
ಕನ್ನಡದ ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್ (Yogaraj Bhat) ಅವರು ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಮೊದಲು 'ರಾಂಧವ' ಸಿನಿಮಾ ಮಾಡಿ ಉದ್ಯಮದಲ್ಲಿ ದೊಡ್ಡದಾಗಿ ನಿಲ್ಲೋ ಭರವಸೆ ಹುಟ್ಟಿಸಿದ್ದ ನಟ ಭುವನ್ ಪೊನ್ನಣ್ಣ (Bhuvann Ponnannaa) ಅವರು ಇದೀಗ ಹೊಸ ಸಿನಿಮಾಗೆ ಸಜ್ಜಾಗಿದ್ದಾರೆ. ಈ ಬಾರಿ ಪಕ್ಕಾ ಗೆದ್ದೇ ಗೆಲ್ಲುವ ಭರವಸೆಯೊಂದಿಗೆ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಬಂದಿರುವ ಭುವನ್, ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ ಅವರೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
'ಹಲೋ 123' ಎನ್ನುವ ವಿಶೇಷ ಕಥಾಹಂದರದ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಭುವನ್ ಜತೆಗೆ ಯೋಗರಾಜ್ ಭಟ್ ಮತ್ತು ಹರಿಕೃಷ್ಣ ಈ ಮ್ಯೂಸಿಕ್ ಜೊತೆ ವಿನೂತನ ಕಥೆಯೊಂದನ್ನ ಭುವನ್ ಮೂಲಕ ಹೇಳೋದಕ್ಕೆ ಮುಂದಾಗಿದ್ದಾರೆ. ಅದರಂತೆ, ಬುಧವಾರ ಸಂಜೆ ಹಲೋ 123 ಚಿತ್ರ ನಿರ್ಮಾಪಕ ವಿಜಯ್ ಟಾಟಾರ ಮನೆಯಂಗಳದಲ್ಲಿ ಅಧಿಕೃತ ಸ್ಕ್ರಿಪ್ಟ್ ಪೂಜೆ ಹಾಗೂ ಶೀರ್ಷಿಕೆ ಅನಾವರಣಗೊಂಡಿದೆ. ಹರ್ಷಿಕಾ ಹಾಗೂ ಭುವನ್ ಪುತ್ರಿ ತ್ರಿದೇವಿಯವ್ರ ಅಮೃತ ಹಸ್ತದಿಂದ ಚಿತ್ರಕ್ಕೆ ಚಾಲನೆ ನೀಡಿದ್ದು ವಿಶೇಷ.
ದೇವರ ಪೂಜೆಯೊಂದಿಗೆ ನಾಯಕ ಭುವನ್ ನಿರ್ದೇಶಕ ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ. ಹರಿಕೃಷ್ಣರವರಿಗೆ ಅಡ್ವಾನ್ಸ್ ಕೊಟ್ಟು ಶುಭಕೋರಿದ ನಿರ್ಮಾಪಕ ವಿಜಯ್ ಟಾಟಾ. ಒಳ್ಳೇ ದಿನ ಘಳಿಗೆ ಅನ್ನೋ ಕಾರಣಕ್ಕೆ ಸಿನಿಮಾ ಮಾತುಕತೆ ಮಾಡಿದ ಮರುದಿನವೇ ಚಿತ್ರಕ್ಕೆ ಚಾಲನೆ ನೀಡಿದ್ದು, ಉಳಿದ ಕೆಲಸಗಳು ಇಲ್ಲಿಂದ ಆರಂಭವಾಗ್ತಿವೆ. ಯೋಗರಾಜ್ ಭಟ್ 'ಯುಎಸ್' ಪ್ರವಾಸ ಹೊರಟಿದ್ದು, ವಾಪಸ್ ಬಂದ ಕೂಡ್ಲೇ ಚಿತ್ರದ ಉಳಿದ ಕೆಲಸಗಳು ಶುರುವಾಗಲಿವೆ. ಅಕ್ಟೋಬರ್ ತಿಂಗಳಲ್ಲಿ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆಯಂತೆ. ಎಲ್ಲಾ ಅಂದುಕೊಂಡಂತೆ ನಡೆದರೆ, ಹಲೋ 123 ಮುಂದಿನ ವರ್ಷ ಮಾರ್ಚ್ ವೇಳೆಗೆ ರಿಲೀಸ್ ಆಗಲಿದೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.