ಕ್ಯಾನ್ಸರ್‌ ಚಿಕಿತ್ಸೆ ಬಳಿಕ ಮುಂಬೈಗೆ ಮರಳಿದ ನಟಿ ಸೋನಾಲಿ ಬೇಂದ್ರೆ

Published : Dec 03, 2018, 10:21 AM IST
ಕ್ಯಾನ್ಸರ್‌ ಚಿಕಿತ್ಸೆ ಬಳಿಕ ಮುಂಬೈಗೆ ಮರಳಿದ ನಟಿ ಸೋನಾಲಿ ಬೇಂದ್ರೆ

ಸಾರಾಂಶ

ಜುಲೈನಲ್ಲಿ ಕ್ಯಾನ್ಸರ್‌ ಚಿಕಿತ್ಸೆಗೆಂದು ನ್ಯೂಯಾರ್ಕ್‌ಗೆ ತೆರಳಿದ್ದ ಬಾಲಿವುಡ್ ನಟಿ ಸೊನಾಲಿ ಬೇಂದ್ರೆ ಮುಂಬೈಗೆ ಮರಳಿದ್ದಾರೆ.

ಮುಂಬೈ[ಡಿ.03]: ನ್ಯೂಯಾರ್ಕ್ನಲ್ಲಿ ಕಳೆದ ಜುಲೈನಿಂದ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ನಟಿ ಸೋನಾಲಿ ಬೇಂದ್ರೆ ಮುಂಬೈನಲ್ಲಿರುವ ತಮ್ಮ ನಿವಾಸಕ್ಕೆ ಹಿಂದಿರುಗಿದ್ದಾರೆ. ತಾವಿನ್ನೂ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದು ಖುಷಿ ತಂದಿದೆ ಎಂದು ಸೋನಾಲಿ ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಪೋಟೋ ಹಾಕಿರುವ ಸೋನಾಲಿ, ಕಾಯಿಲೆಯ ವಿರುದ್ಧ ತಾವು ಹೋರಾಡಿದ್ದು ಹೇಗೆ ಎಂಬುದನ್ನು ಬರೆದುಕೊಂಡಿದ್ದಾರೆ. ‘ನಾನು ಹೈ ಗ್ರೇಡ್‌ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಿದ್ದೇನೆ. ಇಂಥದ್ದೊಂದು ಕಾಯಿಲೆ ಇದೆಯೆಂದು ಗೊತ್ತಾಗಿದ್ದೇ ಅನಿರೀಕ್ಷಿತ. ಅಲ್ಪ ಪ್ರಮಾಣದ ನೋವಿಗಾಗಿ ಪರೀಕ್ಷೆ ನಡೆಸಿದಾದ ಕ್ಯಾನ್ಸರ್‌ ಇರುವುದು ಪತ್ತೆಯಾಯಿತು. ನನ್ನ ಕುಟುಂಬ ಸದಸ್ಯರು, ಸ್ನೇಹಿತರು ನನ್ನ ಜೊತೆಗಿದ್ದು ನನ್ನ ಬೆಂಬಲಕ್ಕೆ ನಿಂತರು. ಈ ಹೋರಾಟ ಇನ್ನೂ ಕೊನೆಗೊಂಡಿಲ್ಲ. ಆದರೆ, ಮಧ್ಯಂತರ ಅವಧಿಗೆ ಮನೆಗೆ ಮರಳಿರುವುದು ಸಂತಸ ತಂದಿದೆ’ ಎಂದು ಸೋನಾಲಿ ಬರೆದುಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಹೀಗಿತ್ತು ನೋಡಿ Rashmika Mandanna 2025ನೇ ವರ್ಷ…. ತಂಗಿ ಜೊತೆಗಿನ ಸೆಲ್ಫಿ ಭಾರಿ ವೈರಲ್
ಬಾಯ್​ಫ್ರೆಂಡ್​ ಎದುರೇ ಮಾಜಿ ಹುಡುಗನಿಗೆ ಲೊಚ ಲೊಚ ಕಿಸ್​ ಕೊಟ್ಟ ಸ್ಟಾರ್​ ನಟಿ! ಕಕ್ಕಾಬಿಕ್ಕಿ ಗೆಳೆಯ- ವಿಡಿಯೋ ವೈರಲ್