(ವಿಡಿಯೋ) ಹುಟ್ಟು'ಹಬ್ಬದ ದಿನ ಹಲವು ಸಿಕ್ರೇಟ್ ಬಿಚ್ಚಿಟ್ಟ ಕಿಚ್ಚ: ಶೇ.50 ಆಸ್ತಿ ದಾನ, ಜನುಮದಿನ ಆಚರಿಸದಿರಲು ಕಾರಣ..

Suvarna Web Desk |  
Published : Sep 02, 2017, 11:36 PM ISTUpdated : Apr 11, 2018, 01:04 PM IST
(ವಿಡಿಯೋ) ಹುಟ್ಟು'ಹಬ್ಬದ ದಿನ ಹಲವು ಸಿಕ್ರೇಟ್ ಬಿಚ್ಚಿಟ್ಟ ಕಿಚ್ಚ: ಶೇ.50 ಆಸ್ತಿ ದಾನ, ಜನುಮದಿನ ಆಚರಿಸದಿರಲು ಕಾರಣ..

ಸಾರಾಂಶ

ತಮ್ಮ ಅಂತರಂಗದಲ್ಲಿರುವ ಹಲವು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಅವರು ಹೇಳಿದ ಸಂಕ್ಷಿಪ್ತ ಮಾತುಗಳು ಹೀಗಿವೆ .

ಸ್ಯಾಂಡಲ್'ವುಡ್ ಸ್ಟಾರ್ 'ಕಿಚ್ಚ ಸುದೀಪ್' ತಮ್ಮ 43ನೇ ಹುಟ್ಟುಹಬ್ಬದ ಪ್ರಯುಕ್ತ ಟ್ವಿಟರ್'ನಲ್ಲಿ ಲೈವ್ ನೀಡುವ ಮೂಲಕ ತಮ್ಮ ಮನದಾಳದ ಹಲವು ಭಾವನೆ, ಕನಸುಗಳನ್ನು ಬಿಚ್ಚಿಟ್ಟಿದ್ದಾರೆ.

ಮೊದಲಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ಸುದೀಪ್ 'ತಾವು ಮನೆಯಲ್ಲಿ ಇಲ್ಲದ ಕಾರಣ ಶುಭಕೋರಲು ಬಂದಿದ್ದ ಅಭಿಮಾನಿಗಳ ಕ್ಷಮೆ ಕೋರಿದರು. ನಂತರ ಮಾತನಾಡಿ ತಮ್ಮ ಅಂತರಂಗದಲ್ಲಿರುವ ಹಲವು ವಿಷಯಗಳನ್ನು ಹೇಳಿಕೊಂಡರು. ಅವರು ಹೇಳಿದ ಸಂಕ್ಷಿಪ್ತ ಮಾತುಗಳು ಹೀಗಿವೆ.

'ನೀವು ನನ್ನನ್ನು ಅಭಿಮಾನಿಸಲು ತಂದಿದ್ದ ಕೇಕು ಹಾಗೂ ಹಾರಗಳಿಗೆ ಬಳಸುವ ಹಣವನ್ನು ಸಾಧ್ಯವಾದಷ್ಟು ಬೇರೆಯವರಿಗೆ ದಾನ ಮಾಡಿ. ಇದೇ ಸಂದರ್ಭದಲ್ಲಿ ಮನಕುಲುಕುವ ಒಂದು ನೋವನ್ನು ಕೂಡ ಹೇಳಿಕೊಂಡರು. ಕಳೆದ ವರ್ಷ ಇವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅಭಿಮಾನಿಗಳು ಕೇಕುಗಳನ್ನು ರಸ್ತೆಯಲ್ಲಿ ಚೆಲ್ಲಾಡಿ ಹೋಗಿದ್ದರು. ಸಣ್ಣ ಹುಡುಗಿಯೊಬ್ಬಳು ರಸ್ತೆಯಲ್ಲಿದ್ದ ಕೇಕನ್ನು ತಿನ್ನುತ್ತಿದ್ದುದ್ದು ನನಗೆ ನಿಜವಾಗಿಯೂ ನೋವನ್ನು ಉಂಟು ಮಾಡಿತು. ಈ ಸಂದರ್ಭದಲ್ಲಿ ನನ್ನ ಮಗಳು ನನಪಿಗೆ ಬಂದಳು' ಈ ಕಾರಣದಿಂದಾಗಿಯೇ ಆಡಂಬರದ ಹುಟ್ಟುಹಬ್ಬವನ್ನು ನಿಲ್ಲಿಸಲು ತೀರ್ಮಾನಿಸಿದ್ದೇನೆ.

ನನ್ನ ಬಗ್ಗೆ ಕೆಲವರು ಸಿನಿಮಾದಲ್ಲಿ ಮಾತ್ರ ಹೀಗೆನಾ ಏನೇನು ದಾನ ಮಾಡಿದ್ದೀರಾ ಎಂದು ಕೀಳಾಗಿ ಮಾತನಾಡಿದ್ದಾರೆ. ನಿಜ ಹೇಳುತ್ತಿದ್ದೇನೆ ನಾನು 18 ಮಕ್ಕಳನ್ನು ದತ್ತು ತೆಗೆದುಕೊಂಡಿದ್ದೇನೆ. ನಾನೇ ಅವರನ್ನು ಸಾಕುತ್ತಿದ್ದೇನೆ. ಅನಾಥಾಶ್ರಮ ನಡೆಸುತ್ತಿದ್ದೇನೆ. ಒಂದು ಸರ್ಕಾರಿ ಶಾಲೆ ನಡೆಸುತ್ತಿದ್ದೇನೆ. ಹಣಕಾಸಿನ ವಿಷಯದಲ್ಲಿ ನಾನು ಯಾರ ಮುಂದೆಯು ಕೈಬೇಡಿದವನಲ್ಲ. ಕೈಚಾಚಿಯೂ ಇಲ್ಲ. ನನ್ನ ದುಡಿಮೆಯಲ್ಲಿ ಆದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ'. ಇದಕ್ಕೆಲ ಕಾರಣ ಇಷ್ಟೆ ಎಷ್ಟು ದಿನ ಬದುಕುತ್ತೇನೋ ಗೊತ್ತಿಲ್ಲ. ಅಲೆಕ್ಸಾಂಡರ್ ಎನ್ನುವ ರಾಜ ಸಾಯುವ ಕೊನೆಯಲ್ಲಿ ಕೈ ತಾನು ಏನು ಸಾಧಿಸಲಿಲ್ಲ ಎಂದು ಮೇಲೆ ಕೈ ಇಟ್ಟು ಹೋದ.

ಎಷ್ಟೋ ದೊಡ್ಡ ಕಲಾವಿದರು ಸರಳವಾಗಿ ಬದುಕುತ್ತಿದ್ದಾರೆ. ಕಾರಣವಿಷ್ಟೆ ಅವರು ಜೀವನ ನೋಡಿರುತ್ತಾರೆ. ಸುಮಾರು ಮಂದಿ ನೀವು ಕೋಟ್ಯಾದಿಪತಿಗಳು ಎಂದು ಹೇಳಿದ್ದಾರೆ. ಆದರೆ ನಾನು ದುಡಿದ ಹಣ ಕಷ್ಟಪಟ್ಟಿದ್ದು. ಸಂಪಾದನೆ ಮಾಡಿರುವುದರಲ್ಲಿ ಶೇ. 40 ರಿಂದ 50 ರಷ್ಟು ವಾಪಸ್ ಕೊಟ್ಟು ಬಿಡುತ್ತೇನೆ. ತಿಂಗಳಲ್ಲಿ ಒಂದು ಭಾನುವಾರ ನಿಮ್ಮ ಕೈಗೆ ಸಿಗುತ್ತೇನೆ. ಆಂದು ಬನ್ನಿ ಮಾತಾನಾಡೋಣ.

ನಾನು ಸಿನಿಮಾಗೆ ಬಂದಿದ್ದು ನಿಮ್ಮನ್ನು ಸಂಪಾದಿಸಲು ಹೊರತು ಹಣ ಸಂಪಾದಿಸಲು ಅಲ್ಲ. ಕೆಲವು ದಿನಗಳ ಹಿಂದೆ ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಕೂಡ ತಿಳಿಸಿದ್ದೆ ಕೇಕು ಮುಂತಾದವಕ್ಕೆ ಖರ್ಚು ಮಾಡುವ ಬದಲು 4 ಮಂದಿಗೆ ಸಹಾಯ ಮಾಡಿ. ನೀವು ಮಾಡುವ ದಾನ ನಿಮಗೆ ಒಳ್ಳೆಯದು ಮಾಡಲಿ. ಎಲ್ಲ ಬಡವರಿಗೂ ಸಹಾಯ ಮಾಡಲು ನನ್ನ ಬಳಿಯಿರುವ ಹಣ ಸಾಕಾಗುವುದಿಲ್ಲ. ನನ್ನ ಕೈಲಾದ ಸಹಾಯ ಮಾಡುತ್ತೇನೆ.

- ಎಲ್ಲರಿಗೂ ಧನ್ಯವಾದಗಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​
ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!