ಕಲಿತು, ಭಾಷಾ ಪ್ರೇಮ ಮೆರೆದ ಸನ್ನಿ ಲಿಯೋನ್‌!

Published : Jun 15, 2019, 12:08 PM ISTUpdated : Jun 15, 2019, 12:42 PM IST
ಕಲಿತು, ಭಾಷಾ ಪ್ರೇಮ ಮೆರೆದ ಸನ್ನಿ ಲಿಯೋನ್‌!

ಸಾರಾಂಶ

ಭಾಷೆ ವಿಚಾರವಾಗಿ ಇಂದು ಸಾಕಷ್ಟುಚರ್ಚೆಗಳು ನಡೆಯುತ್ತಿವೆ. ಒಂದು ಕಡೆ ಹಿಂದಿ ಹೇರಿಕೆ, ಮತ್ತೊಂದು ಕಡೆ ಪ್ರಾದೇಶಿಕ ಭಾಷೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ ಇದೆ. ಸಂದರ್ಭ ಹೀಗಿರುವಾಗ ಎಲ್ಲಾ ನಟ, ನಟಿಯರಿಗೂ ಮಾದರಿಯಾಗಬಹುದಾದ ಹೆಜ್ಜೆಯೊಂದನ್ನು ಸನ್ನಿ ಲಿಯೋನ್‌ ಇಟ್ಟಿದ್ದಾರೆ.

ತಮ್ಮ ಹೊಸ ಸಿನಿಮಾ ‘ಕೋ ಕೋ ಕೋಲಾ’ದಲ್ಲಿ ನಟಿಸಲು ಸಹಾಯವಾಗುವಂತೆ ಉತ್ತರ ಪ್ರದೇಶದ ಸ್ಥಳೀಯ ಭಾಷೆಯ ಕಲಿಕೆಗೆ ಅವರು ಮುಂದಾಗಿದ್ದಾರೆ. ‘ಸಿನಿಮಾ ಎಂದು ಬಂದಾಗ ನಾನು ಅದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನೂ ಮಾಡಿಕೊಳ್ಳುತ್ತೇನೆ. ಹೊಸದನ್ನು ಕಲಿಯಲು ಮನಸ್ಸಿದ್ದಾಗ ಹೊಸದನ್ನು ಮಾಡಲು ಸಾಧ್ಯವಾಗುತ್ತದೆ. ನನಗೆ ಹೊಸ ಹೊಸ ಭಾಷೆಗಳನ್ನು ಕಲಿಯುವುದು ಎಂದರೆ ಇಷ್ಟ. ಇದರಿಂದ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಗುತ್ತದೆ’ ಎಂದು ಹೇಳುವ ಮೂಲಕ ತಮ್ಮ ಬದ್ಧತೆ ಪ್ರದರ್ಶನ ಮಾಡಿದ್ದಾರೆ.

ಸನ್ನಿಲಿಯೋನ್‌ ಹಂಚಿಕೊಂಡ ಮೂರು ಗುಟ್ಟುಗಳಿವು!

ಇಂದು ಪರಭಾಷೆಗಳಿಂದ ನಟ, ನಟಿಯರು ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ. ಅವರೂ ಇದೇ ರೀತಿ ಭಾಷೆಯನ್ನು ಕಲಿಯಲು ಮುಂದಾದರೆ ಖುಷಿ. ಇವರನ್ನು ಫಾಲೋ ಮಾಡುವ ಇವರ ಅಭಿಮಾನಿಗಳೂ ಇದೇ ರೀತಿ ತಾವು ಇರುವ ಜಾಗದ ಭಾಷೆಯನ್ನು ಕಲಿಯಲೂ ಮುಂದಾಗಬಹುದು. ಈ ನಿಟ್ಟಿನಲ್ಲಿ ಸನ್ನಿಯದ್ದು ಮಾದರಿ ನಡೆಯೇ ಸರಿ.

ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Actor Dhanush Wedding: 20 ವರ್ಷದ ಮಗನಿರೋ ತಮಿಳು ನಟ ಧನುಷ್‌ಗೆ ಮದುವೆ, ನೆಟ್‌ವರ್ಥ್ ಏನು?
ಹೆಲೋ, Bigg Boss.. ರಕ್ಷಿತಾ ಟ್ರೋಫಿ ಗೆಲ್ತಾಳೆ ಅಂತ ಆ ವಿಷಯ ತೋರಿಸಿಲ್ಲ, Live ನೋಡಿದ್ವಿ: ವೀಕ್ಷಕರ ಆಗ್ರಹ