ಶ್ರೀಮುರಳಿ ಕಷ್ಟಕ್ಕೆ ಕೈ ಹಿಡಿದ ದರ್ಶನ್!

By Web Desk  |  First Published May 21, 2019, 12:33 PM IST

ರೋರಿಂಗ್ ಸ್ಟಾರ್ ಶ್ರೀ ಮುರಳಿ ಚಿತ್ರರಂಗದಲ್ಲಿ ಕಮ್ ಬ್ಯಾಕ್ ಮಾಡಲು ದಾಸ ದರ್ಶನ್ ಕಾರಣ. ಅಷ್ಟೇ ಅಲ್ಲದೆ ಉಗ್ರಂ ಚಿತ್ರಕ್ಕೆ ಸಾರಥಿಯಾಗಿ ನಿಂತವರು ಈ ಚಾಲೆಂಜಿಂಗ್ ಸ್ಟಾರ್. ಏನು ಇದರ ಲಿಂಕ್ ಇಲ್ಲಿದೆ ನೋಡಿ.


ಅಗಸ್ತ್ಯ-ಬಾಲ ಸ್ನೇಹ ಕಂಡು ಫ್ಲಾಟ್ ಆದವರು ಒಬ್ಬರಾ-ಇಬ್ಬರಾ? ಶತಾಗಜ ಮಹಾ ಮಹಾಕಾಯ ನರ ನರ ನರಸಿಂಹಚಾರ್ಯ ನರ ದಾಸ ದಾಸ ಉಗ್ರಂ ವೀರಂ ಎಂದು ಕೇಳಿದಾಕ್ಷಣ ಒಮ್ಮೆ ಮೈ ಜುಮ್ ಅನಿಸುವುದು ಗ್ಯಾರಂಟಿ. ಈ ಚಿತ್ರಕ್ಕೆ ಸಾರಥಿಯಾಗಿ ನಿಂತವರೇ ಚಾಲೆಂಜಿಂಗ್ ಸ್ಟಾರ್ ದರ್ಶನ್.

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

Tap to resize

Latest Videos

undefined

ಕಷ್ಟ ಎಂದಾಕ್ಷಣ ಒಮ್ಮೆ ಯೋಚಿಸದೆ ವಿಶಾಲ ಹೃದಯದಿಂದ ಸಹಾಯ ಮಾಡಲು ಮುಂದೆ ಬರುವ ನಟ ದರ್ಶನ್. ಒಂದು ಕೈಯಲ್ಲಿ ಮಾಡಿದ ಸಹಾಯ ಮತ್ತೊಂದು ಕೈಗೆ ಗೊತ್ತಾಗಬಾರದು ಎನ್ನುವುದಕ್ಕೆ ದರ್ಶನ್ ಗುಣ ಸಾಕ್ಷಿ.

'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ

ಕಷ್ಟಗಳ ದಿನಗಳನ್ನು ದಾಟಿ ಬಂದು ಕಮ್ ಬ್ಯಾಕ್ ಬೇಕೆಂದು ಕಾಯುತ್ತಿದ್ದ ಶ್ರೀಮುರುಳಿಗೆ ‘ಉಗ್ರಂ’ ಕಥೆಕೊಟ್ಟವರು ಭಾವ ಪ್ರಶಾಂತ್ ನೀಲ್. ಚಿತ್ರೀಕರಣ ಮುಗಿಸಿ ಇನ್ನೇನು ರಿಲೀಸ್ ಗೆ ರೆಡಿಯಾದ ಚಿತ್ರಕ್ಕೆ ಯಾರು ವಿತರಣೆ ನೀಡಲು ಮುಂದೆ ಬರಲಿಲ್ಲ. ಆಗ ಕಾರ್ಯಕ್ರಮವೊಂದರಲ್ಲಿ ದರ್ಶನ್ ಶ್ರೀಮುರಳಿಯನ್ನು ಭೇಟಿ ಮಾಡಿದಾಗ ತಮ್ಮ ಸಿನಿಮಾ ಕಷ್ಟವನ್ನು ಹಂಚಿಕೊಂಡಾಗ ಒಂದು ನಿಮಿಷ ಯೋಚಿಸದೇ ‘ನಿನಗ್ಯಾಕೆ ನಾನು ಇದೀನಿ ತಲೆಕೆಡಿಸಿಕೊಳ್ಳಬೇಡ. ಈ ಸಿನಿಮಾನ ನಾನೇ ರಿಲೀಸ್ ಮಾಡಿಸಿಕೊಡುತ್ತೇನೆ’ ಎಂದು ಹೇಳಿ ಬೆನ್ನಿಗೆ ನಿಂತರು.

click me!