
ಶ್ರೀ ಹರ್ಷ ಮಂದ ನಿರ್ದೇಶನದ ‘ರಾಮ ಚೆಕ್ಕನಿ ಸೀತ’ ಹೆಸರಿನ ಚಿತ್ರಕ್ಕೆ ನಾಯಕಿ ಆಗಿದ್ದು, ಆ ಮೂಲಕ ಇದೇ ಮೊದಲು ಟಾಲಿವುಡ್ ಜರ್ನಿ ಶುರು ಮಾಡಿದ್ದಾರೆ.
ಜಿ.ಎಲ್. ಪ್ಹನಿಕಾಂತ್ ಹಾಗೂ ವಿಶಾಲಾಕ್ಷಿ ಮಂದ ನಿರ್ಮಾಣದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಶುರುವಾಗಿದೆ. ಇದು ರಾಮ ಮತ್ತು ಸೀತೆಯ ಕತೆ. ಹಾಗೆಂದಾಕ್ಷಣ ಇದೇನು ಪೌರಾಣಿಕ ಕತೆ ಅಲ್ಲ. ರಾಮ ಮತ್ತು ಸೀತೆ ಈ ಕಾಲದ ಹುಡುಗ, ಹುಡುಗಿ. ಅವರ ನಡುವಿನ ನವಿರಾದ ಪ್ರೇಮ ಮತ್ತು ಕಾಮಿಡಿ ಕತೆಯೇ ಈ ಚಿತ್ರ. ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ಜಟ್ಟ ಖ್ಯಾತಿಯ ನಟಿ ಸುಕೃತಾ ವಾಗ್ಳೆ ಫಸ್ಟ್ ಟೈಮ್ ಟಾಲಿವುಡ್ ಅವಕಾಶ ಸಿಕ್ಕಿದ್ದರ ಕುರಿತು ಖುಷಿಯಾಗಿದ್ದಾರೆ.
‘ಕಳೆದೆರೆಡು ವರ್ಷಗಳಲ್ಲಿ ಎರಡ್ಮೂರು ಸಿನಿಮಾಗಳ ಆಫರ್ ಕೂಡ ಬಂದಿದ್ದವು. ಆದ್ರೆ ಎಂಟ್ರಿಗೆ ಒಳ್ಳೆಯ ಪಾತ್ರವೇ ಇದ್ದರೆ ಚೆಂದ ಅಂತ ಆ ಸಿನಿಮಾದ ಅವಕಾಶ ಒಪ್ಪಿಕೊಂಡಿರಲಿಲ್ಲ. ಅಲ್ಲಿ ನಾನು ನಿರ್ವಹಿಸಬೇಕಿದ್ದ ಪಾತ್ರಗಳಿಗೂ ಅಷ್ಟಾಗಿ ಪ್ರಾಮುಖ್ಯತೆ ಇರಲಿಲ್ಲ. ಹಾಗಾಗಿ ಹೊಸ ಅವಕಾಶ ಬಂದರೆ ನೋಡೋಣ ಅಂತ ಸುಮ್ಮನಿದ್ದೆ. ಒಂದೆರಡು ತಿಂಗಳ ಹಿಂದೆ ಈ ಸಿನಿಮಾದ ಆಫರ್ ಬಂತು. ಪರಿಚಯದವರೊಬ್ಬರು ಸಿನಿಮಾದ ಆಡಿಷನ್ ಬಗ್ಗೆ ಹೇಳಿದರು. ಹೈದರಾಬಾದ್‌ಗೆ ಹೋಗಿ ಆಡಿಷನ್ ಮುಗಿಸಿ ಬಂದಿದ್ದೆ. ಅದಾದ ಒಂದಷ್ಟು ದಿನಗಳ ನಂತರ ನಿರ್ದೇಶಕರೇ ಫೋನ್ ಮಾಡಿ ಪಾತ್ರಕ್ಕೆ ನೀವೇ ಸೂಕ್ತವಾಗುತ್ತೀರಿ ಅಂತ ನಿಮ್ಮನ್ನೇ ಆಯ್ಕೆ ಮಾಡಿಕೊಂಡಿದ್ದೇವೆ ಎಂದರು’ ಎನ್ನುತ್ತಾರೆ ನಟಿ ಸುಕೃತಾ ವಾಗ್ಳೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ನಾನಿಲ್ಲಿ ಸೀತೆ. ಹಾಗಂತ ಈಕೆ ರಾಮಾಯಣದ ಸೀತೆಯಲ್ಲ. ಈ ಕಾಲದ ಸೀತೆ. ಮಾಡ್ರನ್ ಹುಡುಗಿ. ಅಷ್ಟೇ ಮಾಡ್ರನ್ ಹುಡುಗ ರಾಮ. ಅವರಿಬ್ಬರ ಪ್ರೇಮಕತೆ. ನಾಯಕನ ಪಾತ್ರಕ್ಕಿರುವ ಪ್ರಾಮುಖ್ಯತೆ ನನ್ನ ಪಾತ್ರಕ್ಕೂ ಇದೆ. ಒಳ್ಳೆಯ ಅವಕಾಶ ಅಂತ ಖುಷಿಯಾಗಿದೆ - ಸುಕೃತಾ ವಾಗ್ಳೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.