
* ನಾನು ಯಾವುದೇ ಪಾರ್ಟಿಗಳಿಗೆ ಹೋಗುವುದಿಲ್ಲ. ಹಾಗಾಗಿ ನನಗೆ ಫ್ರೆಂಡ್ಸ್‌ಗಳು ಕಡಿಮೆ. ಹೊಸ ಸ್ನೇಹಿತರನ್ನು ಹೊಂದುವಾಗಲೂ ನಾನು ಸಾಕಷ್ಟುಯೋಚನೆ ಮಾಡುತ್ತೇನೆ. ಹಾಗಾಗಿ ನಾನು ನನಗೆ ಮತ್ತು ನನ್ನ ಸಂಬಂಧಿಗಳಿಗೆ, ಸ್ನೇಹಿತರಿಗೆ ಮಾತ್ರ ಉತ್ತರದಾಯಿ. ಇದನ್ನು ಬಿಟ್ಟು ತುಂಬಾ ಜನ ನನ್ನ ಬಗ್ಗೆ ಮಾತನಾಡುತ್ತಾರೆ. ಕಮೆಂಟ್ ಮಾಡುತ್ತಾರೆ, ಜಡ್ಜ್ ಕೂಡ ಮಾಡಿಬಿಡುತ್ತಾರೆ. ಅದು ಅವರಿಗೆ ಬಿಟ್ಟದ್ದು.
* ನಾನು ತುಂಬಾ ಜನ ಪೋಷಕರನ್ನು ಕಂಡಿದ್ದೇನೆ. ಅವರು ಮಕ್ಕಳನ್ನು ಬೆಳೆಸಲು ಸಾಕಷ್ಟುಕಷ್ಟಪಡುತ್ತಿದ್ದ ಹಾಗೆ ನನಗೆ ಅನ್ನಿಸುತ್ತಿತ್ತು. ಈಗ ನನ್ನ ಮೂರು ಮಕ್ಕಳನ್ನು ಬೆಳೆಸುವಾಗ ಅವರು ಇಷ್ಟೆಲ್ಲಾ ಕಷ್ಟಪಟ್ಟಿದ್ದರಾ ಅನ್ನಿಸುತ್ತದೆ. ಅದೂ ಅಲ್ಲದೇ ಮಕ್ಕಳನ್ನು ಬೆಳೆಸುವಾಗ ಇರುವ ಖುಷಿ ಮತ್ತೆಲ್ಲೂ ಸಿಕ್ಕುವುದಿಲ್ಲ ಎಂಬುದು ನನಗೆ ಈಗ ಅನುಭವವಾಗಿದೆ.
ಬರ್ತಡೆ ಗರ್ಲ್ ಬಗ್ಗೆ ಗೊತ್ತಿರದ 10 ಸಂಗತಿಗಳು.. ಸನ್ನಿಗೆ ಏನನ್ನ ಕಂಡ್ರೆ ಭಯ!
* ನಾನು ಸಿನಿಮಾ ಕ್ಷೇತ್ರಕ್ಕೆ ಬಂದ ಮೇಲೆ ಗೊತ್ತಾದ ಒಂದು ವಿಷಯ ಏನು ಎಂದರೆ, ಇಲ್ಲಿ ಗೆಲ್ಲಬೇಕು ಎಂದರೆ ಹಾರ್ಡ್ ವರ್ಕ್ ಇರಲೇಬೇಕು. ಆ ಹಾರ್ಡ್ ವರ್ಕ್ ಅನ್ನು ನಾವು ಮತ್ತ್ಯಾರೋ ನೋಡಲಿ, ಮೆಚ್ಚಲಿ ಎಂದು ಮಾಡಬಾರದು. ಬದಲಿಗೆ ನಮ್ಮ ಕೆಲಸವನ್ನು ಪ್ರೇಕ್ಷಕ ನೋಡಿ ಮೆಚ್ಚಬೇಕು ಎನ್ನುವುದು ನನ್ನ ಏಳು ವರ್ಷದ ಜರ್ನಿಯಲ್ಲಿ ಗೊತ್ತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.