ಮದಗಜ ಚಿತ್ರದಲ್ಲಿ ಶ್ರೀಮುರಳಿ

Published : Sep 13, 2018, 10:07 AM ISTUpdated : Sep 19, 2018, 09:24 AM IST
ಮದಗಜ ಚಿತ್ರದಲ್ಲಿ ಶ್ರೀಮುರಳಿ

ಸಾರಾಂಶ

ಅಯೋಗ್ಯ ನಿರ್ದೇಶಕ ಮಹೇಶ್ ಚಿತ್ರಕ್ಕೆ ಧ್ರುವ ಸರ್ಜಾ ಲಭ್ಯರಿಲ

ನಿರ್ದೇಶಕ ಮಹೇಶ್ ಕುಮಾರ್ ‘ಅಯೋಗ್ಯ’ ಚಿತ್ರದ ನಂತರ ‘ಮದಗಜ’ ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಮಹೇಶ್ ಕೂಡ ಈ ಹೆಸರಿಗೆ ಧ್ರುವ ಸೂಕ್ತ ಎನ್ನುತ್ತಿದ್ದಾರೆ. ಧ್ರುವ ಮದಗಜನಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದರೆ, ಈಗ ಹೊಸ ಬೆಳವಣಿಗೆಯಲ್ಲಿ ಧ್ರುವ ಸರ್ಜಾ ಜಾಗಕ್ಕೆ ಶ್ರೀಮುರಳಿ ಬಂದಿದ್ದಾರೆ.

ಅಧಿಕೃತವಾಗಿ ಎರಡು ಚಿತ್ರಗಳಿಗೆ ಬುಕ್ ಆಗಿರುವ ಧ್ರುವ, ಆ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ‘ಪೊಗರು’ ಏನಾಗಿದೆ ಗೊತ್ತಿಲ್ಲ. ಇದರ ಜತೆಗೆ ಒಪ್ಪಿಕೊಂಡ ಉದಯ್ ಮಹ್ತಾ ನಿರ್ಮಾಣದ ಚಿತ್ರ ಯಾವಾಗ ಸೆಟ್ಟೇರತ್ತೋ ತಿಳಿಯದು. ಈ ಎರಡೂ ಸಿನಿಮಾ ಮುಗಿಯಲಿಕ್ಕೆ ಕನಿಷ್ಠ ಒಂದೂವರೆ ಅಥವಾ ಎರಡು ವರ್ಷ ಬೇಕು. ಅಲ್ಲಿಯವರೆಗೂ 'ಮದಗಜ’ ಕಾಯುತ್ತದೆಯೇ? ಬಹುಶಃ ಇಲ್ಲ. ಹಾಗಾಗಿ ‘ಮದಗಜ’ ಸೀದಾ ಮಫ್ತಿ ಅಂಗಳಕ್ಕೆ ಹೋಗುವ ಸಾಧ್ಯತೆಗಳಿವೆ.

ನಿರ್ದೇಶಕರು ಇಬ್ಬರು ಹೀರೋಗಳ  ಜತೆಯೂ ಮಾತುಕತೆ ಮಾಡಿದ್ದಾರೆ. ಡೇಟ್ಸ್ ವಿಚಾರದಲ್ಲಿ ಯಾರು ಮೊದಲು ಸಿಗುತ್ತಾರೆ ಎಂಬುದು ಅವರಿಗೂ ಗೊತ್ತಿಲ್ಲ. ಹೀಗಾಗಿ ಒಬ್ಬರನ್ನು ನಂಬಿ ಕೂರುವ ಬದಲು ‘ಮದಗಜ’ ಎನ್ನುವ ಸೂಟ್ ಆಗುವ ಶ್ರೀಮುರಳಿ ಕದ ತಟ್ಟಿದ್ದಾರೆಂಬುದು ಸದ್ಯದ ಸುದ್ದಿ. ಮಹೇಶ್ ಕುಮಾರ್ ನಿರ್ದೇಶನದ ಚೊಚ್ಛಲ ಚಿತ್ರ ‘ಅಯೋಗ್ಯ’ ಯಶಸ್ಸು ಸಾಧಿಸಿರುವುದರಿಂದ ಮಹೇಶ್ ಅವರಿಗೆ ಜಾಸ್ತಿಯೇ ಬೇಡಿಕೆ ಇದೆ. ದೊಡ್ಡ ನಿರ್ಮಾಣ ಸಂಸ್ಥೆಗಳು ಅವರಿಗೆ ಆಫರ್ ನೀಡಿವೆ ಅನ್ನುವುದು ಸುದ್ದಿ. ಹಾಗಾಗಿ ಮುಂದಿನ ಚಿತ್ರದ ಕುರಿತಾಗಿ ಕುತೂಹಲ ಗರಿಗೆದರಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆಪರೇಷನ್ ಅಲಮೇಲಮ್ಮ ಖ್ಯಾತಿಯ ನಟನ ಜೊತೆ ಕಾಣಿಸಿಕೊಂಡ ದುನಿಯಾ ವಿಜಯ್ ಪುತ್ರಿ: ಯಾಕೆ ಗೊತ್ತಾ?
ಲವ್ ಅಲ್ಲ, ಥ್ರಿಲ್ಲರ್ ಅಲ್ಲ.. ಇದು ಫ್ಯಾಂಟಸಿ + ಲಾಜಿಕ್: 45 ಬಗ್ಗೆ ಅರ್ಜುನ್ ಜನ್ಯಾ ಹೇಳಿದ್ದೇನು?