
ಸಂದೀಪ್ ಸಿಂಗ್, ಸುಶಾಂತ್ ಸಿಂಗ್ ರಜಪೂತ್ ಹಾಗೂ ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಮೂವರು ಕ್ಲೋಸ್ ಹಾಗೂ ಬೆಸ್ಟ್ ಫ್ರೆಂಡ್ಸ್ ಆಗಿದ್ದವರು. ಸುಶಾಂತ್ ಆತ್ಮಹತ್ಯೆ ನಂತರ ಪ್ರತಿ ಕ್ಷಣವೂ ಸುಶಾಂತ್ ಕುಟುಂಬದವರ ಬೆನ್ನೆಲುಬಾಗಿ ನಿಂತಿರುವುದು ಪತ್ರಕರ್ತ ಹಾಗೂ ನಿರ್ದೇಕನಾಗಿ ಗುರುತಿಸಿಕೊಂಡಿರುವ ಸಂದೀಪ್ ಸಿಂಗ್.
ಸಲ್ಮಾನ್ ಖಾನ್ 'Being Human'ಸ್ಟೋರ್ ಮುಂದೆ ಧರಣಿ ಕುಳಿತ ಸುಶಾಂತ್ ಫ್ಯಾನ್ಸ್!
ಬಾಲಿವುಡ್‌ನ ಖ್ಯಾತ ಬನ್ಸಾಲಿ ಪ್ರೊಡಕ್ಷನ್ಸ್ ಜತೆ ಕೆಲಸ ಮಾಡುತ್ತಿರುವ ಸಂದೀಪ್ ಆಪ್ತ ಗೆಳೆಯ ಸುಶಾಂತ್‌ನನ್ನು ಕಳೆದುಕೊಂಡ ಶಾಕ್‌ನಲ್ಲಿದ್ದರೂ, ಇವೆಲ್ಲವುದಕ್ಕೂ ಕಾರಣವಾದವರನ್ನು ಸುಮ್ಮನೆ ಬಿಡಲಾರೆ, ಎಂದು ಪ್ರತಿಕ್ಷಣವೂ ಹೋರಾಡುತ್ತಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸುಶಾಂತ್ ಹಾಗೂ ಅಂಕಿತಾಳ ಜತೆ ಕಳೆದ ಕ್ಷಣಗಳನ್ನು ಸೀರೀಸ್ ರೀತಿಯಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅದರಲ್ಲಿ ಅಂಕಿತಾಗೆ ಪತ್ರದ ರೀತಿಯಲ್ಲಿ ಬರೆದಿರುವ ಸಾಲುಗಳು ತುಂಬಾ ವೈರಲ್ ಆಗುತ್ತಿದೆ.
'ಡಿಯರ್ ಅಂಕಿತಾ, ದಿನ ಕಳೆಯುತ್ತಿದ್ದಂತೆ ನನಗೆ ಕಾಡುತ್ತಿರುವ ಒಂದೇ ನೋವು ನಾವು ಸುಶಾಂತ್‌ನನ್ನು ಉಳಿಸಿಕೊಳ್ಳಬಹುದಿತ್ತು ಎಂದು. ನಾವು ಬೇಡಿಕೊಂಡಿದ್ದರೆ ಅವನು ಮಾತು ಕೇಳುತ್ತಿದ್ದ. ಬ್ರೇಕಪ್ ಮಾಡಿಕೊಂಡಾಗಲೂ, ನೀನು ಆತನ ಖುಷಿ ಹಾಗೂ ಯಶಸ್ಸನ್ನು ಬಯಸಿದವಳು. ನಿನ್ನದು ಪರಿಶುದ್ಧ ಪ್ರೀತಿ. ಆತನಿಗೆ ವಿಶೇಷವಾದದ್ದು. ಈಗಲೂ ನಿನ್ನ ಮನೆಯ ನೇಮ್ ಬೋರ್ಡ್‌ನಲ್ಲಿ ಸುಶಾಂತ್ ಹೆಸರು ಇರುವುದನ್ನು ನೋಡಿರುವೆ,' ಎಂದು ಬರೆದಿದ್ದಾರೆ.
'ಇವತ್ತಿಗೂ ನಾನು ನೀವಿಬ್ಬರು ಫಾರ್ ಎವರ್ ಜೋಡಿ ಎಂದೇ ಭಾವಿಸಿರುವೆ. ನಿಮ್ಮದು ನೈಜ ಪ್ರೀತಿ. ನಿಮ್ಮ ಜೊತೆ ಕಳೆದ ಕ್ಷಣಗಳು ಈಗ ನನ್ನ ಮನಸ್ಸಿಗೆ ತುಂಬಾ ಕಾಡುತ್ತಿವೆ. ಹೇಗೆ ಆ ಕ್ಷಣಗಳು ಮರಳಿ ತರಲು ಸಾಧ್ಯ? ನಾವು ಮೂವರು ಮತ್ತೆ ಒಟ್ಟಾಗುವುದು ಯಾವಾಗ? ನಿನಗೆ ಜ್ಞಾಪಕ ಇದ್ಯಾ ಸುಶಾಂತ್ ನನ್ನ ತಾಯಿ ಮುಂದೆ ಹೇಗೆ ಪುಟ್ಟ ಹುಡುಗನಂತೆ ಮಟನ್ ಕರಿ ಮಾಡಿಕೊಡಿ ಎಂದು ಕೇಳಿದ್ದ? ನನಗೆ ಗೊತ್ತು ನಿನ್ನಿಂದ ಮಾತ್ರ ಸುಶಾಂತ್‌ನನ್ನು ಕಾಪಾಡಲು ಸಾಧ್ಯವಿದ್ದದ್ದು. ನೀವಿಬ್ಬರು ಮದುವೆಯಾಗಬೇಕು ಎಂಬುದು ನನ್ನ ಆಸೆಯಾಗಿತ್ತು. ನೀನೇ ಅವನಿಗೆ ಗರ್ಲ್‌ಫ್ರೆಂಡ್, ನೀನೇ ಬೆಸ್ಟ್ ಹೆಂಡತಿ, ಅವನ ಅಮ್ಮ ಹಾಗೂ ಅವನ ಪ್ರಪಂಚ. ಐ ಲವ್ ಯೂ ಅಂಕಿತಾ. ನಿನ್ನಂತ ಅದ್ಭುತ ವ್ಯಕ್ತಿಯನ್ನು ನಾನು ಕಳೆದುಕೊಳ್ಳಲು ಎಂದೂ ಬಯಸುವುದಿಲ್ಲ' ಎಂದು ಸಂದೀಪ್ ಸಿಂಗ್ ಬರೆದುಕೊಂಡಿದ್ದಾರೆ.
ಭಾವೀ ಪತ್ನಿ ವಿಚಾರಣೆ:
ಒಂದೆಡೆ ಅಂಕಿತಾರೊಂದಿಗೆ ಸಂಬಂಧ ಕಡಿದುಕೊಂಡಿದ್ದ ಸುಶಾಂತ್, ರಿಯಾ ಚಕ್ರವರ್ತಿಯೊಂದಿಗೆ ನವೆಂಬರ್‌ನಲ್ಲಿ ಸಪ್ತಪದಿ ತುಳಿಯು ಸಿದ್ಧರಾಗಿದ್ದರು ಎನ್ನಲಾಗಿದೆ. ಲಾಕ್‌ಡೌನ್ ಸಮಯದಲ್ಲಿಯೂ ಸುಶಾಂತ್ ಮನೆಯಲ್ಲಿಯೇ ಕಾಲ ಕಳೆದ ರಿಯಾ, ಎಂಎಸ್ ಧೋನ್, ಆ್ಯನ್ ಅನ್‌ಟೋಲ್ಡ್ ಸ್ಟೋರಿಯ ಹೀರೋ ಸುಶಾಂತ್ ನೇಣಿಗೆ ಕೊರಳೊಡ್ಡುವ ಕೆಲವು ದಿನಗಳ ಮುಂಚೆ, ಜಗಳವಾಡಿ ಬೇರೆಯಾಗಿದ್ದರು ಎನ್ನಲಾಗುತ್ತಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಆತ್ಮಹತ್ಯೆ ಸಂಬಂಧ ವಿಚಾರಣೆ ತೀವ್ರಗೊಳಿಸಿರುವ ಮುಂಬೈ ಪೊಲೀಸರು, ನಟನ ಗೆಳತಿ ರಿಯಾ ಚಕ್ರವರ್ತಿಯಿಂದ ಮಹತ್ವದ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
'ಸುಶಾಂತ್ ಹಾಗೂ ನಾನು ನವೆಂಬರ್‌ನಲ್ಲಿ ವಿವಾಹ ಮಾಡಿಕೊಳ್ಳಲು ಯೋಚಿಸಿದ್ದೆವು. ಇಬ್ಬರೂ ಜತೆಗೂಡಿ ಆಸ್ತಿಯಲ್ಲಿ ಹಣ ಹೂಡಿಕೆ ಸಂಬಂಧ ಚರ್ಚಿಸಿದ್ದೆವು. ಸುಶಾಂತ್ ನಿವಾಸದಲ್ಲೇ ನಾವಿಬ್ಬರೂ ಒಟ್ಟಿಗಿದ್ದೆವು. ಜಗಳವಾಗಿದ್ದರಿಂದ ಅವರಿಂದ ದೂರವಾಗಿದ್ದೆ. ಆದಾಗ್ಯೂ ಇಬ್ಬರೂ ಪರಸ್ಪರ ಫೋನ್ ಹಾಗೂ ಸಂದೇಶಗಳ ಮೂಲಕ ಸಂಪರ್ಕದಲ್ಲಿದ್ದೆವು. ಪ್ರತಿ ರಾತ್ರಿ ನಿದ್ರೆಗೆ ಜಾರುವ ಮುನ್ನ ಸುಶಾಂತ್ ಕರೆ ಮಾಡುತ್ತಿದ್ದ. ಹಾಗೇ ಮಾಡಿದ ಕೊನೆಯ ವ್ಯಕ್ತಿ ನಾನಾಗಿದ್ದೆ,' ಎಂದು ರಿಯಾ 9 ತಾಸುಗಳ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ನಡುವೆ ಸುಶಾಂತ್ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಲು ವೃತ್ತಿ ಮತ್ಸರ ಮತ್ತು ಬಾಲಿವುಡ್‌ನ ಒತ್ತಡ ಕಾರಣ ಎಂಬ ಆರೋಪಗಳ ಬೆನ್ನಲ್ಲೇ, ಸುಶಾಂತ್ ಜೊತೆ ಮಾಡಿಕೊಂಡ ಒಪ್ಪಂದಗಳ ಕುರಿತಾಗಿ ಮಾಹಿತಿ ನೀಡುವಂತೆ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ಯಶ್‌ರಾಜ್ ಫಿಲಮ್ಸ್‌ಗೆ ಪೊಲೀಸರು ಸೂಚಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.