ಸಿಲ್ಕ್ ಸ್ಮಿತಾ ಪಾತ್ರಕ್ಕೆ ಎಸ್ತರ್ ನೊರೊನ್ಹಾ ?

By Web DeskFirst Published Aug 29, 2018, 4:51 PM IST
Highlights

ಮಂಗಳೂರು ಬೆಡಗಿ ಎಸ್ತರ್ ನೊರೊನ್ಹಾ ಸ್ಯಾಂಡಲ್‌ವುಡ್‌ಗೆ ಹಿಂತಿರುಗಿದ್ದಾರೆ. ಇಂದ್ರಜಿತ್ ಲಂಕೇಶ್ ಮತ್ತೆ ಕನ್ನಡಕ್ಕೆ ಕರೆತಂದಿದ್ದಾರೆ. ಸಿಲ್ಕ್ ಸ್ಮಿತಾ ಪಾತ್ರವನ್ನು ಇವರು ಮಾಡುತ್ತಿದ್ದಾರಾ? 

ಬೆಂಗಳೂರು (ಆ. 29):  ಎಸ್ತರ್ ನೊರೊನ್ಹಾ ಮತ್ತೆ ಬಂದಿದ್ದಾರೆ. ಕನ್ನಡದ ನಟಿಯಾದರೂ ಸ್ಯಾಂಡಲ್‌ವುಡ್‌ಗೆ ಅಪರೂಪ ಎನಿಸಿರುವ ಈಕೆಯನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೆ ಕನ್ನಡಕ್ಕೆ ಕರೆತಂದಿದ್ದಾರೆ.

ಅಂದಹಾಗೆ ಎಸ್ತರ್ ಆಗಮನವಾಗಿರುವುದು ‘ದಿ ಶಕೀಲಾ’ ಚಿತ್ರದ ಮೂಲಕ. ರಿಚಾ ಚಡ್ಡ ನಾಯಕಿಯಾಗಿ ನಟಿಸಿರುತ್ತಿರುವ, ಮಲಯಾಳಂ ಚಿತ್ರರಂಗದ ತಾರೆ ಶಕೀಲಾ ಅವರ ಜೀವನ ಚರಿತ್ರೆ ಆಧರಿಸಿದ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಎಸ್ತರ್ ಮುಖ್ಯವಾದ ಪಾತ್ರ ಮಾಡುತ್ತಿದ್ದಾರೆ.

ಶಕೀಲಾ ಜೀವನದ ಆರಂಭದ ದಿನಗಳಲ್ಲಿ ಸಿಲ್ಕ್ ಸ್ಮಿತಾ ಕೂಡ ಬರುತ್ತಾರೆ. ಆ ಪಾತ್ರವನ್ನೇನಾದರೂ ಎಸ್ತರ್ ಮಾಡುತ್ತಿದ್ದಾರೆಯೇ ಎಂಬುದು ಎಲ್ಲರಿಗೂ ಇರುವ ಅನುಮಾನ. ‘ನುಗ್ಗೆಕಾಯಿ’, ‘ಉಸಿರಿಗಿಂತ ನೀನೇ ಹತ್ತಿರ’ ಹಾಗೂ ‘ಅತಿರಥ’ ಚಿತ್ರಗಳಲ್ಲಿ ನಟಿಸಿದ ಮಂಗಳೂರು ಮೂಲದ ಎಸ್ತರ್ ನೊರೊನ್ಹಾ ತೆಲುಗಿನಲ್ಲಿ ಒಂದು ಮಟ್ಟಿಗೆ ಸ್ಟಾರ್. ಅವರು ತಮ್ಮ ಬದುಕು ಮತ್ತು ಹೊಸ ಚಿತ್ರದ ಬಗ್ಗೆ ಹೇಳಿದ
ಮಾತುಗಳು ಇಲ್ಲಿವೆ.

ಪಕ್ಕದ ಭಾಷೆಗಳಲ್ಲಿ ಬೇಡಿಕೆ ಇದೆ:

ನಾನು ಕನ್ನಡದ ಹುಡುಗಿ. ಮಂಗಳೂರಿನವಳು. ಆದರೆ, ಓದಿದ್ದು ಮುಂಬೈಯಲ್ಲಿ. ಹೀಗಾಗಿ ಹಿಂದಿ ಚಿತ್ರದ ಮೂಲಕ ನಾನು ಚಿತ್ರರಂಗಕ್ಕೆ ಬಂದೆ. ಹೆಸರು ತಂದುಕೊಟ್ಟಿದ್ದು ಮಾತ್ರ ತೆಲುಗು ಚಿತ್ರಗಳು. ‘1000 ಅಪದ್ದಾಲು’ ಹಾಗೂ ‘ಭೀಮವರಂ ಬುಲ್ಲೋಡು’ ಚಿತ್ರಗಳು ಕಮರ್ಷಿಯಲ್ ಬ್ರೇಕ್ ಕೊಟ್ಟವು. ಆ ನಂತರ ತಮಿಳು ಸಿನಿಮಾಗಳಿಂದಲೂ ಅವಕಾಶಗಳು ಬಂದವು. ಇದರ ನಡುವೆ ಆಗಾಗ ಕನ್ನಡಕ್ಕೆ ಬರುತ್ತಿದ್ದೆ. ಅಪರೂಪಕ್ಕಾದರೂ ಒಳ್ಳೆ ಚಿತ್ರಗಳು ಸಿಗುತ್ತಿವೆ: ಕನ್ನಡದಲ್ಲಿ ಮೂರು ಚಿತ್ರಗಳಲ್ಲಿ ನಟಿಸಿದ್ದೇನೆ.

ಅಪರೂಪಕ್ಕೆ ಅವಕಾಶಗಳು ಸಿಕ್ಕಿದರೂ ಒಳ್ಳೆಯ ಪಾತ್ರ ಮತ್ತು ಕತೆಗಳಿಗೆ ನಾಯಕಿಯಾಗುತ್ತಿರುವೆ. ಕನ್ನಡ ಚಿತ್ರಗಳಲ್ಲಿ ನನ್ನ ನಟನೆ ನೋಡಿಯೇ ‘ದಿ ಶಕೀಲಾ’ ಚಿತ್ರಕ್ಕೆ ನನ್ನ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. 

click me!