ಹುಟ್ಟುಹಬ್ಬದಂದು ಹೊಸ ಐಡಿಯಾ ಹೇಳಿ ಶಾಕ್ ಮೂಡಿಸಿದ ರಿಯಲ್ ಸ್ಟಾರ್ ಉಪೇಂದ್ರ.. ಅಂತಿಂಥ ಸೀಕ್ರೆಟ್ ಅಲ್ಲ ಇದು!

Published : Sep 19, 2026, 04:35 PM IST
Real Star Upendra

ಸಾರಾಂಶ

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯಕ್ಕೆ 'ನೆಕ್ಸ್ಟ್ ಲೆವೆಲ್' (Next Level) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಉಪ್ಪಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಹೊಸ ಉತ್ತರ ಸಿಕ್ಕಿದೆ.

ನಿನ್ನೆ, ಅಂದರೆ 18 ಸೆಪ್ಟೆಂಬರ್ 2026ರಂದು ಕನ್ನಡದ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಹುಟ್ಟುಹಬ್ಬದ ಆಚರಣೆ ನಡೆಯಿತು. ಈ ಸಂಬಂಧ ನಡೆದ ಮಾತುಕತೆಯೊಂದರಲ್ಲಿ ರಿಯಲ್ ಸ್ಟಾರ್ ಉಪ್ಪಿ ಹೊಸ ಸಂಗತಿಯೊಂದನ್ನು ಜಗತ್ತಿಗೆ ಅನಾವರಣ ಮಾಡಿದ್ದಾರೆ. ಅದು ಅಂತಿಂಥ ಸಂಗತಿಯಲ್ಲ, ಉಪ್ಪಿ ಅಭಿಮಾನಿಗಳು ಖುಷಿಯಿಂದ ಕುಣಿದು ಕುಪ್ಪಳಿಸಬೇಕಾದ ಸಂಗತಿ! ಹಾಗಿದ್ದರೆ ಅದೇನು ನೋಡಿ..

ಹೌದು, ನಟ ಉಪೇಂದ್ರ ಅವರು ತುಂಬಾ ಪ್ರಖ್ಯಾತಿ ಗಳಿಸಿರುವ ನಟ ಮತ್ತು ನಿರ್ದೇಶಕರು. 'ತರ್ಲೆ ನನ್ಮಗ' ಚಿತ್ರದಿಂದ ಶುರುವಾದ ಅವರ ಸಿನಿ ಜರ್ನಿ, ಓಂ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದು ಗೊತ್ತೇ ಇದೆ. ಬಳಿಕ ನಟ ಉಪೇಂದ್ರ ಅವರು 'ಎ' ಚಿತ್ರದ ಬಳಿಕ ಸ್ವತಃ ನಾಯಕರಾಗಿ ನಟನೆಯನ್ನೂ ಮುಂದುವರಿಸಿ ಸಕ್ಸಸ್ ಕಂಡಿದ್ದು ಈಗ ಇತಿಹಾಸ. 2024ರಲ್ಲಿ ತೆರೆಕಂಡಿದ್ದ ಉಪೇಂದ್ರ ನಟನೆ ಹಾಗೂ ನಿರ್ದೇಶನದ ಚಿತ್ರ 'ಯುಐ' ಸಾಕಷ್ಟು ಮೆಚ್ಚುಗೆ ಗಳಿಸಿತ್ತು.

ರಿಯಲ್ ಸ್ಟಾರ್ ಉಪೇಂದ್ರ ಅವರು ಸದ್ಯಕ್ಕೆ 'ನೆಕ್ಸ್ಟ್ ಲೆವೆಲ್' (Next Level) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ರಾಮ್ ನಟಿಸುತ್ತಿದ್ದಾರೆ. ಈ ಚಿತ್ರದ ಬಳಿಕ ಉಪ್ಪಿ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ಈಗ ಹೊಸ ಉತ್ತರ ಸಿಕ್ಕಿದೆ. ಅದೇನು ಗೊತ್ತಾ?

ಹೌದು, ಉಪೇಂದ್ರ ಅವರು ಸಂದರ್ಶನವೊಂದರಲ್ಲಿ ಹೇಳಿರುವಂತೆ, ಅವರೀಗ ಮತ್ತೆ ತಮ್ಮ ಹಳೆಯ ಟ್ರಾಕ್‌ಗೆ ಮರಳಲಿದ್ದಾರೆ. ಅಂದರೆ, ಓಂ, ಎ ಹಾಗೂ ಉಪೇಂದ್ರ ಸಿನಿಮಾಗಳ ಕಾಲಕ್ಕೆ ಎಂದು ಅರ್ಥೈಸಿಕೊಳ್ಳಬಹುದೇನೋ! ಸಂದರ್ಶಕರು ಕೇಳಿರುವ ಪ್ರಶ್ನೆಗೆ ಉತ್ತರಿಸುತ್ತ ಉಪೇಂದ್ರ ಅವರು, 'ನೀವು ನನಗೆ ಹಳೆಯ ನೆನಪುಗಳನ್ನು ಮತ್ತೆ ತರಿಸಿದ್ದೀರಿ. ಸದ್ಯಕ್ಕೆ ಕೈನಲ್ಲಿರುವ ನನ್ನ ಎಲ್ಲಾ ಕೆಲಸಗಳನ್ನು ಮುಗಿಸಿ ನಾನು ಮತ್ತೆ ನನ್ನ ಹಳೆಯ ಲವ್ ಟ್ರಾಕ್ ಹಾಗೂ ರೌಡಿಸಂ ಬ್ಯಾಕ್‌ಗ್ರೌಂಡ್‌ ಕಥೆಗಳ ಕಡೆಗೆ ಮರಳಲಿದ್ದೇನೆ' ಎಂದಿದ್ದಾರೆ.

ಉಪೇಂದ್ರ ಹೇಳಿರುವ ಮಾತಿನ ಅರ್ಥವು ಅವರು ಅದೇ ಹಳೆಯ ಸಿನಿಮಾಗಲನ್ನು ಮಾಡಲಿದ್ದಾರೆ ಎನ್ನುವುದಲ್ಲ. ಬದಲಿಗೆ, ಅಂದಿನ ಕಾಲದಲ್ಲಿ ಅವರ ಹೊಸತನದ ಯೋಚನಾ ಲಹರಿ ಹಾಗೂ ವಿಭಿನ್ನ ಚಿತ್ರಕಥೆ ಹಾಗೂ ಸಂಭಾಷಣೆಗಳ ದಿಕ್ಕಿಗೆ ಅವರು ಮತ್ತೆ ಮರಳಲಿದ್ದಾರೆ ಎಂದಾಗಿದೆ. ಏಕೆಂದರೆ, ಉಪೇಂದ್ರರಂಥ ಬುದ್ದಿವಂತ ನಟ-ನಿರ್ದೇಶಕರು ಸದಾ ಹೊಸತನ್ನು ಕೊಡುವ ಸಾಮರ್ಥ್ಯ ಹೊಂದಿರುತ್ತಾರೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ.

ಹೌದು, ಸದ್ಯಕ್ಕೆ ಕನ್ನಡದ ನೆಕ್ಸ್ಟ್ ಲೆವೆಲ್, ತೆಲುಗಿನ ಜಾಂಬಿ ರೆಡ್ಡಿ-2 ಸೇರಿದಂತೆ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಉಪೇಂದ್ರ, ಬಳಿಕ ಹೊಸ ಸ್ಕ್ರಪ್ಟ್‌ ರೆಡಿ ಮಾಡಲಿದ್ದಾರೆ. ಅಂದು ಓಂ, ಉಪೇಂದ್ರ, ಶ್‌, ಎ ಸಿನಿಮಾಗಳ ಮೂಲಕ ಸೃಷ್ಟಿಸಿದ್ದ ಇತಿಹಾಸವನ್ನು ಮತ್ತೆ ಸೃಷ್ಟಿಸಲಿದ್ದಾರೆ. ಇದನ್ನು ಸ್ವತಃ ನಿನ್ನೆ ತಮ್ಮ ಹುಟ್ಟಹಬ್ಬದ ಶುಭ ಸಮಯದಲ್ಲಿ ಸ್ವತಃ ಉಪೇಂದ್ರ ಅವರು ಹೇಳಿದ್ದಾರೆ. ಉಪ್ಪಿಯ ಈ ಮಾತು ಕೇಳಿ ರಿಯಲ್ ಸ್ಟಾರ್ ಫ್ಯಾನ್‌ಗಳಿಗೆ 'ಆಕಾಶಕ್ಕೆ ಮೂರೇ ಗೇಣು' ಎಂಬಷ್ಟು ಖುಷಿಯಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಸಿಟಿ ಲೈಟ್ಸ್' ಜೀವನದಲ್ಲಿ ಹುಷಾರಾಗಿ ಇರಬೇಕು: ಬೀದಿ ದೀಪ ಅಯ್ಯೋ ಪಾಪ ಬದುಕು ಶಾಪ!
ಹಳ್ಳಿಯಲ್ಲಿ ಶಾಲೆಯಿಲ್ಲ, ಮನುಷ್ಯರ ಅನಾಹುತಕ್ಕೆ ಪ್ರಾಣಿಗಳು ಹೊಣೆ: ಹೇಗಿದೆ 'ವಾರಿಯರ್' ಸಿನಿಮಾ?