ಮೊದಲ ಶಾಟ್‌ನಲ್ಲೇ ವಿಷ್ಣುಗೆ ಕಪಾಳ ಮೋಕ್ಷ ಮಾಡಿದ ಸುಹಾಸಿನಿ!

Published : Jul 09, 2019, 04:25 PM IST
ಮೊದಲ ಶಾಟ್‌ನಲ್ಲೇ ವಿಷ್ಣುಗೆ ಕಪಾಳ ಮೋಕ್ಷ ಮಾಡಿದ ಸುಹಾಸಿನಿ!

ಸಾರಾಂಶ

ಸ್ಯಾಂಡಲ್‌ವುಡ್‌ ದಿ ಬೆಸ್ಟ್‌ ಲವ್‌ ಸ್ಟೋರಿ ಅಂದ್ರೆ 'ಬಂಧನ'. ಅದರಲ್ಲೂ ಸಾಹಸ ಸಿಂಹನನ್ನು ಮೊದಲ ಬಾರಿಗೆ ಲವರ್ ಬಾಯ್ ಆಗಿ ಅಭಿಮಾನಿಗಳ ಮುಂದೆ ತಂದಿಟ್ಟವರು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು. ಚಿತ್ರದ ಮೊದಲ ಶಾಟ್‌ನಲ್ಲಿ ವಿಷ್ಣುಗೆ ಕಪಾಳ ಮೋಕ್ಷವಾದ ಸನ್ನಿವೇಶವನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

 

ಜೀ ಕನ್ನಡ ವಾಹಿನಿಯ ಖ್ಯಾತ ಶೋ ವೀಕೇಂಡ್ ವಿತ್ ರಮೇಶ್ ಕಾರ್ಯಕ್ರಮ ಅಂತಿಮ ಘಟ್ಟದಲ್ಲಿದ್ದು, ಸಾಧಕರ ಕುರ್ಚಿಗೆ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಆಗಮಿಸಿದ್ದರು.

ಸ್ಯಾಂಡಲ್‌ವುಗೆ ಎಂದಿಗೂ ಬೀಟ್ ಮಾಡಲಾಗದ ಬೆಸ್ಟ್‌ ಲವ್‌ ಸ್ಟೋರಿ ಅಂದ್ರೆ ಅದು 'ಬಂಧನ'. ವಿಷ್ಣು ವರ್ಧನ್ ಹಾಗೂ ಸುಹಾಸಿನಿ ಇಬ್ಬರಿಗೂ ಬ್ರೇಕ್‌ ಕೊಟ್ಟಂತಹ ಸಿನಿಮಾವಿದು. ಈ ಸಿನಿಮಾದಲ್ಲಿ ನಡೆದ ಕೆಲವೊಂದು ಸ್ವಾರಸ್ಯ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ.

ಮದ್ರಾಸಿನ ಆ 30 ರೂ., ಜೀವನವನ್ನೇ ಬದಲಾಯಿಸಿದ ಉಪ್ಪಿ-ಬಿರಾದಾರ್ ಒಪ್ಪಂದ!

ರಾಜೇಂದ್ರ ಸಿಂಗ್ ಹಾಗೂ ಸಹೋದರಿ ವಿಜಯಲಕ್ಷ್ಮಿ ಸಿಂಗ್ ನಟಿ ಸುಹಾಸಿನಿಗೆ ಹತ್ತು ನಿಮಿಷದಲ್ಲಿ ಕಥೆ ಹೇಳಿ ಚಿತ್ರಕ್ಕೆ ಒಪ್ಪಿಸಿದ್ದರಂತೆ. ಚಿತ್ರೀಕರಣ ಶುರುವಾದ ಮೊದಲ ದಿನ ಸುಹಾಸಿನಿ ವಿಷ್ಣುವರ್ಧನ್ ಗೆ ಕಪಾಳಕ್ಕೆ ಹೊಡೆಯುವ ದೃಶ್ಯವಿತ್ತು. ಹೆಸರಾಂತ ನಟನಿಗೆ ಇಂತಹ ದೃಶ್ಯದಲ್ಲಿ ಹೇಗೆ ಕಪಾಳಕ್ಕೆ ಹೊಡೆಯುವುದು ಎಂದು ಹೆದರಿದರಂತೆ. ಆನಂತರ ಇದು ಚಿತ್ರ ಹಾಗೂ ಪಾತ್ರ ಬಯಸುವುದು ಎಂದು ಮನದಟ್ಟು ಮಾಡಿದ ಮೇಲೆ ದೃಶ್ಯ ಮಾಡಿದರಂತೆ.

ಖ್ಯಾತ ನಿರ್ದೇಶಕನಿಂದ 10.ರೂ ಪಡೆದು ಧನ್ಯನಾದ ಶರಣ್!

'ಬಂಧನ' ಒಂದು ಪುಸ್ತಕ ಆಧಾರಿತವಾಗಿದ್ದು ಅದರ ರೈಟ್ಸ್‌ ಕಲ್ಪನಾ ತೆಗೆದುಕೊಂಡಿದ್ದರಂತೆ. ರಾಜೇಂದ್ರ ಸಿಂಗ್ ಸಿನಿಮಾ ಮಾಡಬೇಕೆಂದು ಕೇಳಿದಾಗ ಕಲ್ಪನಾ ಒಂದು ನಿಮಿಷವೂ ಯೋಚಿಸದೇ ಒಪ್ಪಿಗೆ ನೀಡಿದರಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
BBK 12: ಇಂಥ ಸಣ್ಣಬುದ್ಧಿ ಸರಿನಾ? ಗಿಲ್ಲಿ ನಟ ಬೇಡಿದರೂ, ಗೋಗರೆದರೂ ಕೇಳಲಿಲ್ಲ: ರಘು ವಿರುದ್ಧ ರೊಚ್ಚಿಗೆದ್ದ ಜನತೆ