Salman, ಟೈಗರ್ ಅಲ್ಲ; ಶೂಟರ್‌ಗಳ ಟಾರ್ಗೆಟ್ ಆಗಿದ್ದು ಈ ಸೂಪರ್‌ಸ್ಟಾರ್! ಪ್ರಾಣ ಉಳಿಸಿತು ಆ ಒಂದು ಅಭ್ಯಾಸ!

Published : Oct 26, 2026, 10:33 AM IST
tiger shroff salman khan

ಸಾರಾಂಶ

ಮುಂಬೈನಲ್ಲಿ ಬಾಲಿವುಡ್ ನಟರ ಮೇಲೆ ಬಿಷ್ಣೋಯ್ ಗ್ಯಾಂಗ್ ಸರಣಿ ದಾಳಿ ಮತ್ತು ಬೆದರಿಕೆಗಳನ್ನು ಹಾಕುತ್ತಿದೆ. ಇತ್ತೀಚೆಗೆ ಟೈಗರ್ ಶ್ರಾಫ್ ಮೇಲೆ ನಡೆದ ದಾಳಿಯ ಅಸಲಿ ಗುರಿ ಆ ಸೂಪಸ್ಟಾರ್ ಆಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಉತ್ತರ ಭಾರತಕ್ಕೆ ಸೀಮಿತವಾಗಿದ್ದ ಬೀಷ್ಣೋಯಿ ಗ್ಯಾಂಗ್‌, 2024ರಿಂದ ಮಾಯಾನಗರಿ ಮುಂಬೈನಲ್ಲಿ ಕಣ್ಣಿಟ್ಟಿತು. ಅಲ್ಲದೇ, ಅಲ್ಲಿ ಸಲ್ಮಾನ ಖಾನ್‌ ಮನೆ ಮೇಲೆ ದಾಳಿ, ಬಾಬಾ ಸಿದ್ದೀಕಿ ಹತ್ಯೆ, ದಿಶಾ ಪಠಾಣಿ ಸೇರಿ ಹಲವರಿಗೆ ಬೆದರಿಕೆ ಹಾಕಿದೆ. ಪ್ರಾರಂಭದಲ್ಲಿ ಕೃಷ್ಣಮೃಗದ ಬೇಟೆ ಕಾರಣಕ್ಕೆ ಪ್ರತಿಕಾರಕ್ಕೆ ಮುಂದಾಗಿದೆ ಎಂದು ಹೇಳಿಕೊಂಡಿತ್ತು. ಆದರೆ ಮುಂಬೈ ಪೊಲೀಸರು ನೀಡುತ್ತಿರುವ ಮಾಹಿತಿಯೇ ಬೇರೆಯಾಗಿದೆ. ಅಷ್ಟೇ ಅಲ್ಲ ಮೊನ್ನೆ ನಡೆದ ಶ್ರಾಫ್‌ ಮೇಲೆ ನಡೆದ ದಾಳಿ, ಅವರನ್ನು, ಸಲ್ಮಾನ ಖಾನ್ ಕೇಂದ್ರಿಕರಿಸಿ ಮಾಡಿರುವುದಲ್ಲ, ಅದು ಆ ಸೂಪರ್‍‌ಸ್ಟಾರ್‍‌ನ್ನು ಗುರಿಯಾಗಿಸಿಕೊಂಡಿತ್ತು ಎಂದು ಈಗ ಅದೇ ಪೊಲೀಸರು ಹೇಳಿತ್ತಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಜುಹುನಲ್ಲಿ ನಡದೇ ಹೋಯ್ತು ದುರಂತ!

ಅಕ್ಟೋಬರ್ 18, 2026 ರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ದಾಳಿ ನಡೆಸಲಾಯಿತು. ಟೈಗರ್ ಶ್ರಾಫ್ ಫುಟ್ಬಾಲ್ ಆಡಿದ ನಂತರ ತಮ್ಮ ಕಾರಿಗೆ ಹಿಂತಿರುಗುತ್ತಿದ್ದಾಗ ಮೂವರು ಬೈಕ್ ಸವಾರರು ಅವರ ಮೇಲೆ ದಾಳಿ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು. ಟೈಗರ್ ಶ್ರಾಫ್ ಮಾರಕ ದಾಳಿಯಿಂದ ಬದುಕುಳಿದರು. ಪ್ರಕರಣದಲ್ಲಿ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೂಟರ್ಸ್ ಟೈಗರ್ ಶ್ರಾಫ್ ಅಲ್ಲ, ಅಮೀರ್ ಖಾನ್ ಅನ್ನು ಗುರಿಯಾಗಿಸಲು ಯೋಜಿಸುತ್ತಿದ್ದರು, ಆದರೆ ಸೂಪರ್‌ಸ್ಟಾರ್‌ನ ಅಭ್ಯಾಸ ಅವರ ಜೀವವನ್ನು ಉಳಿಸಿತು ಎಂದು ತನಿಖೆಗಳು ಈಗ ಬಹಿರಂಗಪಡಿಸಿವೆ.

ವರದಿಗಳು ಹೇಳುವುದೇನು?

ಬಿಷ್ಣೋಯ್ ಗ್ಯಾಂಗ್‌ನ ಶೂಟರ್‌ಗಳು ಒಂದು ತಿಂಗಳಿನಿಂದ ಮುಂಬೈನಲ್ಲಿದ್ದರು. ಅವರು ಅಮಿರ್ ಖಾನ್‌ರನ್ನು ಗುರಿಯಾಗಿಸಿಕೊಳ್ಳುವ ಉದ್ದೇಶ ಹೊಂದಿದ್ದರು. ಆ ಕಾರಣದಿಂದಲೇ ಮುಂಬೈನಲ್ಲಿ ಒಂದು ತಿಂಗಳು ಬೀಡುಬಿಟ್ಟು ಸೂಪರ್‌ಸ್ಟಾರ್ ಮನೆ ಪರಿಶೀಲಿಸುತ್ತಿದ್ದರು. ಅಲ್ಲದೇ ಸೂಪರ್‌ಸ್ಟಾರ್‌ನ ಅಭ್ಯಾಸವು ಅವರ ಜೀವಗಳನ್ನು ಉಳಿಸಿತು. ಶೂಟಿಂಗ್ ಸಮಯದಲ್ಲಿ, ಅಮಿರ್ ಖಾನ್ ಹೆಚ್ಚಿನ ಸಮಯ ಶೂಟಿಂಗ್ ಸೆಟ್‌ನಲ್ಲಿರುತ್ತಾರೆ ಅಥವಾ ತಮ್ಮ ಮನೆಯಿಂದ ಹೊರಹೋಗುವುದನ್ನು ತಪ್ಪಿಸುತ್ತಾರೆ ಎಂದು ಶೂಟರ್‌ಗಳಿಗೆ ತಿಳಿದುಬಂದಿತು. ಅಮಿರ್ ಖಾನ್ ಮನೆಯಿಂದ ಹೊರ ಹೋಗದ ಕಾರಣ ಶೂಟರ್‌ಗಳ ಗಮನದಿಂದ ತಪ್ಪಿಸಿಕೊಂಡರು. ಅಲ್ಲದೇ ಟೈಗರ್ ಶ್ರಾಫ್ ಪ್ರತಿ ಭಾನುವಾರ ಫುಟ್‌ಬಾಲ್ ಆಡಲು ಹೋಗುತ್ತಿದ್ದರು ಎಂದು ತನಿಖೆಗಳು ಬಹಿರಂಗಪಡಿಸಿವೆ, ಇದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸುಲಭವಾದ ಗುರಿಯಾಗುವಂತೆ ಮಾಡಿತು ಎಂದು ಕೆಲ ವರದಿಗಳು ಹೇಳಿವೆ.

ದಾಳಿಗೆ ಕೃಷ್ಣ ಮೃಗದ ಭೇಟೆ ಕಾರಣವಾ? ಪೊಲೀಸರು ಹೇಳಿದ್ದೇನು?

ಕೇವಲ ಉತ್ತರ ಭಾರತಕ್ಕೆ ಸೀಮಿತವಾಗಿದ್ದ, ಈ ಗ್ಯಾಂಗ್‌ವಾರ್‍ಗೆ ಹಾಗೂ ಬಿಷ್ಣೋಯ್‌ಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆ 2021ರಲ್ಲಿ. ಅದು ಬಿಷ್ಣೋಯಿ ಗಾಡ್‌ಫಾದರ್ ಎಂದು ಗುರುತಿಸಿಕೊಂಡಿದ್ದ ಮಿಡ್ಡುಖೇಡನನ್ನು ಹಾಡುಹಗಲೇ ಹತ್ಯೆ ಮಾಡುತ್ತಾರೆ, ನಂತರ ಇದಕ್ಕೆ ಪ್ರತಿಕಾರವಾಗಿ, ಸಿಧು ಮೊಸೆವಾಲಾ ಕೊಲೆ ಮಾಡಲಾಗುತ್ತದೆ. ಇದಾದ ನಂತರ ಈ ಗ್ಯಾಂಗ್‌ ಕಣ್ಣು ಮಾಯಾನಗರಿ ಮುಂಬೈ ಮೇಲೆ ಬೀಳುತ್ತದೆ. ಆದರೆ ಈ ಸಂಘರ್ಷಕ್ಕೆ ಕೃಷ್ಣಮೃಗ ಕಾರಣವಲ್ಲ, ಇದೊಂದು ಹಪ್ತಾ ದಂಧೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವಿಶ್ವದಾದ್ಯಂತ 40 ಭಾಷೆಗಳಲ್ಲಿ 'ರಾಮಾಯಣ' ಬಿಡುಗಡೆ!? ಈ ಸಿನಿಮಾದ ಬಗ್ಗೆ ನಿಜವಾದ 'ಜನರಲ್ ಟಾಕ್' ಏನಿದೆ ಗೊತ್ತಾ?
ಶಿಳ್ಳೆ, ಚಪ್ಪಾಳೆ, ಅಭಿಮಾನಿಗಳ ಅಬ್ಬರ: ಬೆಂಗಳೂರಿನಲ್ಲಿ ಇಂದಿಗೂ ಸದ್ದು ಮಾಡುತ್ತಿವೆ ನರಸಿಂಹರಾಜು ಕಾಲದ ಚಿತ್ರಮಂದಿರಗಳು!