
ನವದೆಹಲಿ (pg.21): ಸಂಪೂರ್ಣ ಸ್ವದೇಶಿ ನಿರ್ಮಿತ ವಂದೇ ಭಾರತ್ ಎಕ್ಸ್‌ಪ್ರೆಸ್, ಭಾರತೀಯ ರೈಲ್ವೆಯ ಪಾಲಿಗೆ ಭರ್ಜರಿ ಯಶಸ್ಸನ್ನು ತಂದುಕೊಂಡುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಕಾರಣ, ರೈಲು ನಿರ್ಮಾಣಕ್ಕೆ ಮಾಡಿದ ವೆಚ್ಚ ಕೇವಲ 12-15 ತಿಂಗಳಲ್ಲಿ ರೈಲ್ವೆಗೆ ಮರಳಿ ಬರುವ ಸೂಚನೆಗಳು ಕಂಡುಬಂದಿವೆ.
ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಸದಸ್ಯ ರಾಜೇಶ್ ಅಗರ್‌ವಾಲ್, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಿರ್ಮಾಣಕ್ಕೆ ಅಂದಾಜು 100 ಕೋಟಿ ರು.ವೆಚ್ಚ ಮಾಡಲಾಗಿತ್ತು. ನವದೆಹಲಿ ಮತ್ತು ವಾರಾಣಸಿ ನಡುವೆ ವಾರಕ್ಕೆ 5 ದಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚರಿಸುತ್ತಿದೆ.
ವಂದೇ ಭಾರತ್ ಟೀಕಿಸಿದ ರಾಹುಲ್‌ಗೆ ತಿರುಗೇಟು ನೀಡಿದ ಮೋದಿ
ಜೊತೆಗೆ ಎಲ್ಲಾ 5 ದಿನಗಳಲ್ಲೂ ರೈಲು ಪೂರ್ಣ ಪ್ರಮಾಣದಲ್ಲಿ ಪ್ರಯಾಣಿಕರಿಂದ ತುಂಬಿರುತ್ತಿದೆ. ಇತರೆ ರೈಲುಗಳಲ್ಲಿ ಇರುವ ಯಾವುದೇ ರಿಯಾಯಿತಿ ಈ ರೈಲುಗಳಲ್ಲಿ ಇರುವುದಿಲ್ಲ. ಅಲ್ಲದೆ ಇತರೆ ರೈಲಿನ ಟಿಕೆಟ್ ದರಕ್ಕಿಂತ ಇದರ ದರವೂ ಸ್ವಲ್ಪ ಹೆಚ್ಚಿದೆ. ಹೀಗಾಗಿ ರೈಲು ಮಾಸಿಕ 7 ಕೋಟಿ ರು. ಆದಾಯ ಸಂಗ್ರಹಿಸುತ್ತಿದೆ. ಇದೇ ರೀತಿ ರೈಲಿನ ಆದಾಯ ಸಂಗ್ರಹ ಮುಂದುವರೆದರೆ 12-15 ತಿಂಗಳಲ್ಲಿ ರೈಲಿಗೆ ಮಾಡಿದ ವೆಚ್ಚ ಪೂರ್ಣ ಪ್ರಮಾಣದಲ್ಲಿ ಮರಳಲಿದೆ ಎಂದು ಅಗರ್‌ವಾಲ್ ಹೇಳಿದ್ದಾರೆ.
ಕೆಟ್ಟು ನಿಂತ ಭಾರತದ ಅತೀ ವೇಗದ ರೈಲಿಗೇನಾಗಿತ್ತು?
ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.