ನಾನೊಬ್ಬ ಡಿಬಾಸ್ ಫ್ಯಾನ್‌ ಆಗಿ ಹೇಳ್ತಿದ್ದೀನಿ.. ಯಶ್ Toxic ಬಗ್ಗೆ ಸೋನು ಗೌಡ ಸ್ಫೋಟಕ ಹೇಳಿಕೆ!

Published : Aug 27, 2026, 05:20 PM IST
sonu shrinivas gowda

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಸಿನಿಮಾ ಟೀಕಿಸೋರ ವಿರುದ್ಧ ಸೋನು ಶ್ರೀನಿವಾಸ್ ಗೌಡ ಕಿಡಿಕಾರಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿರೋ ಅವರು, ಟಾಕ್ಸಿಕ್ ಅರ್ಥ ಆಗಲ್ಲ ಅನ್ನೋರೆಲ್ಲ ಧಾರಾವಾಗಿ ನೋಡೋಕೆ ಲಾಯಕ್ ಎಂದು ಜರಿದಿದ್ದಾರೆ.

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' (Toxic) ನಿನ್ನೆಯಷ್ಟೇ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿರುವ ಈ ಸಿನಿಮಾ, ಮೊದಲ ದಿನವೇ ಬರೋಬ್ಬರಿ 140 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಗಳು ಹೇಳಿವೆ. ಆದರೆ, ಇಷ್ಟೆಲ್ಲಾ ಸಕ್ಸಸ್ ನಡುವೆ ಕೆಲವರು ಸಿನಿಮಾದ ಬಗ್ಗೆ ನೆಗೆಟೀವ್ ವಿಮರ್ಶೆ (Negative Review) ನೀಡುತ್ತಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈಗ ಈ ನೆಗೆಟೀವ್ ವಿಮರ್ಶಕರ ವಿರುದ್ಧ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಕೆಂಡಾಮಂಡಲವಾಗಿದ್ದಾರೆ.

ನಾನೊಬ್ಬ ಡಿಬಾಸ್ ಫ್ಯಾನ್, ಆದ್ರೆ ಇದು ಹೆಮ್ಮೆ!

ಸಾಮಾನ್ಯವಾಗಿ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ವಾರ್‌ಗಳು ನಡೆಯುತ್ತಲೇ ಇರುತ್ತವೆ. ಆದರೆ ಸೋನು ಗೌಡ ಮಾತ್ರ ವಿಭಿನ್ನವಾಗಿ ಮಾತನಾಡಿದ್ದಾರೆ. ನಾನೊಬ್ಬ ಡಿಬಾಸ್ (ದರ್ಶನ್) ಫ್ಯಾನ್ ಆಗಿ ಹೆಮ್ಮೆಯಿಂದ ಹೇಳ್ತಿದ್ದೀನಿ.. ದಯವಿಟ್ಟು ನೀವೆಲ್ಲರೂ 'ಟಾಕ್ಸಿಕ್' ಸಿನಿಮಾವನ್ನು ನೋಡಿ. ಯಶ್ ಸರ್ ಆಕ್ಟಿಂಗ್ ಅಂತೂ ಬ್ಯೂಟಿಫುಲ್ ಆಗಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳುವ ಮೂಲಕ ಯಶ್ ಸಿನಿಮಾವನ್ನು ಬೆಂಬಲಿಸಿದ್ದಾರೆ.

ದುಡ್ಡು ಇಸ್ಕೊಂಡು ನೆಗೆಟೀವ್ ರಿವ್ಯೂ ಕೊಡ್ತಿದ್ದೀರಾ?

ಸಿನಿಮಾ ನೋಡಿ ಹೊರಬಂದ ಸೋನು ಗೌಡ, ಟೀಕಾಕಾರರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಎಂಥ ಚಿಲ್ಟರೆ, ಪಲ್ಟರೆ ಅವರೆಲ್ಲಾ ಟಾಕ್ಸಿಕ್ ಬಗ್ಗೆ ನೆಗೆಟೀವ್ ರಿವ್ಯೂ ಕೊಡ್ತಿದ್ದಾರೆ. ನನಗೆ ಅನಿಸುತ್ತೆ ನೀವೆಲ್ಲಾ ದುಡ್ಡು ಇಸ್ಕೊಂಡು ಬೇಕಂತಲೇ ನೆಗೆಟೀವ್ ರಿವ್ಯೂ ಕೊಡ್ತಿದ್ದೀರಾ ಅಂತಾ. ಒಂದು ಕನ್ನಡ ಸಿನಿಮಾವನ್ನು ಯಶ್ ಅವರು ಗ್ಲೋಬಲ್ ಲೆವೆಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಬೆಂಬಲಿಸುವುದನ್ನು ಬಿಟ್ಟು ಹೀಗೆ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಧಾರಾವಾಹಿ ನೋಡೋಕೆ ಲಾಯಕ್ ನೀವೆಲ್ಲಾ!

ಸಿನಿಮಾ ಅರ್ಥವಾಗುತ್ತಿಲ್ಲ ಎಂದವರಿಗೆ ಸೋನು ಗೌಡ ಟಾಂಗ್ ನೀಡಿದ್ದಾರೆ. ಕೆಲವರು ಹೇಳ್ತಾರೆ ನನಗೆ ಮೂವಿನೇ ಅರ್ಥ ಆಗ್ತಿಲ್ಲ ಅಂತ, ಇನ್ನು ಕೆಲವರು ಅಯ್ಯೋ ಇದು ಟಾಕ್ಸಿಕ್ ಅಲ್ಲ ಅಂತಾರೆ. ಮೈ ಗಾಡ್ ಗುರೂ.. ನೀವು ಎಲ್ಲಿದ್ದೀರಾ? ಅಷ್ಟೊಂದು ನೀಟ್ ಆಗಿ ಸಿನಿಮಾ ಮಾಡಿದ್ದಾರೆ. ನಿಮಗೆ ಅದು ಅರ್ಥ ಆಗಿಲ್ಲ ಅಂದ್ರೆ ಮೋಸ್ಟ್ಲಿ ನೀವೆಲ್ಲಾ ಧಾರಾವಾಹಿ ನೋಡೋಕೆ ಮಾತ್ರ ಲಾಯಕ್ ಅನಿಸುತ್ತೆ ಎಂದು ಲೇವಡಿ ಮಾಡಿದ್ದಾರೆ.

ವಿಮರ್ಶೆ ಮಾಡುವವರ ಇಬ್ಬಂದಿ ತನವನ್ನು ಪ್ರಶ್ನಿಸಿರುವ ಸೋನು ಗೌಡ ಒಟಿಟಿಯಲ್ಲಿ ನೀವು ಎಷ್ಟು ಅಡಲ್ಟ್ ಸಿನಿಮಾಗಳನ್ನು ನೋಡ್ತೀರಾ.. ಆದ್ರೆ ಟಾಕ್ಸಿಕ್ ಸಿನಿಮಾದ ಬಗ್ಗೆ ಟೀಕೆ ಮಾಡ್ತೀರಿ. ಇದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಸದ್ಯ ಸೋನು ಶ್ರೀನಿವಾಸ್ ಗೌಡ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳು ಸೋನು ಅವರ ಮಾತಿಗೆ ಸಾಥ್ ನೀಡುತ್ತಿದ್ದಾರೆ. 'ಟಾಕ್ಸಿಕ್' ಸಿನಿಮಾ ನೆಗೆಟೀವ್ ರಿವ್ಯೂಗಳ ನಡುವೆಯೂ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸುತ್ತಿರುವುದಂತೂ ನಿಜ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Yash Toxic ಬಗ್ಗೆ ಆರ್ಯವರ್ಧನ್ ಗುರೂಜಿ ಹೇಳಿದ್ದ ಭವಿಷ್ಯ ನಿಜವಾಯ್ತಾ? ಈಗ ಭಾರೀ ಚರ್ಚೆ
ಏರ್‌ಪೋರ್ಟ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡ ‘ವಿರುಷ್ಕಾ’: ವೈರಲ್ ಆಯ್ತು ವಿರಾಟ್ ಕೈಯಲ್ಲಿದ್ದ 'ವಿಶೇಷ ರಾಖಿ'!