ಲಾಕ್‌ಡೌನ್ ಆರಂಭವಾದಾಗಿನಿಂದ ಕಾರ್ಮಿಕರಿಗೆ, ಬಡ ಜನರಿಗೆ ಊರು ಸೇರಲು ವಿಶೇಷ ವಿಮಾನ, ಬಸ್ ವ್ಯವಸ್ಥೆ ಮಾಡಿ ರಿಯಲ್ ಹಿರೋ ಆದ ಖ್ಯಾತ ಖಳ ನಟ ಸೋನು ಇದೀಗ ಇನ್ನೊಂದು ಮಾನವೀಯ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.
ಲಾಕ್‌ಡೌನ್ ಆರಂಭವಾದಾಗಿನಿಂದ ಕಾರ್ಮಿಕರಿಗೆ, ಬಡ ಜನರಿಗೆ ಊರು ಸೇರಲು ವಿಶೇಷ ವಿಮಾನ, ಬಸ್ ವ್ಯವಸ್ಥೆ ಮಾಡಿ ರಿಯಲ್ ಹಿರೋ ಆದ ಖ್ಯಾತ ಖಳ ನಟ ಸೋನು ಇದೀಗ ಇನ್ನೊಂದು ಮಾನವೀಯ ಕೆಲಸದ ಮೂಲಕ ಸುದ್ದಿಯಲ್ಲಿದ್ದಾರೆ.
ಕೆಲಸ ಕಾರ್ಯವಿಲ್ಲದ ಸಂದರ್ಭ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್‌ಗಳ ಸ್ಥಿತಿ ಹೇಗಿರಬಹುದು..? ಡ್ಯಾನ್ಸ್ ಮೂಲಕವೇ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಸಿನಿ ಕಲಾವಿದರಿಗೆ ಸಿನಿಮಾ ಇಲ್ಲದೆ ಆದಾಯ ನಿಂತಂತಾಗಿದೆ. ಇದನ್ನು ಅರಿತುಕೊಂಡು ಸೋನು ನೂದ್ ನೆರವಾಗಿದ್ದಾರೆ.
ಕಾರ್ಮಿಕರ ನೆರವಿಗೆ ನಿಂತ ಸೋನು ಸೂದ್‌ಗೆ ಪೊಲೀಸರ ಬ್ರೇಕ್!
ಬಾಲಿವುಡ್ ಫೇಮಸ್ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ನೇಹಲ್ ಕಾನೋಜಿಯ ಇತ್ತೀಚೆಗೆ ಇಂಟರ್‌ವ್ಯೂ ಒಂದರಲ್ಲಿ ಮಾತನಾಡಿ ಈ ವಿಚಾರ ತಿಳಿಸಿದ್ದಾರೆ. ಬ್ಯಾಕ್‌ಗ್ರೌಂಡ್‌ನಲ್ಲಿ ಡ್ಯಾನ್ಸ್ ಮಾಡುವ ಸುಮಾರು 100 ಕುಟುಂಬಗಳಿಗೆ ಸೋನು ಸೂದ್ ರೇಷನ್ ಕಿಟ್ ಪೊದಗಿಸಿರುವುದಾಗಿ ಆಕೆ ತಿಳಿಸಿದ್ದಾರೆ.
ಅತ್ತ ಸೂದ್ ಟೀಕಿಸಿದ ರಾವತ್, ಹೂಗುಚ್ಛ ನೀಡಿ ಗೌರವಿಸಿದ ಠಾಕ್ರೆ!
ನಾನು ಸೋನು ಅವರಿಗೆ ಮೆಸೇಜ್ ಮಾಡಿದ್ದೆ. ತಕ್ಷಣವೇ ರಿಪ್ಲೈ ಬಂತು. ರೇಷನ್ ಕುರಿತಾಗಿ ತಮ್ಮದೇ ತಂಡದ ಸದಸ್ಯ ಕರೆ ಮಾಡಿ ಮಾತನಾಡುವುದಾಗಿ ಸೋನು ಭರವಸೆ ನೀಡಿದ್ದರು.
ಮರುದಿನವೇ ನನಗೆ ಕರೆ ಬಂತು ರೇಷನ್ ತೆಗೆದುಕೊಳ್ಳುವಂತೆ ಹೇಳಿದರು ಎಂದು ಅವರು ಹೇಳಿದ್ದಾರೆ. ನನಗೆ ಮಾತ್ರವಲ್ಲದೇ ಇನ್ನೂ 100 ಆಹಾರ ಕಿಟ್‌ಗಳನ್ನು ನೀಡಿದ್ದು, ನಾನದನ್ನು ಸಹುದ್ಯೋಗಿಗಳಿಗೂ ಹಂಚಿದ್ದೇನೆ ಎಂದು ಆಕೆ ಹೇಳಿದ್ದಾರೆ.