ಹೀಗೆ ನಡೆಯಲಿದೆ ಗಾನ ಗಾರುಡಿಗ ಎಸ್‌ಪಿಬಿ ಅಂತ್ಯಕ್ರಿಯೆ!

Published : Sep 26, 2020, 09:24 AM ISTUpdated : Sep 26, 2020, 10:09 AM IST
ಹೀಗೆ ನಡೆಯಲಿದೆ ಗಾನ ಗಾರುಡಿಗ ಎಸ್‌ಪಿಬಿ ಅಂತ್ಯಕ್ರಿಯೆ!

ಸಾರಾಂಶ

ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ ಅಂತಿಮ ವಿಧಿವಿಧಾನ| ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದ್ರಾಬಾದ್ ನಿಂದ ಪುರೋಹಿತರ ತಂಡ ಹೊರಟಿದೆ| ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಾರ್ಥಿವ ಶರೀರ ಹೂಳಲಾಗತ್ತೆ

ಚೆನ್ನೈ(ಸೆ.26) ಬಾರದ ಲೋಕಕ್ಕೆ ಪ್ರಯಾಣಿಸಿರುವ ಗಾನ ಗಾರುಡಿಗ, ಪದ್ಮ ವಿಭೂಷಣ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ಇಂದು ನಡೆಯಲಿದೆ. ತಿರುವಳ್ಳೂರು ಜಿಲ್ಲೆಯ ತಮಾರೈಪಕ್ಕಂ ಗ್ರಾಮದಲ್ಲಿರುವ ಅವರ ಫಾರ್ಮ್ ಹೌಸ್ ನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಸಾರ್ವಜನಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. 

"

ಎಸ್ ಪಿಬಿ  ಅಂತ್ಯಕ್ರಿಯೆ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿದೆ. ಈ ನಿಟ್ಟಿನಲ್ಲಿ ಅಂತಿಮ ಪೂಜಾ ವಿಧಾನಗಳನ್ನ ನೆರವೇರಿಸಲು ಹೈದ್ರಾಬಾದ್ ನಿಂದ ಪುರೋಹಿತರ ತಂಡ ಹೊರಟಿದೆ. ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಪಾರ್ಥಿವ ಶರೀರ ಹೂಳಲಾಗತ್ತೆ. ಈಗಾಗಲೇ ಗುಂಡಿ ತೆಗೆಯುವ ಕಾರ್ಯ ಆರಂಭವಾಗಿದೆ.

"

ಕಂದಾಯ ಇಲಾಖೆ‌,‌ ಪೊಲೀಸ್ ಇಲಾಖೆ, ತಿರುವಳ್ಳೂರ್ ಜಿಲ್ಲಾಡಳಿತ ಕುಟುಂಬದ ಸದಸ್ಯರ ಜೊತೆ ನಿರಂತರ ಮಾತುಕತೆ ನಡೆಸುತ್ತಿದ್ದು,  ತಮಿಳುನಾಡು ಸರ್ಕಾರದಿಂದ ಎಸ್ ಪಿಬಿಗೆ ಪೊಲೀಸ್ ಗೌರವ ಸಲ್ಲಿಸಲಾಗುತ್ತದೆ.  

ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ  ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ಅಂತಿಮ ಗೌರವ ಸಲ್ಲಿಸಲು ಆಂಧ್ರದ ಜಲ ಸಂಪನ್ಮೂಲ ಅನಿಲ್ ಕುಮಾರ್ ಆಗಮಿಸಲಿದ್ದಾರೆ

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಗಿಲ್ಲಿ ನಟ ಎಂಟರ್‌ಟೇನರ್‌ ಅಲ್ಲ, ವಿಷಕಾರಿ ಹಾವು? ಖಾಸಗಿ ಕಂಪೆನಿ HR ಹೇಳುತ್ತಿರೋದೇನು?
Bigg Boss Kannada 12: ಸೂರಜ್​ ಎದುರೇ ರಾಶಿಕಾ, ರಜತ್​ ಜೊತೆ ರೊಮಾನ್ಸ್​ ಮಾಡೋದಾ? ಛೇ ಧ್ರುವಂತ್​ಗೆ ಇದೇನಾಯ್ತು?