ರೆಬೆಲ್ ಸ್ಟಾರ್ ಮನೆಯಲ್ಲಿ ಮಿ. ಅ್ಯಂಡ್ ಮಿಸಸ್ ರಾಮಚಾರಿ!

Published : May 21, 2019, 11:09 AM IST
ರೆಬೆಲ್ ಸ್ಟಾರ್ ಮನೆಯಲ್ಲಿ ಮಿ. ಅ್ಯಂಡ್ ಮಿಸಸ್ ರಾಮಚಾರಿ!

ಸಾರಾಂಶ

ನಟ ಅಂಬರೀಶ್ ಅವರ ಕನಸಿನಂತೆ ಜೆಪಿ ನಗರದಲ್ಲಿ ನಿರ್ಮಿಸಿರುವ ನೂತನ ಮನೆ ಗೃಹ ಪ್ರವೇಶ ಇತ್ತೀಚೆಗೆ ನಡೆಯಿತು. ಹಳೆ ಮನೆಯನ್ನು ಕೆಡವಿ ಹೊಸ ರೀತಿಯಲ್ಲಿ ಮನೆ ಕಟ್ಟಲಾಗಿದೆ. ಸರಳವಾಗಿ ನಡೆದ ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿ ಸೇರಿದಂತೆ ಚಿತ್ರರಂಗದ ಹಲವರು ಆಗಮಿಸಿದ್ದರು.

ಅಂಬರೀಶ್ ನಿಧನಕ್ಕೂ ಮೊದಲೇ ಅವರ ಕನಸಿನಂತೆ ಹೊಸ ಮನೆ ಕಟ್ಟುವ ಕಾರ್ಯ ಆರಂಭಗೊಂಡಿತ್ತು. ಕೊನೆ ದಿನಗಳನ್ನು ಆ ಮನೆಯಲ್ಲೆ ಕಳೆಯುವ ಬಯಕೆ ಅವರು ಹೊಂದಿದ್ದರು. ಅದೇ ಜಾಗದಲ್ಲಿದ್ದ ಹಳೆಯ ಮನೆಯಲ್ಲಿ 29 ವರ್ಷಗಳ ಕಾಲ ಅಂಬರೀಶ್ ವಾಸವಿದ್ದರು. ಬೆಂಗಳೂರಲ್ಲಿ ಲಿಫ್ಟ್ ಇರುವ ಮೊದಲ ಮನೆ ಎಂಬ ಖ್ಯಾತಿ ಅಂಬರೀಷ್ ಅವರ ಈ ಮನೆಗೆ ಇತ್ತು.

'23 ರ ಫಲಿತಾಂಶದ ಬಗ್ಗೆ ಕ್ಯೂರಿಯಾಸಿಟಿಯಿದೆ, 31 ಕ್ಕೆ ಜಾಸ್ತಿ ಟೆನ್ಷನ್ ಇದೆ' !

ಆ ಹಳೆ ಮನೆಯನ್ನು ನೆಲಸಮ ಮಾಡಿ ನೂತನ ಮನೆ ನಿರ್ಮಿಸಲಾಗಿದೆ. ಹಳೆ ಮನೆ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡ ಬಳಿಕ ಅಂಬರೀಶ್ ಗಾಲ್ಪ್ ಕೋರ್ಸ್ ಮುಂಭಾಗ ಸ್ಯಾಂಕಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದರು. ಸುಮಲತಾ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಅವರು ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಗೃಹ ಪ್ರವೇಶ ಮಾಡಿದರು. ಈ ಕಾರ್ಯಕ್ರಮಕ್ಕೆ ಕುಟುಂಬದ ಆಪ್ತರಿಗಷ್ಟೆ ಆಹ್ವಾನ ನೀಡಲಾಗಿತ್ತು. 

‘ನಿಖಿಲ್ ಎಲ್ಲಿದ್ದಿಯಪ್ಪಾ’ಗೆ ವಿಶ್ ಮಾಡಿದ ಯಶ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಖಂಡ 2 ಪ್ರೀಮಿಯರ್ ಶೋಗಳು ರದ್ದು, ನಿರ್ಮಾಪಕರಿಗೆ ಸಂಕಷ್ಟ.. ಬಾಲಯ್ಯ ಸಿನಿಮಾ ರಿಲೀಸ್ ಕಥೆಯೇನು?
ಮೋಹನ್ ಬಾಬು ಮಾಡಿದ ಸಣ್ಣ ತಪ್ಪಿನಿಂದ ಸೌಂದರ್ಯ ಪ್ರಾಣ ಕಳೆದುಕೊಂಡ್ರಾ? ನಿರ್ದೇಶಕರು ಹೇಳಿದ ಸತ್ಯವೇನು?