
ಮುಂಬೈ: ಬಾಲಿವುಡ್ನಲ್ಲಿ ಅನೇಕ ನಟಿಯರು ತಮ್ಮ ವೈಯಕ್ತಿಕ ಜವಾಬ್ದಾರಿಗಳ ಜೊತೆಗೇನೇ ತಮ್ಮ ಕೆಲಸವನ್ನೂ ಅಷ್ಟೇ ಶ್ರದ್ಧೆಯಿಂದ ನಿರ್ವಹಿಸಿದ್ದಾರೆ. ಅವರಲ್ಲಿ ನಟಿ ಆಲಿಯಾ ಭಟ್ ಒಬ್ಬರು. ಅವರು ತಮ್ಮ ಗರ್ಭಾವಸ್ಥೆಯಲ್ಲಿಯೂ ಕೆಲಸ ಮಾಡುವುದನ್ನು ಮುಂದುವರೆಸಿದರು ಮತ್ತು ಅವರ ಹಾಲಿವುಡ್ ಚಿತ್ರ "ಹಾರ್ಟ್ ಆಫ್ ಸ್ಟೋನ್" ಚಿತ್ರೀಕರಣವನ್ನೂ ಸಹ ಮುಂದುವರೆಸಿದರು. ಗರ್ಭಿಣಿಯಾಗಿದ್ದಾಗ, ಕೆಲಸ ಮಾಡುವುದೇ ಹೆಚ್ಚು ಎನ್ನುವ ಕಾಲಘಟ್ಟದಲ್ಲಿ ಸಿನಿಮಾ ಶೂಟಿಂಗ್ ಮಾಡುವುದು ಎಂದರೆ ಸುಲಭವೇನಲ್ಲ. ಅದನ್ನು ನಿಭಾಯಿಸಿರುವ ಕೆಲವು ಮಹಿಳೆಯರು ಇದ್ದಾರೆ. ಅವರಲ್ಲಿ ಒಬ್ಬರು ಆಲಿಯಾ ಭಟ್. ಆದರೆ ಕುತೂಹಲದ ವಿಷಯವೊಂದು ಇದೀಗ ರಿವೀಲ್ ಆಗಿದೆ. ಅದು ಅವರ ಅಮ್ಮನ ಬಗ್ಗೆ.
ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಕೂಡ ಬಾಲಿವುಡ್ ನಟಿ. ಕೆಲಸದ ಮೇಲಿನ ಶ್ರದ್ಧೆಯನ್ನು ಆಲಿಯಾ ತಮ್ಮ ಅಮ್ಮನಿಂದಲೇ ಬಳುವಳಿ ಪಡೆದಿದ್ದಾರೆ ಎನ್ನಲಾಗುತ್ತದೆ. ಏನೆಂದರೆ ತಾಯಿ ಸೋನಿ ಅವರು, ತಮ್ಮ ಎರಡೂ ಗರ್ಭಾವಸ್ಥೆಯಲ್ಲಿಯೂ ಚಿತ್ರೀಕರಣವನ್ನು ಮುಂದುವರೆಸಿದ್ದರು. ಆದರೆ ಅವರು ಇದೀಗ ಶಾಕಿಂಗ್ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ.. ಅದೇನೆಂದರೆ, ಆಲಿಯಾ ಭಟ್ ತಮ್ಮ ಗರ್ಭದಲ್ಲಿ ಇದ್ದಾಗ, ಗರ್ಭಿಣಿ ಎನ್ನುವುದು ತಿಳಿಯದೇ ಸಿನಿಮಾ ಒಂದಕ್ಕಾಗಿ ದಿನಕ್ಕೆ 100 ಸಿಗರೆಟ್ ಸ್ಮೋಕ್ ಮಾಡಿರುವ ಶಾಕಿಂಗ್ ವಿಷ್ಯ ಅದಾಗಿದೆ.
1993ರಲ್ಲಿ ನಟಿ ಸೋನಿ ಅವರು ಗರ್ಭಿಣಿಯಾಗಿದ್ದಾಗ "ಗುಮ್ರಾ" ಚಿತ್ರೀಕರಣ ಮಾಡುತ್ತಿದ್ದರು. ಆಗ ಅವರ ಹೊಟ್ಟೆಯಲ್ಲಿ ಇದ್ದುದು ಆಲಿಯಾ ಭಟ್. ಸಿನಿಮಾಕ್ಕಾಗಿ ಸೋನಿ ಅವರು ಧೂಮಪಾನ ದೃಶ್ಯವನ್ನು ಮಾಡಬೇಕಾಗಿತ್ತು. ಆ ಒಂದು ದೃಶ್ಯದ ಚಿತ್ರೀಕರಣದ ಸಮಯದಲ್ಲಿ, ಅವರು ಒಂದೇ ದಿನದಲ್ಲಿ ಸುಮಾರು 100 ಸಿಗರೇಟ್ ಸೇದಿದ್ದರು ಎಂದು ನಟಿ ಬಹಿರಂಗಪಡಿಸಿದರು. ಆಶ್ಚರ್ಯಕರವೆಂದರೆ, ಆ ಸಮಯದಲ್ಲಿ ಅವರು ಗರ್ಭಿಣಿ ಎಂದು ಅವರಿಗೇ ತಿಳಿದಿರಲಿಲ್ಲವಂತೆ! "ನಾನು ಆ ಧೂಮಪಾನ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೆ, ಮತ್ತು ನಾನು ದಿನಕ್ಕೆ ಸುಮಾರು 100 ಸಿಗರೇಟ್ ಸೇದುತ್ತಿದ್ದೆ. ಆ ಸಮಯದಲ್ಲಿ ನಾನು ಗರ್ಭಿಣಿ ಎಂದು ನನಗೆ ತಿಳಿದಿರಲಿಲ್ಲ. ನಾನು ಧೂಮಪಾನಿ ಅಲ್ಲ, ಆದರೆ ಅದರ ನಂತರ, ನನಗೆ ಸಿಗರೇಟ್ ಹಂಬಲ ಶುರುವಾಯಿತು. ಆಲಿಯಾ ಗರ್ಭಿಣಿಯಾಗಿದ್ದಾಗ ನೇಣು ಬಿಗಿದುಕೊಳ್ಳುವ ದೃಶ್ಯವನ್ನೂ ಮಾಡಿದ್ದೇನೆ" ಎಂದು ಸೋನಿ ಹೇಳಿದರು.
ಇದರ ನಂತರ, ಚಿತ್ರೀಕರಣದಲ್ಲಿ ದೀರ್ಘ ವಿರಾಮವಿತ್ತು. ಆ ಸಮಯದಲ್ಲಿ ತಾವು ಗರ್ಭಿಣಿ ಎನ್ನುವುದು ತಿಳಿದಿತ್ತು. ಅದಾದ ಬಳಿಕ ಸುಮಾರು ಐದು ತಿಂಗಳ ನಂತರ ನಾನು ಸೆಟ್ಗೆ ಹಿಂತಿರುಗಿದಾಗ, ನನ್ನ ಹೊಟ್ಟೆ ಕಾಣಿಸಬಾರದು ಎಂದು ಅದೇ ರೀತಿಯ ಡ್ರೆಸ್ ಹಾಕಿಕೊಂಡು ಶೂಟಿಂಗ್ ಮುಂದುವರೆಸಬೇಕಾಯಿತು ಎಂದಿದ್ದಾರೆ.
ಆಲಿಯಾ ಅವರ ಎರಡನೆಯ ಪುತ್ರಿ. ಸೋನಿ ಅವರು ತಮ್ಮ ಮೊದಲ ಗರ್ಭಾವಸ್ಥೆಯಲ್ಲಿಯೂ ಅರ್ಥಾತ್ 1986 ರಲ್ಲಿ "ಬುನಿಯಾದ್" ಟಿವಿ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಸೋನಿ ರಜ್ದಾನ್ ಮತ್ತು ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಏಪ್ರಿಲ್ 20, 1986 ರಂದು ವಿವಾಹವಾದರು. ಅವರು ಮಹೇಶ್ ಭಟ್ ಅವರ 1984 ರ ಚಲನಚಿತ್ರ "ಸಾರಾಂಶ್" ಸಮಯದಲ್ಲಿ ಭೇಟಿಯಾದರು, ಇದರಲ್ಲಿ ಸೋನಿ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಅವರ ಮದುವೆಯ ನಂತರ, ಅವರು ಇಬ್ಬರು ಹೆಣ್ಣುಮಕ್ಕಳಿಗೆ ಪೋಷಕರಾದರು. ಅವರ ಮೊದಲ ಮಗಳು, ಶಾಹೀನ್ ಭಟ್, 1988 ರಲ್ಲಿ ಜನಿಸಿದರು, ಆದರೆ ಆಲಿಯಾ ಭಟ್, 1993 ರಲ್ಲಿ ಜನಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.