
‘ಯೂಟರ್ನ್’ ತೆಲುಗು ರಿಮೇಕ್ ವರ್ಷನ್‌ಗೆ ಆ್ಯಕ್ಷನ್ ಕಟ್ ಹೇಳಲು ಹೋಗಿದ್ದ ಪವನ್ ಕುಮಾರ್ ಒಂದಷ್ಟುದಿನ ಸ್ಯಾಂಡಲ್‌ವುಡ್‌ನಲ್ಲೇ ಕಾಣಿಸಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ಅವರ ಹೊಸ ಪ್ರಾಜೆಕ್ಟ್ ಕೂಡ ಸುದ್ದಿ ಆಗಿರಲಿಲ್ಲ. ಅವರು ಎಲ್ಲಿದ್ದಾರೆಂಬುದು ಕೂಡ ಕುತೂಹಲ ಮೂಡಿಸಿತ್ತು. ಆದರೆ ಈಗ ಹಿಂದಿ ವೆಬ್ ಸೀರಿಸ್ ‘ಲೈಲಾ’ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ರೀತಿ ಕನ್ನಡದಲ್ಲಿ ಪ್ಲೇ ಫ್ಲಿಕ್ಸ್!
‘ಲೈಲಾ’ ಆರು ಕಂತುಗಳ ಸೀರೀಸ್. ಆರು ಕಂತುಗಳ ಪೈಕಿ ತಲಾ ಎರಡು ಕಂತುಗಳನ್ನು ಬಾಲಿವುಡ್‌ನ ಹೆಸರಾಂತ ನಿರ್ದೇಶಕಿ ದೀಪಾ ಮೆಹ್ತಾ, ಶಂಕರ್ ಹಾಗೂ ಕನ್ನಡದ ನಿರ್ದೇಶಕ ಪವನ್ ಕುಮಾರ್ ನಿರ್ದೇಶಿಸಿದ್ದಾರೆ. ಈ ಸರಣಿಯ 5 ಮತ್ತು 6ನೇ ಎಪಿಸೋಡ್‌ಗೆ ಪವನ್ ಕುಮಾರ್ ನಿರ್ದೇಶಕರು. ಅಷ್ಟುದೊಡ್ಡ ನಿರ್ದೇಶಕರಲ್ಲಿ ತಾವು ಒಬ್ಬರೆನ್ನುವುದರ ಜತೆಗೆ, ಹಿಂದಿಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಖುಷಿ ಆಗಿದ್ದಾರೆ ಪವನ್ ಕುಮಾರ್.
ಸಿನಿಮಾ ರಿಲೀಸ್ ದಿನವೇ ಮೊಬೈಲ್‌ನಲ್ಲಿ ನೋಡಲು ಇಲ್ಲಿದೆ ಆ್ಯಪ್!
ಸಿನಿಮಾಗೂ ವೆಬ್ ಸೀರಿಸ್ ನಿರ್ದೇಶನಕ್ಕೂ ಸಾಕಷ್ಟುವ್ಯತ್ಯಾಸ ಇದೆ. ವೆಬ್ ಸೀರಿಸ್‌ಗೆ ಕನಿಷ್ಟ5 ಗಂಟೆಯಷ್ಟುಅವಕಾಶ ಇರುತ್ತದೆ. ಏನಾದ್ರೂ ಹೇಳುವುದಕ್ಕೂ ಅವಕಾಶ ಸಿಗುತ್ತದೆ. ಇದು ಇಲ್ಲಿರುವ ದೊಡ್ಡ ಸ್ಪೇಸ್. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಹೊಸ ಸಿನಿಮಾದ ಸಿದ್ಧತೆ ಮುಗಿಯುತ್ತದೆ. ಅದೇನು ಅಂತ ಆಗಲೇ ಗೊತ್ತಾಗಲಿದೆ. ಹಿಂದಿ, ತೆಲುಗು ಹಾಗೂ ಕನ್ನಡದಲ್ಲೂ ಅದನ್ನು ನಿರ್ಮಾಣ ಮಾಡುವ ಉದ್ದೇಶವಿದೆ. ಸದ್ಯಕ್ಕೆ ಸ್ಕಿ್ರಪ್ಟ್ ವರ್ಕ್ನಲ್ಲಿದ್ದೇನೆ.- ಪವನ್ ಕುಮಾರ್
‘ನೆಟ್‌ಫ್ಲಿಕ್ಸ್ ಮೂಲಕ ಸಿಕ್ಕ ಅವಕಾಶ ಇದು. ಅಷ್ಟುದೊಡ್ಡ ಡೈರೆಕ್ಟರ್ ಜತೆಗೆ ನಾನು ಕೂಡ ವೆಬ್ ಸೀರಿಸ್ ನಿರ್ದೇಶಿಸುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೂ ಅವಕಾಶ ಬಂತು. ಒಪ್ಪಿಕೊಂಡೆ. ಒಂಥರ ಇದು ಹೊಸ ಅನುಭವ. ದೀಪಾ ಮೆಹ್ತಾ ಅವರಂತಹ ನಿರ್ದೇಶಕರ ಜತೆಗೆ ಸ್ಕಿ್ರಪ್ಟ್ ಪೂರಕವಾಗಿ ಚರ್ಚಿಸುವುದಕ್ಕೆ, ಇನ್ನಷ್ಟುಕಲಿಯುವುದಕ್ಕೆ ಅವಕಾಶ ಸಿಕ್ಕಿತು’ ಎನ್ನುತ್ತಾರೆ ಪವನ್. ಸಿನಿಮಾ ನಿರ್ದೇಶನದಿಂತ ವೆಬ್ ಸೀರೀಸ್ ನಿರ್ದೇಶಕರಾಗಿದ್ದು ಕೂಡ ಪವನ್ ಸಿನಿ ಜರ್ನಿಯ ಮತ್ತೊಂದು ಘಟ್ಟ.
ಎರಡು ದಿನದಲ್ಲಿ 21 ಕೋಟಿ ಗಳಿಸಿದ ಸಿನಿಮಾ ಈಗ ಅಮೆಜಾನ್ ಪ್ರೈಂನಲ್ಲಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.