ಮೀಟೂ: ’ನಾವು ಬಾಯ್ಬಿಟ್ರೆ ನೀವು ಸೂಸೈಡ್ ಮಾಡ್ಕೊಳ್ತೀರಿ’

By Web DeskFirst Published Oct 31, 2018, 11:08 AM IST
Highlights

ಮೀ ಟೂ ಆರೋಪದ ಬಗ್ಗೆ ಬಾಯ್ಬಿಟ್ಟ ನಿರ್ದೇಶಕ ಗುರು ಪ್ರಸಾದ್ | ಮೀಟೂ ಮೇಡಂಗಳಿಗೆ ಸಕತ್ ಕ್ಲಾಸ್ | ಮೀಟೂ ಹೆಸರಿನಲ್ಲಿ ಚಿತ್ರರಂಗದ ಬಗ್ಗೆ ಆರೋಪಿಸುತ್ತಿರುವವರ ಬಗ್ಗೆ ಕಿಡಿ 

ಬೆಂಗಳೂರು (ಅ. 31): ಯಾವಾಗ ಈ ಮೀಟೂ ನಾಟಕಗಳು ಆರಂಭವಾದವೋ ಆಗಲೇ ನನ್ನ ತಲೆಯಲ್ಲಿ ಒಂದು ಕತೆ ಹುಟ್ಟಿಕೊಂಡಿತು. ಮೀಟೂ ಆಟಗಳನ್ನೇ ಸೇರಿಸಿಕೊಂಡು ಒಂದು ಸಿನಿಮಾ ಮಾಡುತ್ತಿದ್ದೇನೆ. ಖಂಡಿತ ಆ ಸಿನಿಮಾ ಸದ್ಯದಲ್ಲೇ ಸೆಟ್ಟೇರುತ್ತದೆ. ಈ ಚಿತ್ರಕ್ಕೆ ನಿಜವಾದ ಕಾಂಬಿನೇಷನ್ ನಾನು ಮತ್ತು ಸಂಗೀತಾ ಭಟ್, ಶ್ರುತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ. ಈ ಮೀಟೂ ಗದ್ದಲದ ಹಿನ್ನೆಲೆಯಲ್ಲಿ ಸೆಟ್ಟೇರುತ್ತಿರುವ ಚಿತ್ರದ ಬಗ್ಗೆ ಸದ್ಯದಲ್ಲೇ ವಿವರಣೆ ಕೊಡುತ್ತೇನೆ ಎಂದು ಗುರುಪ್ರಸಾದ್ ಗುಡುಗಿದ್ದಾರೆ. ಕುಷ್ಕಾ ಚಿತ್ರದ ಪತ್ರಿಕಾಗೋಷ್ಠಿಗೆ ಬಂದಿದ್ದ ಅವರು ಮೀಟೂ ಹೆಸರಿನಲ್ಲಿ ಚಿತ್ರರಂಗದಲ್ಲಿ ಹೋರಾಟ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದರು. 

1. ನಾನು ಈ ಮೀಟೂ ಆರೋಪದ ವ್ಯಾಪ್ತಿಯಲ್ಲಿ ಇಲ್ಲ. ನನ್ನ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಸಂಗೀತಾ ಭಟ್ ಕೂಡ ಮೀಟೂ ಅರೋಪ ಮಾಡಿದ್ದಾರೆ ಎನ್ನುವ ಕಾರಣಕ್ಕೆ ನಾನು ಪ್ರತಿಕ್ರಿಯಿಸುತ್ತಿದ್ದೇನೆ. ನಟಿ ಸಂಗೀತ ಭಟ್ ಹೇಳಿಕೊಂಡಿರುವ ಅನುಭವ ಅಥವಾ ಹೇಳಿಕೆಗೂ ನನಗೂ ಸಂಬಂಧವಿಲ್ಲ. ಆಕೆಯ ಅರೋಪಿಸಿರುವಂತೆ ‘ಆ ಪ್ರಸಿದ್ಧ ನಿರ್ದೇಶಕ’ ನಾನೇ ಆಗಿದ್ದರೆ, ಸಂಗೀತಾ ಭಟ್ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿ. ಇದು ನನ್ನ ಸವಾಲ್.

2. ನನ್ನ ಎರಡನೇ ಸಲ ಚಿತ್ರದಲ್ಲಿ ಸಾಕಷ್ಟು ಹಾಟ್ ದೃಶ್ಯಗಳಿವೆ. ಯಾವುದೂ ಅಶ್ಲೀಲವಾಗಿಲ್ಲ. ರೊಮ್ಯಾಂಟಿಕ್ ಹಾಗೂ ಅರೆಬೆತ್ತಲೆ ಬೆನ್ನಿನ ದೃಶ್ಯಗಳು ಇರುತ್ತವೆ ಎಂದು ಹೇಳಿದಾಗ ಸಂಗೀತಾ ಭಟ್ ಅವರೇ ನನಗೆ ಕಳುಹಿಸಿರುವ ಫೋಟೋಗಳನ್ನು ನೋಡಿದರೆ ನೀವೇ ಶಾಕ್ ಆಗ್ತೀರ. ನಾನು ಅರೆಬೆತ್ತಲೆ ಬೆನ್ನು ತೋರಿಸಬೇಕು ಎಂದಾಗ ಆಕೆ ಕಳುಹಿಸಿದ ಫೋಟೋಗಳು ತಾನು ಅದಕ್ಕೂ ಮೀರಿ ಕ್ಯಾಮೆರಾ ಮುಂದೆ ತೋರಿಸುವೆ ಎನ್ನುವಂತಿತ್ತು. ಆ ದೃಶ್ಯವನ್ನು ಚಿತ್ರೀಕರಣ ಮಾಡಿಕೊಳ್ಳುವಾಗ ನನ್ನ ಹೆಂಡತಿ, 16 ವರ್ಷದ ಮಗಳು ಸೆಟ್‌ನಲ್ಲೇ ನನ್ನ ಜತೆಗೆ ಇದ್ದರು.

3. ಮೀಟೂ ಗಲಾಟೆ ಮಾಡುತ್ತಿರುವವರು ಎಷ್ಟು ಸುಸಂಸ್ಕೃತರು? ಮದುವೆಯಾಗಿದ್ದರೂ ತಮ್ಮ ಮದುವೆ ವಿಚಾರ, ಗಂಡನ ಹೆಸರುಗಳನ್ನು ಮುಚ್ಚಿಟ್ಟು ಒಂದಿಷ್ಟು ವರ್ಷ ಚಿತ್ರರಂಗದಲ್ಲಿ ಚಲಾವಣೆ ಆಗುವುದು ಹೇಗೆ ಎಂಬುದನ್ನು ಅವರಿಂದ ಕಲಿಯಬೇಕು. ಜತೆಗೆ ಹಾಗೆ ಚಲಾವಣೆ ಆಗುತ್ತಲೇ ತಾವು ತುಂಬಾ ಪತಿವ್ರತೆಯರು ಎಂದು ಸಾಬೀತು ಮಾಡಿಸಿಕೊಳ್ಳುವುದಕ್ಕೆ ಏನು ಮಾಡಬೇಕೆಂಬುದನ್ನು ಕಲಿಯಬೇಕು.

4. ಇವರಿಗೆ ಈಗ ಯಾವ ಸಿನಿಮಾ ಸಿಗುತ್ತಿಲ್ಲ. ಕುಟುಂಬದ ಜತೆಗೆ ಸೆಟ್ಲ್ ಆಗಬೇಕು. ಹೀಗೆ ಆಗುವ ಹೊತ್ತಿಗೆ ಅವರೊಳಗೊಂದು ಪಾಪ ಪ್ರಜ್ಞೆ ಇರುತ್ತದೆ. ಜತೆಗೆ ಇವರಿಗೂ ಅತ್ತೆ ಮಾವ, ಗಂಡ ಅಂತ ಒಂದು ಕುಟುಂಬ ಇದೆಯಲ್ಲ, ಅವರ ಮುಂದೆ ತಾವು ತುಂಬಾ ಒಳ್ಳೆಯವರು, ಸತಿ ಸಾವಿತ್ರಿ ವಂಶಕ್ಕೆ ಸೇರಿದವರೆಂದು ಪೋಸು ಕೊಡಕ್ಕೆ ಮೀಟೂ ವೇದಿಕೆಯನ್ನು ಅಸ್ತ್ರವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮದುವೆ, ಗಂಡ, ಕುಟುಂಬದ ಹೆಸರುಗಳನ್ನು ಮುಚ್ಚಿಟ್ಟು ಎಲ್ಲಾ ವ್ಯವಹಾರ ಮಾಡಿಕೊಂಡು ಈಗ ಮೀಟೂ ಅಂತಿದ್ದಾರೆ.

ಇದು ಹೋರಾಟ ಅಲ್ಲ, ಇನ್ನೊಬ್ಬರ ಕುಟುಂಬದ ಮಾನ ಹರಾಜು ಹಾಕುತ್ತಿರುವ ಆಟ ಇಷ್ಟಕ್ಕೂ ಅರ್ಜುನ್ ಸರ್ಜಾ ವಿರುದ್ಧ ಮಾತನಾಡುತ್ತಿರುವ ಈ ಶ್ರುತಿ ಹರಿಹರನ್ ಯಾರು? ಈಕೆ ಮಲೆಯಾಳಿ ಹುಡುಗಿ. ತಮಿಳು ಮಾತೃಭಾಷೆಯದವಳಾದರೂ ಕನ್ನಡ ಚಿತ್ರರಂಗದಲ್ಲಿ ಅನ್ನ ತಿನ್ನುತ್ತಿರುವ ಹುಡುಗಿ. ಇಂಥವರು ಈಕೆ ನಮ್ಮ ಚಿತ್ರರಂಗದ ಗೌರವದ ಬಗ್ಗೆ ಮಾತನಾಡುತ್ತಾರೆ.

6. ನಿಜಕ್ಕೂ ಶ್ರುತಿ ಹರಿಹರನ್‌ಗೆ ಕೆಟ್ಟ ಅನುಭವ ಆಗಿದ್ದರೆ ಯಾಕೆ ಅವತ್ತೇ ಧ್ವನಿ ಎತ್ತಲಿಲ್ಲ? ಕಳ್ಳ ನಿಮ್ಮ ಚೀಲ ಕಿತ್ತುಕೊಂಡು ಹೋಗುತ್ತಾನೆ. ನೀವು ಆಗಲೇ ದೂರು ಕೊಡುತ್ತೀರೋ ಅಥವಾ ಚೀಲ ಕಳೆದುಕೊಂಡು ಒಂದು ವರ್ಷ ಆದ ಮೇಲೆ ಅಯ್ಯೋ ನನ್ನ ಚೀಲ ಚೀಲ ಅಂತ ಕಿರುಚುತ್ತೀರೋ? ಇಲ್ಲಿ ಚೀಲ ಅನ್ನೋ ಜಾಗದಲ್ಲಿ ಶೀಲ ಹಾಕಿಕೊಳ್ಳಿ.

7. ನನ್ನ ಅರ್ಜುನ್ ಸರ್ಜಾ ಅಲ್ಲಿಗೆ ಕರೆದ್ರು, ಇಲ್ಲಿಗೆ ಕರೆದ್ರು ಅಂತಿದ್ದಾರಲ್ಲ, ಒಂದು ದಿನ ನೇರವಾಗಿ ಅರ್ಜುನ್ ಸರ್ಜಾ ಮನೆಗೆ ಹೋಗಿ ಅವರ ಪತ್ನಿ ಮುಂದೆ ನಿಂತು ‘ನೋಡಿ ನಿಮ್ಮ ಗಂಡ ನನ್ನ ರೆಸಾರ್ಟ್‌ಗೆ ಕರೆಯುತ್ತಿದ್ದಾರೆ. ಖಾಸಗಿಯಾಗಿ ಕಳೆಯಬೇಕಂತೆ. ರೆಸಾಟ್ ಗೆರ್ ಯಾಕೆ ಅಂತ ಮನೆಗೆ ಬಂದೆ’ ಎಂದು ಹೇಳಿದ್ದರೆ ನಿಜಕ್ಕೂ ನಿಮ್ಮ ಪ್ರತಿಭಟನೆ ಒಪ್ಪಿಕೊಳ್ಳಬಹುದಿತ್ತು. ಜತೆಗೆ ತಪ್ಪು ಮಾಡಿದ್ದರೆ ತಪ್ಪಿತಸ್ಥರಿಗೆ ಅದೇ ನಿಜವಾದ ಶಿಕ್ಷೆ ಎನ್ನುವುದು ನನ್ನ ಭಾವನೆ. ಪತಿವ್ರತೆಯರೆಂದು ತೋರಿಸಿಕೊಳ್ಳಲು ಸಂಗೀತಾ, ಶ್ರುತಿ ನಾಟಕ

8. ನೀವು ನಟಿಯರೇ ಇಷ್ಟೆಲ್ಲ ಮೀಟೂ ಹೆಸರಿನಲ್ಲಿ ಸ್ಕ್ರಿಪ್ಟ್ ಮಾಡಿ ಆಟವಾಡುತ್ತಿದ್ದರೆ, ತೆರೆ ಮೇಲೆ ನಿಮ್ಮ ಪಾತ್ರಗಳನ್ನೇ ಸೃಷ್ಟಿ ಮಾಡೋ ಡೈರೆಕ್ಟರುಗಳು. ನಮಗೆ ನಾವು ಎಂಥ ಚಿತ್ರಕಥೆ ಮಾಡಬಹುದೋ ಹೇಳಿ!? ನಾವು ಕೂಡ ನಿಮ್ಮ ಹಾಗೆ ಬೀದಿಗೆ ಬಂದು ಸ್ಕ್ರಿಪ್ಟ್ ಮಾಡಕ್ಕೆ ಕೂತರೆ ನೀವು ಕಳೆದು ಹೋಗುತ್ತೀರಾ.

ನೀವು ಏನೇ ಆರೋಪ ಮಾಡುತ್ತಿದ್ದಾಗಲೂ ನಾವು ಸೈಲೆಂಟ್ ಆಗಿದ್ದೇವೆ ಅಂದ್ರೆ ಅದು ನಮ್ಮ ದೌರ್ಬಲ್ಯ ಅಲ್ಲ, ನಿಮ್ಮ ಮೇಲೆ ಇರೋ ಕನಿಕರ. ನಾವು ಮಾತನಾಡಕ್ಕೆ ಶುರು ಮಾಡಿದರೆ ನೀವು ಸೂಸೈಡ್ ಮಾಡಿಕೊಳ್ಳುತ್ತೀರಿ.

9.  ಇಷ್ಟೆಲ್ಲ ಗಲಾಟೆ ಮಾಡಿಸಿ, ರಾಡಿ ಎಬ್ಬಿಸಿ, ಈಗ ಕಣ್ಣೀರು ಹಾಕುತ್ತ ‘ನಾನು ಚಿತ್ರರಂಗ ಬಿಡುತ್ತೇನೆ. ದಯವಿಟ್ಟು ನನ್ನ ಬಿಟ್ಟು ಬಿಡಿ’ ಎನ್ನುವ ನಾಟಕ ಬೇರೆ ಮಾಡುತ್ತಿದ್ದಾರೆ. ನಿಮ್ಮಂಥವರು ಚಿತ್ರರಂಗ ಬಿಟ್ಟರೆ ಇನ್ನೂ ಒಳ್ಳೆಯದು. ಯಾಕೆಂದರೆ ನಮ್ಮ ದೇಹದ ಬೇರೆ ಬೇರೆ ರಂಧ್ರಗಳಿಂದ ನಿತ್ಯ ಕೊಳೆ ಹೋಗುತ್ತಿರುತ್ತದೆ. ಹಾಗೆ ಹೋಗುತ್ತಿದ್ದರೆ ದೇಹ ಆರೋಗ್ಯವಾಗಿರುತ್ತದೆ. ನಿಮ್ಮಂಥವರು ಕೂಡ ಅಷ್ಟೆ, ದೇಹದಿಂದ ತೊಲಗುವ ಕೊಳೆಗೆ ಸಮಾನ. ನೀವು ಚಿತ್ರರಂಗದಿಂದ ದೂರ ಹೋದರೆ, ಚಿತ್ರರಂಗಕ್ಕೇ ಒಳ್ಳೆಯದು. 

click me!