ಜನಪ್ರಿಯ ನಟ ಲಂಬು ನಾಗೇಶ್ ನಿಧನ: ಅಶ್ವಿನಿ ನಕ್ಷತ್ರ ಸೇರಿ 50ಕ್ಕೂ ಹೆಚ್ಚು ಧಾರಾವಾಹಿ'ಗಳಲ್ಲಿ ನಟನೆ

Published : Sep 02, 2017, 06:03 PM ISTUpdated : Apr 11, 2018, 12:38 PM IST
ಜನಪ್ರಿಯ ನಟ ಲಂಬು ನಾಗೇಶ್ ನಿಧನ: ಅಶ್ವಿನಿ ನಕ್ಷತ್ರ ಸೇರಿ 50ಕ್ಕೂ ಹೆಚ್ಚು ಧಾರಾವಾಹಿ'ಗಳಲ್ಲಿ ನಟನೆ

ಸಾರಾಂಶ

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ 5 ದಿನಗಳ ಹಿಂದೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು.

ಕನ್ನಡ ಸಿನಿಮಾದ ಜನಪ್ರಿಯ ಪೋಷಕ ನಟ, ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದ ಲಂಬು ನಾಗೇಶ್ ನಿಧನರಾಗಿದ್ದಾರೆ.

1992ರಲ್ಲಿ ಪೃಥ್ವಿರಾಜ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯಗೊಂಡ ಅವರು ಗಜ, ಹುಲಿಯಾ, ಪೊಲೀಸ್ ಸ್ಟೋರಿ-2, ಬಾಡಿಗಾರ್ಡ್,ಅಭಿಜಿತ್ ಸೇರಿದಂತೆ ನೂರಾರು ಚಿತ್ರಗಳಲ್ಲಿ ಪೋಷಕ ಹಾಗೂ ಖಳ  ನಟರಾಗಿ ಅಭಿನಯಿಸಿದ್ದರು. ಅಶ್ವಿನಿ ನಕ್ಷತ್ರ ಸೇರಿದಂತೆ 50 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದರು.

ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕಳೆದ 5 ದಿನಗಳ ಹಿಂದೆ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸೆ.1 ರಂದು ವಿಧವಶರಾಗಿದ್ದಾರೆ. ಹನುಮಂತ ನಗರದ ನಿವಾಸದಲ್ಲಿ ಲಂಬು ನಾಗೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು,  ಹುಟ್ಟೂರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಅಂತಿಮ ಸಂಸ್ಕಾರ ನೆರವೇರಸಲಾಗುತ್ತದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಿಲ್ಲಿ ನಟನನ್ನು ಕೈಬಿಟ್ಟು ಗೋಲ್ಡ್ ಬೆನ್ನುಬಿದ್ದ ಬಿಗ್ ಬಾಸ್ ಡಾಗ್ ಸತೀಶ್!
ಗಡದ್ದಾಗಿ ನಲ್ಲಿಮೂಳೆ ತಿಂದು ಬಿಗ್‌ಬಾಸ್‌ ಮನೆಯಲ್ಲೇ ನಿದ್ರೆಗೆ ಜಾರಿ ಗಿಲ್ಲಿ ನಟ!