದೇನೆಂದರೆ, ಸ್ವದೇಶ್‌ ಸಿನಿಮಾದ ಮೂಲದಲ್ಲಿ ಒಂದು ಹಿಂದಿ ಸೀರಿಯಲ್‌ ಇದೆ ಎಂಬುದು. ಮತ್ತು ಇದರಲ್ಲಿ ನಮ್ಮ ಕನ್ನಡದ ನಟಿ ಮಾಳವಿಕಾ ಕೂಡ ನಟಿಸಿದ್ದಾರೆ ಎಂಬುದು ಇಂಟರೆಸ್ಟಿಂಗ್!‌ ಹೌದು, ಈ ಸೀರಿಯಲ್‌ ತುಂಬ ಮೊದಲೇ ಅಂದರೆ 1990ರಲ್ಲೇ ಬಂದಿತ್ತು. ಅದರ ಹೆಸರು ಯುಲೆ ಲವ್‌ ಸ್ಟೋರೀಸ್‌ (Yule Love Stories). ಇದು ಹಲವು ಕತೆಗಳ ಸರಣಿ. ಇದರಲ್ಲಿ ಎಪಿಸೋಡ್‌ಗೆ ಒಂದು ಕತೆ ಇರುತ್ತಿತ್ತು.

ದಿನನಿತ್ಯದ ಕಂತುಗಳನ್ನು ಪ್ರಸಾರ ಮಾಡುತ್ತಿದ್ದ ಈ ಸರಣಿಯಲ್ಲಿ ʼವಾಪಸಿʼ ಎಂಬ ಎರಡು ಭಾಗಗಳ ಕತೆ ಪ್ರಸಾರವಾಗಿತ್ತು. ಕುತೂಹಲಕಾರಿಯಾಗಿ, ಈ ಕಂತಿನಲ್ಲಿ ಸ್ವದೇಶ್‌ನ ನಿರ್ದೇಕ- ನಿರ್ಮಾಪಕ ಅಶುತೋಷ್ ಗೋವಾರಿಕರ್ ಸ್ವತಃ ನಾಯಕನಾಗಿ ನಟಿಸಿದ್ದರು. ಮೋಹನ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಕಾಕತಾಳೀಯ ಎಂದರೆ ಸ್ವದೇಶ್‌ ಫಿಲಂನಲ್ಲಿ ಶಾರುಖ್ ಖಾನ್ ಅವರ ಪಾತ್ರದ ಹೆಸರು ಕೂಡ ಮೋಹನ್!‌ ಈ ಸೀರಿಯಲ್‌ನಿಂದಲೇ ಅಶುತೋಷ್‌ ಕತೆ ಎತ್ತಿಕೊಂಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಲು ಇಷ್ಟು ಸಾಕಲ್ಲವೇ!

ಸ್ವದೇಶ್‌ ಚಿತ್ರದಂತೆಯೇ ವಾಪಸಿ ಸೀರಿಯಲ್‌ ಕೂಡ ಮೋಹನ್ ಎಂಬ ಅನಿವಾಸಿ ಭಾರತೀಯನ ಮೇಲೆ ಕೇಂದ್ರೀಕರಿಸಿತ್ತು. ಅವನು ತನ್ನ ಪ್ರೀತಿಯ ಕಾವೇರಿ ಅಮ್ಮನಿಗಾಗಿ ಭಾರತಕ್ಕೆ ಹಿಂದಿರುಗುತ್ತಾನೆ ಮತ್ತು ಗೀತಾ ಎಂಬ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಟಿವಿ ಕಂತಿನ ಕ್ಲಿಪ್ ಅನ್ನು ಪ್ಲಾಟ್‌ಫಾರ್ಮ್ X (ಹಿಂದೆ ಟ್ವಿಟರ್) ನಲ್ಲಿ ಯಾರೋ ಹಂಚಿಕೊಂಡಿದ್ದಾರೆ. ಹೀಗಾಗಿ ಎರಡರ ನಡುವಿನ ಗಮನಾರ್ಹ ಹೋಲಿಕೆಗಳು ಆನ್‌ಲೈನ್‌ನಲ್ಲಿ ಮತ್ತೆ ಕಾಣಿಸಿಕೊಂಡಿವೆ. ಇದನ್ನು ಪೋಸ್ಟ್ ಮಾಡಿದವರು “90ರ ದಶಕದ ಜೀ ಟಿವಿ ಸೀರಿಯಲ್‌ ಕಂತಿನಿಂದ ಸ್ವದೇಶ್ ಕತೆಯನ್ನು ಎತ್ತಲಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಬ್ರೋ ನಿಜವಾಗಿಯೂ ಟಿವಿ ಧಾರಾವಾಹಿಯಿಂದ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ನೀವು ಅದನ್ನು ಒಂದು ಕ್ಲಾಸಿಕ್‌ ಎಂದು ಕರೆಯುತ್ತೀರಿ” ಎಂದು ಬರೆದಿದ್ದಾರೆ.

Karan Johar: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಗೇಟ್‌ ಪಾಸ್‌ ಕೊಟ್ಟ‌ ಖ್ಯಾತ ನಿರ್ದೇಶಕ ಕರಣ್‌ ಜೋಹರ್

ಈ ಕ್ಲಿಪ್‌ ಕಾಣಿಸಿಕೊಳ್ಳಲು ಇನ್ನೊಂದು ಕಾರಣ ಎಂದರ ಇತ್ತೀಚೆಗೆ ಅಮೀರ್‌ ಖಾನ್‌ ಒಂದು ಸಂದರ್ಶನದಲ್ಲಿ ಹೇಳಿದ ಮಾತು. ಗೋವಾರಿಕರ್‌ ಮೊದಲಿಗೆ ಈ ಕತೆಯನ್ನು ಅಮೀರ್‌ಗೆ ಹೇಳಿದರಂತೆ. ಆದರೆ ಕತೆ ಬರೀ ಬೋರಿಂಗ್‌ ಅಂತ ಅಮೀರ್‌ಗೆ ಅನಿಸಿದ್ದರಂತೆ ಅವರು ಅದರಲ್ಲಿ ನಟಿಸಲು ಒಪ್ಪಲಿಲ್ಲವಂತೆ. ಕತೆ ಈಗಿನ ಸಮಾಜಕ್ಕೆ ತುಂಬಾ ಮುಖ್ಯ ಹಾಗೂ ಬದ್ಧತೆಯನ್ನು ಹೊಂದಿದೆ ನಿಜ. ಆದರೆ ಅದು ಪ್ರೇಕ್ಷಕರನ್ನು ಹಿಡಿದಿಡಲಾರದು ಎಂದು ಅಮೀರ್‌ಗೆ ಅನ್ನಿಸಿತು. ಅದನ್ನೇ ಅಶುತೋಷ್‌ಗೆ ಹೇಳಿದರಂತೆ.

ಹುಟ್ಟುಹಬ್ಬದ ಪಾರ್ಟಿಯಲ್ಲಿ ಮಿತಿಮೀರಿ ಕುಡಿದ ಅಮೀರ್ ಖಾನ್, ಏನೋ ಮಾಡಿದ್ದು ನೆನಪಿಲ್ಲವೆಂದ ನಟ, ಏನಿರಬಹುದು?

ನಮ್ಮ ಕನ್ನಡ ನಟಿ ಮಾಳವಿಕಾ ಈ ಮೊದಲು ಹಲವು ಹಿಂದಿ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಹಾಗೆ ನಟಿಸಿದ ಸೀರಿಯಲ್‌ಗಳಲ್ಲಿ ಇದೂ ಒಂದು. ಇದರಲ್ಲಿ ಅವರು ಕಥಾನಾಯಕ ಮೋಹನ್‌ನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಳವಿಕಾ ಅವರ ತುಂಬಾ ಯಂಗ್‌ ವರ್ಷನ್‌ ಅನ್ನು ಈ ಸೀರಿಯಲ್‌ನಲ್ಲಿ ನೀವು ಕಾಣಬಹುದು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!
ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌