ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

Published : Aug 12, 2019, 11:22 AM IST
ಸ್ಟಾರ್ ಸುವರ್ಣದಲ್ಲಿ ಮಧ್ಯಾಹ್ನದ ಮನರಂಜನೆ!

ಸಾರಾಂಶ

ಸದಾ ಕುಟುಂಬದ ಬಗ್ಗೆ, ಮನೆಯ ಬಗ್ಗೆ ಕಾಳಜಿ ವಹಿಸುವ ಹೆಣ್ಣು ಮಕ್ಕಳಿಗೆ ಅದರಲ್ಲೂ ಗೃಹಿಣಿಯರಿಗೆ ಬಿಡುವು ಸಿಗುವುದೇ ಕಷ್ಟ. ಗೃಹಿಣಿಯರ ಸಮಯ ಮತ್ತು ಪ್ರತಿ ದಿನದ ಸಣ್ಣ ಸಣ್ಣ ತ್ಯಾಗಗಳನ್ನು ಗೌರವಿಸುವ ಸಲುವಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಆಗಸ್ಟ್ 12 ರಿಂದ ಶುರುವಾಗ್ತಿದೆ ಮಧ್ಯಾಹ್ನದ ಮನರಂಜನೆ.  

ಇನ್ನು ಮುಂದೆ ಮಧ್ಯಾಹ್ನ 12 ರಿಂದ -2 ಗಂಟೆಯವರೆಗೆ ಗೃಹಿಣಿಯರು ಬೇರೆ ಯೋಚನೆಯಿಲ್ಲದೆ, ಒಂದೆರಡು ಗಂಟೆಗಳನ್ನಾದರು ತಮಗಾಗಿ ಈ ಹೊಸ ಗೆಳತಿಯರ ಜೊತೆ ಕಳೆಯಬಹುದು. 12 ಗಂಟೆಗೆ ವಿನೂತನ ಕುಕ್ಕರೀ ಶೋ ‘ಕಿಚನ್ ದರ್ಬಾರ್’, 1 ಗಂಟೆಗೆ ‘ಶೃತಿ ಸೇರಿದಾಗ’ ಮತ್ತು 1.20ಕ್ಕೆ ‘ಯಜಮಾನಿ’ ಧಾರಾವಾಹಿಗಳು ಪ್ರಸಾರವಾಗಲಿದೆ.

 

 

‘ಕಿಚನ್ ದರ್ಬಾರ್’ನಲ್ಲಿ 3 ಭಾಗ ಇರಲಿದೆ. ಮೊದಲ ಭಾಗ ‘ಅತಿಥಿ-ಅಭಿರುಚಿ’. ಇದರಲ್ಲಿ ಸೆಲೆಬ್ರಿಟಿಗಳು ತಮ್ಮ ಕೈರುಚಿ ತೋರಿಸಲಿದ್ದಾರೆ. ರಾಗಿಣಿ ದ್ವಿವೇದಿ, ಪ್ರಣೀತಾ ಸುಭಾಷ್, ಸೋನು ಗೌಡ, ಕವಿತಾ ಗೌಡ, ನೀತು, ಭಾವನಾ, ನವೀನ್ ಸಜ್ಜು ಕಾಣಿಸಿಕೊಳ್ಳಲ್ಲಿದ್ದಾರೆ.ಎರಡನೇ ಭಾಗ ‘ಭಟ್ರು ಪಾಕ’ದಲ್ಲಿ ಶೆಫ್ಸ್ ರೆಸಿಪಿ ಹಂಚಿಕೊಳ್ಳಲಿದ್ದಾರೆ. ಕರ್ನಾಟಕದ ಗಲ್ಲಿಗಲ್ಲಿಯಲ್ಲಿ ಫೇಮಸ್ ಆಗಿರುವ ಊಟ, ಚಾಟ್ಸ್ ಮತ್ತು ಸ್ನ್ಯಾಕ್ಸ್ ಪರಿಚಯ ಮೂರನೇ ಭಾಗ ‘ಗಲ್ಲಿ ರುಚಿ’ಯಲ್ಲಿ.

 

 

ಮಧ್ಯಾಹ್ನ 1 ಗಂಟೆಗೆ ಪ್ರಸಾರವಾಗುವ ಧಾರಾವಾಹಿ ‘ಶೃತಿ ಸೇರಿದಾಗ’ ಮುಗ್ಧ ಹುಡುಗಿ ಶೃತಿಯ ಕಥೆ. ಸೌಮ್ಯ, ವರುಣ್, ರಾಕೇಶ್ ಮುಖ್ಯಭೂಮಿಕೆಯಲ್ಲಿರುವ ಈ ಧಾರಾವಾಹಿಗೆ ಸುಧಾಕರ್ ನಿರ್ದೇಶನವಿದೆ. ವಿರುದ್ಧ ದಿಕ್ಕಲ್ಲಿ ಚಲಿಸ್ತಿರೋ ಪುಣ್ಯ ಮತ್ತು ಆಕಾಶ್ ಸೂರ್ಯವಂಶಿ ಜೋಡಿ ಒಂದಾದ್ರೆ ಹೇಗಿರುತ್ತೆ ಅನ್ನೋ ಕಥೆ ‘ಯಜಮಾನಿ’, ಇದೇ ಆ. 12ರಿಂದ ಮಧ್ಯಾಹ್ನ 1.30ಕ್ಕೆ ಪ್ರಸಾರವಾಗಲಿದೆ. ಸನಾತನಿ, ರಕ್ಷಿತ್ ಗೌಡ ನಟಿಸುತ್ತಿದ್ದು, ಉದಯ್ ಆದಿತ್ಯ ನಿರ್ದೇಶನವಿದೆ. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?