ಪೈಲ್ವಾನ್ ಸೆಟ್‌ಗೆ ಸುನೀಲ್ ಶೆಟ್ಟಿ ಆಗಮನ

Published : Aug 30, 2018, 12:06 PM ISTUpdated : Sep 09, 2018, 09:04 PM IST
ಪೈಲ್ವಾನ್ ಸೆಟ್‌ಗೆ ಸುನೀಲ್ ಶೆಟ್ಟಿ ಆಗಮನ

ಸಾರಾಂಶ

ಕಿಚ್ಚ ಸುದೀಪ್’ರ ಪೈಲ್ವಾನ್ ಸೆಟ್‌ಗೆ ಸುನೀಲ್ ಶೆಟ್ಟಿ ಎಂಟ್ರಿ | ಸುದೀಪ್ ಜೊತೆ ಸೆಲ್ಫಿ | ಚಿತ್ರೀಕರಣಕ್ಕಾಗಿ ಹೈದರಾಬಾದ್‌ಗೆ ಬಂದಿಳಿದ ಸುನೀಲ್ ಶೆಟ್ಟಿ 

ಬೆಂಗಳೂರು (ಆ. 30): ಕಿಚ್ಚ ಸುದೀಪ್ ಅಭಿನಯದ ಹಾಗೂ ಹೆಬ್ಬುಲಿ ಕೃಷ್ಣ ನಿರ್ದೇಶನದ ‘ಪೈಲ್ವಾನ್’ ಚಿತ್ರದ ಸೆಟ್‌ಗೆ ಸುನೀಲ್ ಶೆಟ್ಟಿ ಆಗಮನವಾಗಿದೆ.

ಬಾಲಿವುಡ್‌ನ ಖ್ಯಾತ ನಟ ಸುನೀಲ್ ಶೆಟ್ಟಿ ಹೈದರಾಬಾದ್‌ನಲ್ಲಿ ಶೂಟಿಂಗ್ ಸೆಟ್ ಸೇರಿಕೊಂಡಿದ್ದಾರೆ. ಕಿಚ್ಚ ಸುದೀಪ್ ಮತ್ತು ಚಿತ್ರತಂಡ ಅವರೊಂದಿಗೆ ಸೆಲ್ಫೀ ತೆಗೆದು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.
ಚಿತ್ರೀಕರಣಕ್ಕಾಗಿ ಅದ್ಧೂರಿ ಸೆಟ್ ಹಾಕಲಾಗಿದೆ. ತಮ್ಮ ಪಾತ್ರದ ಚಿತ್ರೀಕರಣಕ್ಕಾಗಿ ನಟ ಸುನೀಲ್ ಶೆಟ್ಟಿ ಹೈದರಾಬಾದ್‌ಗೆ ಬಂದಿಳಿದ್ದು, ಬುಧವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಒಟ್ಟು 30 ದಿನಗಳ ಕಾಲದ ಕಾಲ್‌ಶೀಟ್ ನೀಡಿದ್ದಾರಂತೆ. ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ನಡೆಯುವ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುದೀಪ್ ಜೋಡಿಯಾಗಿ ಇಲ್ಲಿ ಆಕಾಂಕ್ಷ ಸಿಂಗ್ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

45 Movie Trailer Release: ಚೆಲುವೆಯ ನೋಟ ಚೆನ್ನ..ಸಿನಿಮಾ ನೋಡಲೇಬೇಕು ಎಂದು ಸೈಕ್‌ ಮಾಡಿದ ಕಾರಣಗಳಿವು!
The Devil Movie ಶೋಗೆ ಚಪ್ಪಲಿ ಹಾಕ್ಬೇಡ ಅಂತ ಮಗ ವಿನೀಶ್‌ಗೆ ಹೇಳೋಕೆ ಕಾರಣವಿದೆ: Vijayalakshmi Darshan