
ಕಲರ್ಸ್ ಸೂಪರ್ ವಾಹಿನಿಯ ಪ್ರಸಿದ್ಧ ಧಾರಾವಾಹಿ 'ಮಗಳು ಜಾನಕಿ' ವಿಭಿನ್ನ ಕಥೆಯಿಂದ, ಪಾತ್ರಗಳಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ. ಗಂಭೀರ ವಾತಾವರಣದಲ್ಲೂ ತನ್ನದೇ ಶೈಲಿಯಲ್ಲಿ ಕಾಮಿಡಿ ಮಾಡಿಕೊಂಡು ಪ್ರೇಕ್ಷಕರ ಗಮನ ಸೆಳೆದವರು ಹರಿಕುಮಾರ್ ಅಲಿಯಾಸ್ ಶ್ರೀಹರಿ ಕಶ್ಯಪ್.
ಧಾರಾವಾಹಿಯಲ್ಲಿ ಸುಂದರ್ ಮೂರ್ತಿ ಹಾಗೂ ಹರಿಕುಮಾರ್ ಪಾತ್ರವನ್ನು ಎಂಥವರೂ ಪದೇ ಪದೇ ನೋಡಬೇಕು ಎಂದನಿಸುತ್ತದೆ. ಸಿ ಎಸ್ ಪಿ ಅವರಿಗೆ ಪರ್ಸನಲ್ ಸೆಕ್ರೇಟರಿ ಆಗಿ ಕೆಲಸ ಮಾಡುತ್ತಿದ್ದ ಹರಿಕುಮಾರ್ ಕೆಲಸ ಬಿಡುವುದಾಗಿ ನಿರ್ಧಾರ ಮಾಡಿದ್ದು ಅಲ್ಲಿಗೆ ಹರಿಕುಮಾರ್ ಪಾತ್ರ ಮುಕ್ತಾಯವಾಗುತ್ತದೆ. ನಿಜವಾಗಿಯೂ ಹರಿಕುಮಾರ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ.
‘ಮಗಳು ಜಾನಕಿ’ ನೀವು ನೋಡಿರದ ಫೋಟೋಗಳಿವು!
ಸುಮಾರು ಒಂದು ವರ್ಷದಿಂದ ಧಾರಾವಾಹಿಯಲ್ಲಿ ಸುಂದರಮೂರ್ತಿ ಜೊತೆ ಹಾಸ್ಯ ಮಾಡುತ್ತಾ ರಂಜಿಸಿದ ಹರಿಕುಮಾರ್ ರಿಯಲ್ ನೇಮ್ ಶ್ರೀಹರಿ ಕಶ್ಯಪ್. ಇವರು ತೆರೆ ಮೇಲೆ ಮಾತ್ರವಲ್ಲದೆ ತೆರೆ ಹಿಂದೆಯೂ ಕೆಲಸ ಮಾಡಿದ್ದಾರೆ.
ಯಾವಾಗಲೂ ಕಾಮಿಡಿ ಮಾಡಿಕೊಂಡು ಸಿಎಸ್ ಪಿ ಎದುರು ಬೈಸಿಕೊಳ್ಳುತ್ತಿದ್ದ ಹರಿಕುಮಾರ್ ಇದ್ದಕ್ಕಿದ್ದಂತೆ ಸಿಎಸ್ ಪಿ ಮುಂದೆ ಬಂದು ಕೆಲಸ ಬಿಡುವುದಾಗಿ ಹೇಳಿದ್ದಾರೆ. ನೆನಪಿನ ಕಾಣಿಕೆಯಾಗಿ ಸಿಎಸ್ಪಿಗೆ ಪೆನ್ ಹಾಗೂ ಶಾಮಲತ್ತೆಗೆ ಸೀರೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಹರಿಕುಮಾರ್ ಕಾಮಿಡಿಯನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುವುದಂತೂ ಗ್ಯಾರಂಟಿ!
ಐಪಿಎಸ್ ಅಧಿಕಾರಿಯಾಗಲಿದ್ದಾರೆ ‘ಮಗಳು ಜಾನಕಿ’
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.