
ಬೆಂಗಳೂರು (ಅ. 31): ಮಾದಕ ಬೆಡಗಿ ಸನ್ನಿ ಲಿಯೋನ್ ಬೆಂಗಳೂರಿಗರಿಗೆ ಮನರಂಜನೆ ನೀಡಲು ಬರಲಿದ್ದಾರೆ. ದಿ ಟೈಮ್ ಕ್ರಿಯೇಶನ್ ಹಮ್ಮಿಕೊಂಡಿರುವ ಫ್ಯೂಷನ್ ಲೈಟ್ಸ್ ಕಾರ್ಯಕ್ರಮದಲ್ಲಿ ಸನ್ನಿ ಭಾಗಿಯಾಗಲಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ಆವರಣದಲ್ಲಿರುವ ‘ವೈಟ್ ಆರ್ಕಿಡ್’ ಸಭಾಂಗಣದಲ್ಲಿ ನವೆಂಬರ್ 3 ರಂದು ಫ್ಯೂಷನ್ ನೈಟ್ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಕನ್ನಡದ ಖ್ಯಾತ ಗಾಯಕ ರಘು ದೀಕ್ಷಿತ್, ಖ್ಯಾತ ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗಿಯಾಗಲಿದ್ದಾರೆ.
ಈ ಹಿಂದೆಯೇ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಸನ್ನಿ ಲಿಯೋನ್ ಆಗಮಿಸುವುದನ್ನು ಕನ್ನಡ ಪರ ಕೆಲ ಸಂಘಟನೆಗಳು ವಿರೋಧಿಸಿದ್ದವು. ಸನ್ನಿ ಅಶ್ಲೀಲತೆಯನ್ನು ಸಂಕೇತಿಸುತ್ತಾರೆ ಎಂದು ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅನುಮತಿ ಅನುಮಾನ ಎಂದು ಹೇಳಲಾಗಿತ್ತು. ಇದೀಗ ಅನುಮತಿ ಸಿಕ್ಕಿದೆ.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮತ್ತು ಅವರ ತಂಡ ಕೂಡ ಪಾಲ್ಗೊಳ್ಳುತ್ತಿದ್ದು, ಕಾರ್ಯಕ್ರಮಕ್ಕಾಗಿ ಈಗಾಗಲೇ ಭರದ ಸಿದ್ಧತೆ ಆರಂಭವಾಗಿದೆ. ಕಾರ್ಯಕ್ರಮದಲ್ಲಿ ಸನ್ನಿ ಒಟ್ಟು 3 ಹಾಡುಗಳಿಗೆ ಹೆಜ್ಜೆ ಹಾಕಲಿದ್ದಾರೆ. ಟಿಕೆಟ್ ಗಳ ಖರೀದಿ ಭರಾಟೆಯೂ ಜೋರಾಗಿಯೇ ಇದೆ.
ಕಳೆದ ವರ್ಷ ಹೊಸ ವರ್ಷದ ದಿನ ಬೆಂಗಳೂರಿಗೆ ಆಗಮಿಸಬೇಕಿದ್ದ ಸನ್ನಿ ಲಿಯೋನ್ ವಿರುದ್ಧ ಕನ್ನಡ ಪರ ಸಂಘಟನೆಗಳು ಪ್ರತಿಭಟಿಸಿದ್ದವು. ಹೀಗಾಗಿ ಸನ್ನಿ ಬೆಂಗಳೂರು ಭೇಟಿ ರದ್ದು ಪಡಿಸಲಾಗಿತ್ತು. ಈ ಬಾರಿ ಸಹ ಕಾರ್ಯಕ್ರಮಕ್ಕೆ ಆರಂಭದಲ್ಲಿ ಕನ್ನಡ ಪರ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮಾನ್ಯತಾ ಟೆಕ್ ಪಾರ್ಕ್ ಗೆ ಸನ್ನಿ ಬರವುದು ಪಕ್ಕಾ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.