'ಅವನು ತುಂಬಾ ಹ್ಯಾಂಡ್‌ಸಮ್‌': ಸ್ಟಾರ್ ಹೀರೋ ಮೇಲೆ ಮನಸೋತ ತಮನ್ನಾ; ವೈರಲ್ ಆಯ್ತು ಮಿಲ್ಕಿ ಬ್ಯೂಟಿ ಮಾತು!

Published : Sep 19, 2026, 05:36 PM IST
Tamannaah Bhatia

ಸಾರಾಂಶ

‘ದಿ ವ್ಯಾನ್’ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ನಟಿ ತಮನ್ನಾ ಭಾಟಿಯಾ ತಮ್ಮ ಕೋ-ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಮನಸಾರೆ ಹೊಗಳಿದ್ದಾರೆ. ತಮ್ಮ ಎರಡು ದಶಕಗಳ ಸಿನಿ ಜರ್ನಿಯಲ್ಲಿ ಸಿದ್ಧಾರ್ಥ್‌ರಷ್ಟು ಹ್ಯಾಂಡ್‌ಸಮ್ ನಟನನ್ನು ನೋಡಿಲ್ಲ ಎಂದು ತಮನ್ನಾ ಹೇಳಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಸುಮಾರು ಎರಡು ದಶಕಗಳಿಂದ ದಕ್ಷಿಣ ಹಾಗೂ ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮ ಸೌಂದರ್ಯ ಮತ್ತು ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ತಮನ್ನಾ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ‘ದಿ ವ್ಯಾನ್‌’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿರುವ ಈ ಸಿನಿಮಾಗೆ ದೀಪಕ್ ಕುಮಾರ್ ಮಿಶ್ರಾ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟ್ರೇಲರ್ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದ್ದು, ಈ ವೇಳೆ ತಮನ್ನಾ ತಮ್ಮ ಕೋ-ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಬಗ್ಗೆ ಮಾಡಿದ ಕಾಮೆಂಟ್‌ಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ.

ತಮ್ಮ ಎರಡು ದಶಕಗಳ ಸಿನಿ ಜರ್ನಿಯಲ್ಲಿ ಸಾಕಷ್ಟು ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿರುವುದಾಗಿ ಹೇಳಿದ ತಮನ್ನಾ, ಸಿದ್ಧಾರ್ಥ್ ಮಲ್ಹೋತ್ರಾ ಅವರಷ್ಟು ಹ್ಯಾಂಡ್‌ಸಮ್ ಆಗಿರುವ ನಟನನ್ನು ಈವರೆಗೆ ನೋಡಿಲ್ಲ ಎಂದು ಹೊಗಳಿದ್ದಾರೆ. ‘ಹ್ಯಾಂಡ್‌ಸಮ್‌’ ಎನ್ನುವ ಪದಕ್ಕೆ ಸಿದ್ಧಾರ್ಥ್ ಮಲ್ಹೋತ್ರಾ ಅವರೇ ಪರಿಪೂರ್ಣ ಉದಾಹರಣೆ ಎಂಬ ರೀತಿಯಲ್ಲಿ ತಮನ್ನಾ ನೀಡಿದ ಹೇಳಿಕೆ ಟ್ರೇಲರ್ ಲಾಂಚ್‌ನಲ್ಲಿ ಗಮನ ಸೆಳೆದಿದೆ.

ಇನ್ನು ‘ದಿ ವ್ಯಾನ್‌’ ಟ್ರೇಲರ್ ನೋಡಿದರೆ ತಮನ್ನಾ ಮತ್ತು ಸಿದ್ಧಾರ್ಥ್ ನಡುವಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಕೂಡ ಗಮನ ಸೆಳೆಯುತ್ತಿದೆ. ಇಬ್ಬರ ಕಾಂಬಿನೇಷನ್ ಹೇಗಿರಲಿದೆ ಎಂಬ ಕುತೂಹಲ ಈಗಾಗಲೇ ಪ್ರೇಕ್ಷಕರಲ್ಲಿ ಮೂಡಿದೆ.

ಛಠ್ ಪೂಜೆ ಹಾಡಿನ ಬಗ್ಗೆ ಭಾವುಕರಾದ ತಮನ್ನಾ

‘ದಿ ವ್ಯಾನ್‌’ ಸಿನಿಮಾದಲ್ಲಿ ಬಿಹಾರದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಪ್ರತಿಬಿಂಬಿಸುವ ಛಠ್ ಪೂಜೆಯ ಹಿನ್ನೆಲೆಯಲ್ಲಿ ವಿಶೇಷ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಈ ಹಾಡಿನ ಬಗ್ಗೆ ಮಾತನಾಡುವಾಗ ತಮನ್ನಾ ತಮ್ಮ ವೈಯಕ್ತಿಕ ಅನುಭವವನ್ನೂ ಹಂಚಿಕೊಂಡಿದ್ದಾರೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ತಮನ್ನಾ, ಜುಹೂ ಬೀಚ್‌ನಲ್ಲಿ ಸಾವಿರಾರು ಮಹಿಳೆಯರು ಛಠ್ ಪೂಜೆ ಆಚರಿಸುವುದನ್ನು ಹಲವು ಬಾರಿ ನೋಡಿದ್ದಾಗಿ ಹೇಳಿದ್ದಾರೆ. ಆದರೆ ಈ ಆಚರಣೆಯ ಹಿಂದಿರುವ ಸಂಪ್ರದಾಯ, ಭಕ್ತಿ ಮತ್ತು ಕಠಿಣ ನಿಯಮಗಳ ಬಗ್ಗೆ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇನ್ನಷ್ಟು ಆಳವಾಗಿ ತಿಳಿದುಕೊಂಡೆ ಎಂದು ತಿಳಿಸಿದ್ದಾರೆ.

ಛಠ್ ಪೂಜೆಯಲ್ಲಿ ಮಹಿಳೆಯರು ಸುಮಾರು 36 ಗಂಟೆಗಳ ಕಾಲ ನೀರು ಕೂಡ ಸೇವಿಸದೆ ಅತ್ಯಂತ ಭಕ್ತಿಯಿಂದ ವ್ರತ ಆಚರಿಸುತ್ತಾರೆ ಎಂದು ತಮನ್ನಾ ಹೇಳಿದ್ದಾರೆ. ಈ ಆಚರಣೆಯ ವಿಶೇಷತೆ ತಮ್ಮನ್ನು ಬಹಳವಾಗಿ ಸೆಳೆದಿದೆ ಎಂದಿದ್ದಾರೆ. ಸಾಮಾನ್ಯವಾಗಿ ನಾವು ಉದಯಿಸುವ ಸೂರ್ಯನಿಗೆ ಪೂಜೆ ಸಲ್ಲಿಸುತ್ತೇವೆ. ಆದರೆ ಛಠ್ ಪೂಜೆಯಲ್ಲಿ ಅಸ್ತಮಿಸುವ ಸೂರ್ಯನಿಗೂ ಅಷ್ಟೇ ಮಹತ್ವ ನೀಡಲಾಗುತ್ತದೆ. ಈ ಸಂಪ್ರದಾಯ ತಮ್ಮನ್ನು ವಿಶೇಷವಾಗಿ ಆಕರ್ಷಿಸಿತು ಎಂದು ತಮನ್ನಾ ಹೇಳಿದ್ದಾರೆ.

ಒಂದು ರೀತಿಯ ದಿವ್ಯ ಭಾವನೆ

ಇಷ್ಟೇ ಅಲ್ಲದೆ, ಛಠ್ ಪೂಜೆಯ ಹಾಡಿನ ಚಿತ್ರೀಕರಣದ ವೇಳೆ ತಮಗೆ ವಿಭಿನ್ನವಾದ ಅನುಭವವಾಯಿತು ಎಂದು ಮಿಲ್ಕಿ ಬ್ಯೂಟಿ ಹೇಳಿಕೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ತಮ್ಮೊಳಗೆ ಯಾವುದೋ ಅತೀತ ಶಕ್ತಿ ಪ್ರವೇಶಿಸಿದಂತೆ, ಒಂದು ರೀತಿಯ ದಿವ್ಯ ಭಾವನೆಯನ್ನು ಅನುಭವಿಸಿದ್ದಾಗಿ ಅವರು ತಿಳಿಸಿದ್ದಾರೆ. ಇನ್ನು ಒಂದೆಡೆ ಸಿದ್ಧಾರ್ಥ್ ಮಲ್ಹೋತ್ರಾ ಅವರ ಲುಕ್‌ ಬಗ್ಗೆ ತಮನ್ನಾ ಮಾಡಿದ ಮೆಚ್ಚುಗೆಯ ಮಾತುಗಳು ವೈರಲ್ ಆಗಿದ್ದರೆ, ಮತ್ತೊಂದೆಡೆ ‘ದಿ ವ್ಯಾನ್‌’ ಚಿತ್ರದ ಛಠ್ ಪೂಜೆ ಹಾಡಿನ ಶೂಟಿಂಗ್ ಅನುಭವದ ಬಗ್ಗೆ ಅವರು ಹಂಚಿಕೊಂಡಿರುವ ಮಾತುಗಳು ಕೂಡ ಗಮನ ಸೆಳೆಯುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರಹೋಗೋದು ಇವರೇ? ಎಲಿಮಿನೇಷನ್‌ನಲ್ಲಿ ಹೊಸ ಟ್ವಿಸ್ಟ್‌!
Bigg Boss 13 ಮಾಡರ್ನ್​ ಮಂಜ ವಿರುದ್ಧ ಮಹಿಳಾ ಆಯೋಗಕ್ಕೆ ಪತ್ರ : ದೂರಿನಲ್ಲಿ ಕಿಚ್ಚ ಸುದೀಪ್ ಹೆಸರು